0 Shares 142 Views
00:00:00
21 Feb

ಚೆವೈ ದೋಷವನ್ನು ಅರ್ಥಮಾಡಿಕೊಳ್ಳುವುದು

December 18, 2017
142 Views

ವ್ಯಕ್ತಿಯ ಜೀವನದಲ್ಲಿ ಗ್ರಹಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಮತ್ತು ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಸಹಕಾರಿಯಾಗುತ್ತವೆ ಎಂದು ಭಾವಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರಗಳು ಪ್ರಸ್ತುತ ವ್ಯಕ್ತಿಯ ಭವಿಷ್ಯದ ಪರಿಸ್ಥಿತಿಗಳ ಬಗ್ಗೆ ತಿಳಿಸುತ್ತವೆ ಎಂದು ಭಾವಿಸಲಾಗಿದೆ. ವ್ಯಕ್ತಿಯ ಜೀವನದಲ್ಲಿ ಶುಕ್ರದ ಮತ್ತು ಮಂಗಳದಂತಹ ಗ್ರಹಗಳ ಸ್ಥಾನವು ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುವುದರಿಂದ ಅನೇಕ ಗ್ರಹಗಳು ವೈವಾಹಿಕ ಸಂಬಂಧಗಳನ್ನು ತೀರ್ಮಾನಿಸುವಲ್ಲಿ ಅತ್ಯಂತ ಪ್ರಮುಖವಾಗಿವೆ. ಮತ್ತೊಂದೆಡೆ, ಮಂಗಳ ಎಂಬುದು ಮದುವೆಗೆ ಸಂಬಂಧಿಸಿದಂತೆ ಸೂಚಿಸುವ ಅತ್ಯಂತ ನಿರ್ಧಾರಕ ಗ್ರಹವಾಗಿದೆ, ಏಕೆಂದರೆ ಅದರ ಅಂಶವು ಮದುವೆಯ ನಿಯಮಗಳನ್ನು ತನ್ನ ಅಂಶಗಳಂತೆ ಪ್ರತಿನಿಧಿಸುತ್ತದೆ. ಮಂಗಳ ಗ್ರಹವು 2ನೇ, 4ನೇ 7ನೇ ಅಥವಾ 8ನೇ ಮನೆಯಲ್ಲಿ ಇದ್ದಾನೆ ಎಂದಾದರೆ ಚೆವೈ ದೋಷವನ್ನು ಒಬ್ಬರ ಅಥವಾ ಆ ವ್ಯಕ್ತಿಯ ಪೂರ್ವಿಕರಿಂದ ಅಥವಾ ಲಗ್ನದಿಂದ ಸಾಧ್ಯವೆಂದು ಕರೆಯಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಮೂಲಕ ಜಾತಕವನ್ನು ಪರಿಶೀಲಿಸುವ ಮೂಲಕ ಹಿಂದೂ ಕುಟುಂಬವು ತಮ್ಮ ದೃಢನಂಬಿಕೆಯನ್ನು ತೋರಿಸುತ್ತವೆ. ಅದರಲ್ಲಿ ಇರುವ ವಧುವಿನ/ವರನ ದೋಷಗಳಿಗೆ, ಪರಿಹಾರೋಪಾಯಗಳನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಸೂಚಿಸುತ್ತಾರೆ, ಇಲ್ಲಿ ಹುಡುಗ ಮತ್ತು ಹುಡುಗಿಯ ಜಾತಕಗಳು ಒಂದಕ್ಕೊಂದು ಹೊಂದಿಕೊಳ್ಳುತ್ತವೆಯೇ / ಗಣಗಳು ಎಷ್ಟು ಬರುತ್ತವೆ ಎಂಬುದನ್ನು ನೋಡಲಾಗುತ್ತದೆ. ದೋಷವುಳ್ಳ ಒಬ್ಬ ವ್ಯಕ್ತಿಯು, ಅದೇ ಪ್ರಮಾಣದಷ್ಟು ದೋಷವಿರುವ ಮತ್ತೊಬ್ಬ ವ್ಯಕ್ತಿಯನ್ನು ವಿವಾಹವಾದಾಗ, ಚೆವಾಯ್ ದೋಷದ ಕೆಟ್ಟ ಪರಿಣಾಮಗಳನ್ನು ರದ್ದುಗೊಳಿಸಲಾಗುತ್ತದೆ. ಮಂಗಳನಲ್ಲಿ ಸ್ಥಳೀಯರಿಗೆ ಹೆಚ್ಚಿನ ಶಕ್ತಿಯಿದೆ ಎಂದು ಹೇಳಲಾಗುತ್ತದೆ, ಅದಕ್ಕೆ ಸರಿಯಾದ ವಾಹಿನಿರೂಪದಲ್ಲಿ ಪರಿಹಾರೋಪಾಯವನ್ನು ಮಾಡದ ಹೊರತು, ಇದು ಕುಟುಂಬದ ಜೀವನದ ಮೇಲೆ ಪರಿಣಾಮ ಬೀರಬಹುದು. ಮಂಗಳ ಗ್ರಹವು ಲಗ್ನದಿಂದ 3ನೇ,6ನೇ, 10ನೇ ಮತ್ತು 11 ನೇ ಮನೆಗಳಲ್ಲಿ ಇದ್ದರೆ, ಅದನ್ನ ಅನುಕೂಲಕರ ಫಲಿತಾಂಶವೆಂದು ಪರಿಗಣಿಸಲಾಗಿದೆ.

ಚೆವಾಯ್ ದೋಷದ ಪರಿಣಾಮಗಳು

ಲಗ್ನದ ಚೆವಾಯ್ ದೋಷಗಳನ್ನು ಒಬ್ಬ ವ್ಯಕ್ತಿಯು ಹುಟ್ಟಿನಲ್ಲಿ ದೊರೆಯುವ ಜಾತಕಗಳಿಂದ ನಿರ್ಧರಿಸಲಾಗುತ್ತದೆ. ಹಾಗಾಗಿ ದೋಷದ ಕೆಲವು ನಿವಾರಣೆಗಳನ್ನು ಈ ಕೆಳಗಿನಂತೆ ಉಲ್ಲೇಖಿಸಲಾಗಿದೆ:

– ರಕ್ತದ ಕೊರತೆ ಅಥವಾ ಅನಿಮೀಯಾ ದಂತಹ ರಕ್ತ ಸಂಬಂಧಿತ ಸಮಸ್ಯೆಗಳು ಒಬ್ಬ ವ್ಯಕ್ತಿಯನ್ನು ರಕ್ತಹೀನನ್ನಾಗಿ ಅಥವಾ ಆಗಾಗ್ಗೆ ಸುಸ್ತಾಗುವಂತೆ ಮಾಡಬಹುದು.

– ಮೆದುಳಿನ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಬಹುದು. ವ್ಯಕ್ತಿಯ ಅಧ್ಯಯನಗಳು ಮತ್ತು ಆತನ ಕೆಲಸಗಳ ಮೇಲೆ ಪ್ರಭಾವ ಬೀರಬಹುದು.

– ಈ ದೋಷದೊಂದಿಗೆ ವ್ಯಕ್ತಿಗಳು ಅಲ್ಪತಾಳ್ಮೆ ಹೊಂದಿರುತ್ತಾರೆ ಮತ್ತು ಯಾವುದೇ ಕಾರಣವಿಲ್ಲದೆ ಕಿರುಚಾಡಬಹುದು, ಹೀಗಾಗಿ ಸಂಬಂಧಗಳು ಬಹು ಸುಲಭವಾಗಿ ಹಾಳಾಗಬಹುದು.

– ಈ ದೋಷದಿಂದಾಗಿ ಒಬ್ಬ ವ್ಯಕ್ತಿಯು ಆಗಾಗ್ಗೆ ಮತ್ತು ಸಣ್ಣ ಅಪಘಾತಗಳನ್ನು ಎದುರಿಸಬೇಕಾಗುತ್ತದೆ

– ಅನಗತ್ಯ ಜಗಳಗಳಲ್ಲಿ ವ್ಯಕ್ತಿಯು ಮುಳುಗಬಹುದು ಹಾಗೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬಹುದು.

– ಮಂಗಳ ಗ್ರಹವು ದಂಪತಿಗಳ ನಡುವೆ ನಿರಂತರವಾದ ಹೋರಾಟಕ್ಕೆ ಕಾರಣವಾಗಬಹುದು, ಇದರಿಂದಾಗಿ ಅವರು ಒಟ್ಟಿಗೆ ಸಂತೋಷದ ಜೀವನವನ್ನು ಅನುಭಿಸುವುದಿಲ್ಲ.

ಚೆವೈ ದೋಷದ ಪರಿಹಾರಗಳು

ಹೊಸದಾಗಿ ಜೋಡಿಗಳನ್ನು ಕೂಡಿಸುವಾಗ ಚೆವೈ ದೋಷವೆಂಬುದು ಒಂದು ಗಂಭೀರವಾದ ಸಮಸ್ಯೆಯಂತೆ ಪರಿಗಣಿಸಲಾಗುತ್ತದೆ, ಆದರೆ ಜಾತಕದಲ್ಲಿ ನವಗ್ರಹದ ಇರಿಸುವಿಕೆಯನ್ನು ಕಾಣುವುದರಿಂದ ನೀವು ಈ ಸಮಸ್ಯೆಗಳಿಂದ್ ಹೊರಬರಬಹುದು. ಇದರ ಜೊತೆಗೆ, ಒಂದೇ ರೀತಿಯ ದೋಷವುಳ್ಳ ಇಬ್ಬರು ವ್ಯಕ್ತಿಗಳನ್ನು ಮದುವೆ ಮಾಡುವುದರಿಂದ ಈ ಪರಿಣಾಮವನ್ನು ಶೂನ್ಯಗೊಳಿಸಲಾಗುತ್ತದೆ. ಈ ದೋಷಕ್ಕೆ ಒಳಗಾದ ಜನರು ಹನುಮಾನ್ ಚಾಲೀಸಾವನ್ನು ಓದಬೇಕು ಮತ್ತು ಪ್ರತಿದಿನವೂ ಹನುಮಂತನನ್ನು ಆರಾಧಿಸಬೇಕು. ಈ ದೋಷದ ದುಷ್ಪರಿಣಾಮವನ್ನು ಸರಿಪಡಿಸಲು ಪೀಡಿತ ಜನರು ಮಂಗಳವಾರಗಳಲ್ಲಿ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಬಹುದು. ಆದ್ದರಿಂದ, ನೀವು ಚೆವೈ ದೋಷವನ್ನು ಹೊಂದಿದ್ದರೆ, ನೀವು ಚಿಂತಿಸಬೇಕಾಗಿಲ್ಲ, ಈ ದೋಷವನ್ನು ತೊಡೆದುಹಾಕುವ ಮಾರ್ಗಗಳಿವೆ.

 

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
186 views
Matrimonial
186 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
210 views
Match Making
210 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
223 views
Astrology in Marriage
223 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category