0 Shares 255 Views
00:00:00
18 Jan

ಪ್ರತಿಯೊಬ್ಬ ವರನು ತಿಳಿದುಕೊಳ್ಳಲೇಬೇಕಾದ ಕಟ್ಟಕಡೆಯ ಶಾಪಿಂಗ್ ಮಾರ್ಗದರ್ಶಿ

March 6, 2018
255 Views

ವಧುವಿಗೆ ಮಾಡಿದಂತೆ ವರನಿಗೆ ಶಾಪಿಂಗ್ ಮಾಡುವುದನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ ಅಥವಾ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುವುದಿಲ್ಲ. ಸಹಜವಾಗಿ, ಮಹಿಳೆಯರು ತಮ್ಮ ಮದುವೆಯ ದಿನದಂದು ನೋಡಲು ಹೇಗೆ ಕಾಣುತ್ತೇವೆ ಎಂಬ ಬಗ್ಗೆ ಅತಿರೇಕದ ಕಲ್ಪನೆಗಳನ್ನು ಹೊಂದಿರುತ್ತಾರೆ, ಆದರೆ ಶಾಪಿಂಗ್ ಎಂಬುದು ಪುರುಷರಿಗೆ ಮುಖ್ಯವೇನಲ್ಲ ಎಂಬುದು ಅದರ ಅರ್ಥವಲ್ಲ. ಶೀಘ್ರದಲ್ಲೇ ವರ ಮದುವೆಗೆ ಬೇಕಾದ ಅಗತ್ಯವಸ್ತುಗಳಿಗಾಗಿ ನಾವು ಅತ್ಯುತ್ತಮ ಶಾಪಿಂಗ್ ಮಾರ್ಗದರ್ಶಿಯನ್ನು ರಚಿಸಿರುತ್ತೇವೆ, ಹೀಗಾಗಿ ನೀವು ಗಮನಿಸಬೇಕಾದ ಮುಂದಿನ ಸಂಗತಿಗಳನ್ನು ಓದಿರಿ!

ಪರಂಪರಾಗತವಾಗಿ ಪಡೆದದ್ದು ಏನೇ ಆಗಿದ್ದರೂ ಧರಿಸಿ.

ಇಲ್ಲ, ನಾವಿಲ್ಲಿ ಆಭರಣಗಳ ಬಗ್ಗೆ ಮಾತನಾಡುತ್ತಿಲ್ಲ! ಪುರುಷರು ಕನಿಷ್ಠ ಒಂದು ವಿಷಯವನ್ನಾದರೂ ಹೊಂದಿರಬೇಕು, ತಮ್ಮ ಜೀವನದ ಬಹುದೊಡ್ಡ ದಿನದಂದು ಧರಿಸುವುದಕ್ಕಾಗಿ ಅನುವಂಶಿಕವಾಗಿ ಅವರಿಗೆ ಉಡುಗೊರೆಯನ್ನು ನೀಡಲಾಗಿರುತ್ತದೆ. ಅಂದರೆ ತಂದೆ ತನ್ನ ಮದುವೆಯಲ್ಲಿ ಧರಿಸಿದ್ದ ಒಂದು ಜೋಡಿ ಶೂಗಳು ಆಗಿರಬಹುದು, ಅವನ ಅಜ್ಜ ಧರಿಸಿದ್ದ ಹಳೇ ಗಡಿಯಾರ ಹೀಗೆ ಇನ್ನೂ ಇತರ ರೀತಿಯ ವಸ್ತುಗಳಾಗಿರಬಹುದು. ಹಳೆಯ ಶೂ ಜೋಡಿಯನ್ನು ಧರಿಸುವುದನ್ನು ಚೆನ್ನಾಗಿರುವುದಿಲ್ಲ ಎಂದು ನೀವು ಭಾವಿಸಬಹುದು, ಆದರೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಅದು ಮಹತ್ವವನ್ನು ಸೂಚಿಸುತ್ತದೆ. ಅಂತೆಯೇ, ವಾಚ್ ನಿಮ್ಮ ಮುಂದಿನ ಉತ್ತಮ ಕಾಲವನ್ನು ಸೂಚಿಸುತ್ತದೆ. ಕೇವಲ ಆಭರಣಗಳಿಗಿಂತ ಹೆಚ್ಚಿನ ಆಯ್ಕೆಗಳು ಖಂಡಿತವಾಗಿಯೂ ನಿಮ್ಮ ಬಳಿ ಇರಬಹುದು.</span

ಗ್ರಾಹಕೀಯಗೊಳಿಸಿದ ಪರಿಕರಗಳು

ಮಹಿಳೆಯರು ಅತ್ಯುತ್ತಮವಾದ ಆಭರಣಗಳನ್ನು ಧರಿಸುತ್ತಾರೆ, ಆದರೆ ಪುರುಷರು ತಾವು ಧರಿಸಬಹುದಾದ ಪರಿಕರಗಳನ್ನು ಸಹ ಪ್ರಯತ್ನಿಸಬೇಕು. ಅದನ್ನು ಕುರ್ತಾದ ಮೇಲಿನ ಬ್ರೋಚ್ ಅಥವಾ ಟರ್ಬನ್ ಮೇಲಿರುವ ಗ್ರಾಹಕೀಕರಿಸಿದ ಬ್ರೋಚ್ ಆಗಿರಬಹುದು. ಗ್ರಾಹಕೀಕರಿಸಿದ ಸ್ಟೋಲ್ (ಕಂಠವಸ್ತ್ರ) ಆಗಿರಬಹುದು ಅಥವಾ ಆಭರಣದ ಇತರೆ ಆಯ್ಕೆಗಳಾದ ಕಡಗಗಳು, ಚೈನ್‌ಗಳು ಇನ್ನೂ ಮುಂತಾದವು.

ಡಿಸೈನರ್ ವೇರ್

ನಿಮ್ಮ ಮದುವೆಯ ಉಡುಪಿಗೆ ನೀವು ಎಷ್ಟು ಖರ್ಚು ಮಾಡಬಹುದೆಂಬ ಆಧಾರದ ಮೇಲೆ, ನಿಮ್ಮ ವಿಶಿಷ್ಟವಾದ ಗ್ರಾಹಕೀಯಗೊಳಿಸಿದ ಪರಿಕರಗಳಂತೆಯೇ ನೀವು ಸಂಪೂರ್ಣವಾಗಿ ವಿಶಿಷ್ಟವಾದ ಏನನ್ನಾದರೂ ಹೊಂದಿರಬೇಕು. ನೀವು ಡಿಸೈನರ್ ಸಿದ್ಧಗೊಳಿಸಿದ ಶೆರ್ವಾನಿಯನ್ನು ಅಥವಾ ಒಂದು ಜೊತೆ ಶೂಗಳನ್ನು ಖರೀದಿಸಬಹುದು. ಭಾರತೀಯ ವಿವಾಹಗಳು ಬಟ್ಟೆಗಳ ಮೇಲೆ ಭಾರೀ ಪ್ರಮಾಣದಲ್ಲಿ ಖರ್ಚುವೆಚ್ಚವನ್ನು ಮಾಡುತ್ತವೆ. ಹಾಗೂ ಘಟನೆಗಳ ಉಳಿದ ಭಾಗಗಳಿಗಿಂತ ಬಹುದೊಡ್ಡ ದಿನದಂದು ಹೆಚ್ಚು ಖರ್ಚು ಮಾಡುವುದು ಬಹುಸೂಕ್ತ.

ವರನ ಗಂಡೆದೆಗೆ ಮತ್ತಷ್ಟು ಹೊಳಪು ನೀಡಬಲ್ಲ ಏನೋ ಒಂದನ್ನು ಸೇರಿಸಿ

ವರನಿಗಾಗಿ ನಿಮ್ಮ ಶಾಪಿಂಗ್ ಮಾರ್ಗದರ್ಶಿಯು ಏನೋ ಒಂದು ರಾಜಕಳೆಯನ್ನು ನೀಡುವಂಥ ಅಂಶವನ್ನು ಒಳಗೊಂಡಿರಲೇಬೇಕು, ಏಕೆಂದರೆ, ಅದು ವರನ ಅನನ್ಯತೆಯ ಬಗ್ಗೆ ಅತ್ಯುತ್ತಮವಾಗಿ ಪ್ರತಿಫಲಿಸುತ್ತದೆ ಹಾಗೂ ಆತನ ವ್ಯಕ್ತಿತ್ವವನ್ನು ಪ್ರದರ್ಶಿಸುವ ಮೂಲಕ ಅದಕ್ಕೆ ಕನ್ನಡಿ ಹಿಡಿದಿರುವಂತೆ ಭಾಸವಾಗುತ್ತದೆ. ಹಾಗಂದ ಮಾತ್ರಕ್ಕೆ ವರನಿಗೆ ವಿವಾಹದ ದಿನದಂದು ಸ್ನೀಕರ್ ಗಳನ್ನು(ಸದ್ದು ಮಾಡದ ಮೆದು ಪಾದರಕ್ಷೆಗಳನ್ನು) ಧರಿಸಲು ನೀವು ತಿಳಿಸಿದಿರೆಂಬುದು ಇದರ ಅರ್ಥವಲ್ಲ. ಆದರೆ ಅವರು ಸಾಮಾನ್ಯವಾಗಿ ಧರಿಸುವ ಏನೋ ಒಂದನ್ನು ನೀವು ಆರಿಸಬೇಕು. ಉದಾಹರಣೆಗೆ, ವರನು ತನ್ನ ಕುತ್ತಿಗೆಯ ಸುತ್ತ ಯಾವಾಗಲೂ ಚೈನ್ ಅನ್ನು ಹಾಕಿರಬೇಕು ಅಥವಾ ಆತ ಕೈಬೆರಳಿನಿಂದ ಎಂದಿಗೂ ಉಂಗುರವನ್ನು ತೆಗೆಯಲೇ ಬಾರದು. ಅವುಗಳು ಹೊಚ್ಚಹೊಸದಾಗಿದ್ದಷ್ಟು ಆತನಿಗೆ ಮತ್ತಷ್ಟು ಮೆರುಗು ನೀಡುತ್ತವೆ. ಆದರೆ ಅದೇ ರೀತಿಯಲ್ಲಿ ಅವನು ಸಾಮಾನ್ಯವಾಗಿ ಧರಿಸುವ ಮತ್ತೊಂದು ಬಗೆಯ ಅಲಂಕಾರಿಕ ವಸ್ತು.

ರಾಜಗಾಂಭೀರ್ಯವನ್ನು ಕಾಯ್ದುಕೊಳ್ಳಿ

ನಿಮ್ಮ ಶಾಪಿಂಗ್ ಮಾರ್ಗದರ್ಶಿಯು ಯಾವಾಗಲೂ ರಾಯಧನವನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಭಾರತೀಯ ವಧುಗಳು ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಶ್ರೀಮಂತಿಕೆಯನ್ನು ಪ್ರದರ್ಶಿಸಬೇಕು, ಮತ್ತು ಅವರು ಸಾಂಪ್ರದಾಯಿಕ ಪದ್ಧತಿಯನ್ನು ಆಯ್ದುಕೊಂಡಿದ್ದಲ್ಲಿ, ಅದನ್ನು ಅತ್ಯುತ್ತಮವಾಗಿ ವಿವರಿಸಲಾಗುತ್ತದೆ. ಈ ಸಾಂಪ್ರದಾಯಿಕ ಭಾಗವನ್ನು ಅತಿಪ್ರತಿಷ್ಠಿತವಾಗಿ ಕಾಣುವಂತೆ ನೀವು ಮಾಡಬೇಕಾಗಿದೆ. ಪೇಟದಿಂದ ಅವನ ಶೂ ತುದಿಯವರೆಗೆ, ಎಲ್ಲವೂ ಭಾರತೀಯ ವರನ ಸಾರವನ್ನೇ ಪ್ರತಿಬಿಂಬಿಸಬೇಕು. ಅವನ ಜೀವನದ ಅತಿ ಅಮೂಲ್ಯ ದಿನದಂದು ಒಬ್ಬ ರಾಜನಂತೆ ಅವನಿಗೆ ಭಾಸವಾಗಲೀ ಬಿಡಿ ಮತ್ತು ಪ್ರತಿಯೊಬ್ಬರ ಮುಂದೆ ಆತ ಅದನ್ನೇ ಪ್ರತಿನಿಧಿಸಿದರೆ ಆ ಅಲಂಕಾರಕ್ಕೂ ಒಂದು ಅರ್ಥ ಬರುತ್ತದೆ.

ಇವುಗಳೆಲ್ಲಾ ನಿಮ್ಮನ್ನು ಸುಂದರವಾಗಿ ಅಲಂಕರಿಸಬಲ್ಲಂಥ ನಿಮ್ಮ ಶಾಪಿಂಗ್ ಮಾರ್ಗದರ್ಶಿಯಂತೆ ಕಾರ್ಯನಿರ್ವಹಿಸುತ್ತವೆ. ವರನಿಗಾಗಿ ಸರಿಯಾದ ಸೂಕ್ತ ವಸ್ತುಗಳನ್ನೇ ಖರೀದಿಸಿ. ಯಾವುದೇ ವಿವಾಹದ ಮಾದರಿಗೂ ಈ ಮೇಲಿನ ಅಂಶಗಳು ಅತ್ಯಗತ್ಯ. ಆದರೆ ಖರೀದಿಗೂ ಮುನ್ನ, ವರನ ಸ್ವಂತ ಆದ್ಯತೆಗಳನ್ನು ಮತ್ತು ಅವಶ್ಯಕತೆಗಳನ್ನು ಕುರಿತು ಕೇಳಿ ತಿಳಿದುಕೊಳ್ಳುವುದು ಅಥವಾ ಜೊತೆಗೆ ಕರೆದೊಯ್ಯುವುದು ಅತೀ ಉತ್ತಮ.<

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
352 views
Matrimonial
352 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
408 views
Match Making
408 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
585 views
Astrology in Marriage
585 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category