0 Shares 225 Views
00:00:00
18 Jan

ನಿಮ್ಮ ಹೆಂಡತಿಯ ಮಾತುಗಳ ಅಸಂಕೇತಿಕರಣವು ಅತಿ ಮುಖ್ಯವಾದುದು ಏಕೆ?

November 13, 2017
225 Views

ತಮ್ಮ ಹೆಂಡತಿ ಹೇಳುವುದನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ ಎಂದು ಬಹುತೇಕ ಗಂಡಂದಿರು ಒಪ್ಪಿಕೊಳ್ಳುತ್ತಾರೆ. ನೀವು ಅವರನ್ನು ದೂಷಿಸಲು ಸಾಧ್ಯವಿಲ್ಲ. ಕೊನೆಗೂ, ಪುರುಷ ಮತ್ತು ಮಹಿಳೆ ಅವರಿಬ್ಬರೂ ವಿಭಿನ್ನ ರೀತಿಯ ಮಾನವರಾಗಿದ್ದಾರೆ. ಅವರು ಭಿನ್ನವಾಗಿ ಆಲೋಚಿಸುತ್ತಾರೆ. ಹಾಗಾಗಿ, ತನ್ನ ಮನದನ್ನೆ ಏನು ಹೇಳುತ್ತಿದ್ದಾಳೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ನಿಜಕ್ಕೂ ಪುರುಷನಿಗೆ ಕಠಿಣವಾಗಿ ಇರಬಹುದು. ಆದರೆ, ಈ ಕೆಳಗಿನ ಕಾರಣಗಳಿಗಾಗಿ ಆಕೆಯ ಮಾತುಗಳನ್ನು ಅಸಂಕೇತಿಕರಿಸುವ ಕಲೆಯನ್ನು ಅವನು ಕಲಿಯಲೇ ಬೇಕಾಗುತ್ತದೆ.

  • ಆಕೆಯ ನಿರೀಕ್ಷೆಗಳೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು :

ನೀವು ಅರ್ಥಮಾಡಿಕೊಳ್ಳಬೇಕಾದ ಒಂದು ಅಂಶವೇನೆಂದರೆ, ನಿಮ್ಮ ಹೆಂಡತಿಯು ಪರಕೀಯ ಭಾಷೆಯೊಂದನ್ನು ಮಾತನಾಡುತ್ತಿದ್ದಾಳೆ ಎಂದು ಅನಿಸಬಹುದು. ಆದರೆ ಆಕೆಗೆ ಏನು ಅನಿಸುತಿದೆ ಮತ್ತು ಆಕೆ ಏನನ್ನು ಬಯಸುತ್ತಿದ್ದಾಳೆ ಎಂಬುದನ್ನು ನೀವು ತಿಳಿದುಕೊಳ್ಳಲು ಬಯಸುವುದಾದಲ್ಲಿ, ಆಗ ಅವಳು ಏನು ಮಾತನಾಡುತ್ತಿದ್ದಾಳೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.

  • ಗುಪ್ತ ಸಂಗತಿಗಳನ್ನು ತಿಳಿದುಕೊಳ್ಳಬೇಕು :

ಆಕೆ ನಿಮಗೆ ಕಾಫಿ ತಯಾರಿಸುವಂತೆ ಕೇಳಿದ್ದಲ್ಲಿ, ನೀವು ಆಗ ಆಗುವುದಿಲ್ಲ, ನಾನು ನಿನ್ನೆ ತಾನೆ ಮಾಡಿದ್ದೆ ಎಂದು ನಿಮ್ಮ ಭುಜಗಳನ್ನು ನಿರ್ಲಕ್ಷ್ಯದಿಂದ ಕುಣಿಸಬೇಡಿ. ಕೇವಲ ಆಕೆ ದಣಿದಿರಬಹುದು ಅಥವಾ ನಿರಾಶೆಗೊಂಡಿರಬಹುದಾದ ಸಾಧ್ಯತೆಗಳು ಇರುತ್ತವೆ. ಆಕೆ ಯಾವುದೋ ಕೆಲವು ಸಮಸ್ಯೆಗಳಿಂದ ಮುಳುಗಿಹೋಗಿರಬಹುದು, ಹಾಗಾಗಿ, ಆಕೆಗೆ ಇತರ ಕೆಲಸಗಳಲ್ಲಿ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನೀವು ಏನನ್ನು ಮಾಡಬೇಕಾದ ಅಗತ್ಯವಿದೆ ಎಂದರೆ ಮೊದಲು ಎರಡು ಕಪ್ ಕಾಫಿ ತಯಾರಿಸಬೇಕು, ನಂತರ ಆಕೆಗೆ ಏನು ತೊಂದರೆಯಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಆಕೆಯೊಂದಿಗ ಸಂಭಾಷಣೆಯನ್ನು ಪ್ರಾರಂಭಿಸಲು ಪ್ರಯತ್ನಿಸಿ.

  • ಆಕೆಯ ಮಾತನ್ನು ಕೇಳಿಸಿಕೊಳ್ಳಿ :

ಅನೇಕ ಬಾರಿ ಪುರುಷರೆಲ್ಲಾ ಸಮಸ್ಯೆಗೆ ಒಂದು ಪರಿಹಾರವನ್ನು ಕೊಡುವುದೇ ಅವರು ಮಾಡಬೇಕಾದ ಕೆಲಸವೆಂದು ಭಾವಿಸುತ್ತಾರೆ ಮತ್ತು ಆಕೆ ಏನನ್ನು ಹೇಳುತ್ತಿದ್ದಾಳೆ ಎಂಬುದನ್ನು ಮರೆತು ಬಿಡುತ್ತಾರೆ. ಅಲ್ಲದೆ, ಅನೇಕ ಬಾರಿ ಹೆಂಡತಿಗೆ ಆ ಒಂದು ಪರಿಹಾರದ ಅಗತ್ಯವಿರುವುದಿಲ್ಲ, ಬದಲಾಗಿ ತನ್ನ ಜೊತೆಗಾರನ ನನ್ನ ಮಾತುಗಳನ್ನು ಕೇಳಿಸಿಕೊಳ್ಳಬೇಕೆಂದು ಬಯಸುತ್ತಾಳೆ. ಆ ಮೂಲಕ ಆಕೆಯ ಭಯ ಮತ್ತು ಕಾಳಜಿಗಳನ್ನು ಅರ್ಥಮಾಡಿಕೊಳ್ಳಬೇಕೆಂದು ಆತನಿಂದ ನಿರೀಕ್ಷಿಸುತ್ತಾಳೆ.

  • ಹತಾಶೆಯನ್ನು ತೊಡೆದುಹಾಕುವುದಕ್ಕಾಗಿ :

ಆಕೆ ಕೇವಲ ನಿರಾಶೆಗೊಂಡಿರುತ್ತಾಳೆ ಮತ್ತು ಏನು ಮಾಡಬೇಕೆಂದು ತಿಳಿಯದಂತಹ ಸಂದಿಗ್ಧ ಸ್ಥಿತಿಯಲ್ಲಿ ಇರುತ್ತಾಳೆ ಎಂಬ ಸಾಧ್ಯತೆ ಇದೆ. ಆ ಕ್ಷಣದ ಉದ್ರೇಕದಲ್ಲಿ, ನೀವು ಹೊಂದಿರಬಹುದಾದ ನ್ಯೂನ್ಯತೆಗಳೆಂದು ಕರೆಯಲಾಗುವ ಕೆಲವು ಸಂಗತಿಗಳ ಬಗ್ಗೆ ಆಕೆ ಎಲ್ಲಾ ಕಡೆಯಿಂದಲು ಗಮನ ಸೆಳೆಯುತ್ತಾಳೆ. ನೀವು ತಾಳ್ಮೆಯಿಂದಿರಬೇಕಾದ ಸಮಯ ಅದಾಗಿದೆ ಮತ್ತು ನಿರಾಶೆಗೊಳ್ಳಬೇಡಿ. ಬದಲಾಗಿ, ನೀವು ಆಕೆ ಹೇಳುವ ಮಾತುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.

  • ಮುರಿಯಲು ಸುಲಭಸಾಧ್ಯವಲ್ಲದ ಸುಭದ್ರ ವಿವಾಹ :

ಒಂದು ದಂಪತಿಯು ಒಬ್ಬರನೊಬ್ಬರು ಅರ್ಥಮಾಡಿಕೊಳ್ಳುವುದರಲ್ಲಿ ಮುರಿಯಲು ಸುಲಭಸಾಧ್ಯವಲ್ಲದ ಸುಭದ್ರ ವಿವಾಹದ ಭದ್ರ ನೆಲೆಯಾಗಿದೆ. ಆದ್ದರಿಂದ ಎಲ್ಲಾ ಗಂಡಂದಿರು ತಮ್ಮ ಮದುವೆಯು ದೃಢವಾಗಿ ಉಳಿಯಬೇಕೆಂದು ಬಯಸಿದಲ್ಲಿ, ತಮ್ಮ ಜೊತೆಗಾತಿಯು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾಳೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಒಳ್ಳೆಯ ಸಂವಹನವನ್ನು ನಿರ್ಮಿಸುವ ಅತ್ಯುತ್ತಮ ವಿಧಾನಗಳಲ್ಲಿ ಇದೂ ಒಂದಾಗಿದೆ ಮತ್ತು ಇದು ಹಲವಾರು ಸಮಸ್ಯೆಗಳಿಗೆ ಪೂರ್ಣವಿರಾಮವನ್ನು ಇಡಬಲ್ಲದು.

ವಿವಾಹದ ಒಂದು ಪ್ರಯಾಣವೆಂದರೆ ಒಬ್ಬರಿಗೊಬ್ಬರು ಜೊತೆಯಾಗಿರಬೇಕು ಮತ್ತು ಒಬ್ಬರನೊಬ್ಬರು ಬೆಂಬಲಿಸಬೇಕು. ಆದರೆ ಅನೇಕ ಬಾರಿ ನಮ್ಮ ಸಂಗಾತಿಯು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಹೆಚ್ಚಾಗಿ ಸೋಲುತ್ತೇವೆ, ಇದು ಮುಂದೆ ಹಲವಾರು ಗೊಂದಲಗಳಿಗೆ, ವಾದಗಳಿಗೆ ಮತ್ತು ಉದ್ರೇಕಿತ ಚರ್ಚೆಗಳಿಗೆ ಕಾರಣವಾಗಬಹುದು. ವಿಪರೀತ ಸಂದರ್ಭಗಳು ಎದುರಾದಾಗ ನಿಮ್ಮ ಮದುವೆಯ ಬಂಧವು ಸಂಪೂರ್ಣ ವೈಫಲ್ಯಗೊಳ್ಳುವುದಕ್ಕೆ ಕಾರಣವಾಗಬಹುದು, ಈ ರೀತಿ ಕೊನೆಗೊಳ್ಳಬಹುದು. ಹಾಗಾಗಿ, ನಿಮ್ಮ ಮದುವೆಯ ಬಂಧವು ಈ ರೀತಿ ಸೋಲುವುದನ್ನು ನೀವು ಬಯಸದಿದ್ದರೆ, ನಿಮ್ಮ ಸ್ತ್ರೀ ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾಳೆ ಎಂಬುದನ್ನು ಅರ್ಥಮಾಡಿಕೊಳ್ಳುವ ಕಲೆಯನ್ನು ನೀವು ಕಲಿಯಲೇ ಬೇಕು. ಹೌದು, ಇದ ಕಠಿಣವಾಗದೆ ಮತ್ತು ಯಾವದೇ ಪ್ರಯತ್ನವಾಗಲಿ ಮತ್ತು ಪರೀಕ್ಷಿಸಿದ ಸೂತ್ರವಾಗಲಿ ಅಲ್ಲಿರುವುದಿಲ್ಲ. ಅಂದರೆ, ನಿಮಗೆ ಬೇರೆ ಯಾವುದೇ ಮಾರ್ಗವಿಲ್ಲ. ಆದರೆ ನೀವು ಪ್ರಯತ್ನಿಸುತ್ತಲೇ ಇರಬೇಕು ಮತ್ತು ಖಂಡಿತವಾಗಿ ಒಂದು ದಿನ ನೀವು ಯಶಸ್ವಿಯಾಗುತ್ತೀರಿ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
352 views
Matrimonial
352 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
408 views
Match Making
408 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
585 views
Astrology in Marriage
585 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category