0 Shares 292 Views
00:00:00
27 Jun

ಸರಿಯಾದ ಶೇರ್ವಾನಿಯನ್ನು ಆಯ್ಕೆಮಾಡುವ ಸಲಹೆಗಳು

January 1, 2018
292 Views

ಶೇರ್ವಾನಿ ಎಂಬುದು ಎಲ್ಲಾ ಗಂಡು ಮಕ್ಕಳು ಮತ್ತು ಪುರುಷರಿಗಾಗಿ ಕಟ್ಟಕಡೆಯ ಜನಾಂಗಕ್ಕೆ ಸಂಬಂಧಿಸಿದ (ಎಥ್ನಿಕ್) ಉಡುಗೆಯ ಆಯ್ಕೆಯಾಗಿದೆ. ಯಾವುದೇ ಹಬ್ಬಗಳು ಅಥವಾ ಜನಾಂಗೀಯ ಸಮಾರಂಭಗಳಲ್ಲಿ ಪುರುಷರು ಶೇರ್ವಾನಿಯನ್ನು ಧರಿಸಲು ಆಯ್ಕೆಮಾಡುತ್ತಾರೆ, ಏಕೆಂದರೆ ಅದು ಯಾವುದೇ ವ್ಯಕ್ತಿಯ ಸೊಬಗನ್ನು ಸರಳವಾಗಿ ಹೆಚ್ಚಿಸುತ್ತದೆ! ಅಮೋಘವಾದ ಉದ್ದನೆಯ ಕೋಟ್ ಮತ್ತು ಅದ್ಭುತವಾದ ಸೆಲ್ವಾರ್ ಗಳ ಜೊತೆಗೂಡಿದ ಶೇರ್ವಾನಿಯು ಇತ್ತೀಚಿನ ದಿನಗಳಲ್ಲಿ ಅತೀ ಬೇಡಿಕೆಯ ಉಡುಪಾಗಿದೆ! ಯಾವುದೇ ಸಮಯದಲ್ಲಾದರೂ, ನಿರ್ದಿಷ್ಟ ಸಂದರ್ಭಕ್ಕೆ ಸರಿಹೊಂದುವ ಉಡುಪುಗಳನ್ನು ನಾವು ಆಯ್ಕೆ ಮಾಡಬೇಕು. ಆದಾಗ್ಯೂ, ಒಬ್ಬ ವ್ಯಕ್ತಿಯು ಒಂದು ಕಾರ್ಯಕ್ರಮಕ್ಕಾಗಿ ಮಿತಿಮೀರಿ ಉಡುಪನ್ನು ಧರಿಸಬಾರದು ಅಥವಾ ಅತೀ ಕಡಿಮೆ ಉಡುಪನ್ನು ಧರಿಸಬಾರದು! ಶೇರ್ವಾನಿಯನ್ನು ಆಯ್ಕೆ ಮಾಡುತ್ತಿರುವಾಗ, ನಮ್ಮ ಶರೀರದ ಮೈಕಟ್ಟನ್ನು ಪರಿಗಣಿಸುವುದೂ ಸಹ ತುಂಬಾ ಮುಖ್ಯ. ಶೇರ್ವಾನಿಗಳ ವಿಚಾರಕ್ಕೆ ಬಂದರೆ, ಕಿರಿಕಿರಿಗಳನ್ನು ತಪ್ಪಿಸುವುದಕ್ಕಾಗಿ ಪುರುಷರು ಸೂಕ್ತವಾದ ಮತ್ತು ಸರಿಯಾದ ರೀತಿಯ ಶೇರ್ವಾನಿಯನ್ನು ಆರಿಸಬೇಕಾಗುತ್ತದೆ.ಶೇರ್ವಾನಿಗಳನ್ನು ವಿಭಿನ್ನ ಸಮಾರಂಭಗಳಲ್ಲಿ ಧರಿಸಲಾಗುತ್ತದೆ, ಆದ್ದರಿಂದ ಅವುಗಳನ್ನು ಬುದ್ದಿವಂತಿಕೆಯನ್ನು ಆಯ್ಕೆಮಾಡುವುದು ಮುಖ್ಯವಾಗುತ್ತದೆ! ಶೇರ್ವಾನಿಯನ್ನು ಆಯ್ಕೆ ಮಾಡುತ್ತಿರುವಾಗ, ನಮ್ಮ ಶರೀರದ ಮೈಕಟ್ಟನ್ನು ಪರಿಗಣಿಸುವುದೂ ಸಹ ತುಂಬಾ ಮುಖ್ಯ. ಶೇರ್ವಾನಿಗಳ ವಿಚಾರಕ್ಕೆ ಬಂದರೆ, ಕಿರಿಕಿರಿಗಳನ್ನು ತಪ್ಪಿಸುವುದಕ್ಕಾಗಿ ಪುರುಷರು ಸೂಕ್ತವಾದ ಮತ್ತು ಸರಿಯಾದ ರೀತಿಯ ಶೇರ್ವಾನಿಯನ್ನು ಆರಿಸಬೇಕಾಗುತ್ತದೆ.

ಆಯ್ಕೆಮಾಡುವ ಮುನ್ನ ಶೇರ್ವಾನಿ ಟ್ರೆಂಡ್‌ಗಳನ್ನು ಪರಿಶೀಲಿಸಿ:

ಟ್ರೆಂಡ್‌ಗಳ ಮುಖಾಂತರ ನಿಮಗೆ ಮಾರ್ಗದರ್ಶನ ನೀಡಲು ಹೊಸ ಫ್ಯಾಷನ್‌ನ ವಿನ್ಯಾಸಗಾರರು ಇಲ್ಲಿದ್ದಾರೆ. ಅತ್ಯುತ್ತಮವಾಗಿ ಕಾಣಲು ಜನರು ಟ್ರೆಂಡ್‌ಗಳನ್ನು ಅನುಸರಿಸುತ್ತಾರೆ! ಸದ್ಯದಲ್ಲಿ ಚಾಲ್ತಿಯಲ್ಲಿರುವ ಟ್ರೆಂಡ್ ಗಳನ್ನು ಅನುಸರಿಸುವುದರಿಂದ ಅದು ನಿಮಗೆ ಅಸಾಧಾರಣ ನೋಟವನ್ನು ನೀಡುವುದು ಮಾತ್ರವಲ್ಲ, ನಿಮ್ಮದೇ ಆದ ಸ್ಟೈಲ್ ಸ್ಟೇಟ್ಮೆಂಟ್ ಅನ್ನು ಕೊಡುತ್ತದೆ! ಹೀಗಾಗಿ, ನಿಮ್ಮ ಆಯ್ಕೆಯನ್ನು ಮಾಡುವ ಮೊದಲು, ನೀವು ಪ್ರಸ್ತುತ ಚಾಲ್ತಿಯಲ್ಲಿರುವ ಟ್ರೆಂಡ್ ಗಳನ್ನು ಹುಡುಕಬೇಕು.

ಈ ಸಂದರ್ಭದಲ್ಲಿ ನೆನಪಿಡಿ:

ನೀವು ಬಾಡಿಗೆ ಶೇರ್ವಾನಿಯನ್ನು ಖರೀದಿಸುವ ಅಥವಾ ಪಡೆದುಕೊಳ್ಳುವ ಮುನ್ನ ಆ ಒಂದು ಸಮಾರಂಭದ ಬಗ್ಗೆ ನೆನಪಿಟ್ಟುಕೊಳ್ಳಬೇಕು. ಶೆರ್ವಾನಿಗಳು ವಿಭಿನ್ನ ಶ್ರೇಣಿಗಳಲ್ಲಿ ಮತ್ತು ವಿಭಿನ್ನ ಮಾದರಿಗಳಲ್ಲಿ ಬರುತ್ತವೆ. ಹಬ್ಬದ ಜನಾಂಗೀಯ ನೋಟಕ್ಕಾಗಿ ನೀವು ಸರಳ ಮತ್ತು ಲಘುವಾಗಿ ಅಲಂಕರಿಸಿದ ಒಂದು ಶೇರ್ವಾನಿಯನ್ನು ಆಯ್ಕೆ ಮಾಡಬೇಕಾಗುತ್ತದೆ, ನಿಶ್ಚಿತಾರ್ಥಗಳು ಮತ್ತು ಕಾರ್ಯಕ್ರಮಗಳಿಗಾಗಿ ಸೌಮ್ಯವಾಗಿರುವ ಭಾರೀ ಶರ್ವಾನಿಗಳನ್ನು ಹಾಗೂ ಹೆಚ್ಚು ಕಸೂತಿ ಮತ್ತು ರಾಜವೈಭವದ ಶೇರ್ವಾನಿಗಳನ್ನು ಮದುವೆಯಂತಹ ಸಮಾರಂಭಗಳಿಗಾಗಿ ನೀವು ಆಯ್ಕೆಮಾಡಬೇಕು! ಹೀಗಾಗಿ, ಸಂದರ್ಭದ ಆಧಾರದ ಮೇಲೆ ಶೇರ್ವಾನಿಯನ್ನು ಆಯ್ಕೆಮಾಡಿಕೊಳ್ಳಿ ಆಗ ಅದು ನೀವು ಮುಜುಗರಕ್ಕೆ ಒಳಗಾಗದಂತೆ ಅದು ನಿಮ್ಮನ್ನು ತಡೆಯುತ್ತದೆ!

ಸರಿಯಾದ ಪ್ಯಾಟರ್ನ್ ಅನ್ನು ಪಡೆದುಕೊಳ್ಳಿ:

ಬೃಹತ್ ವೈವಿಧ್ಯತೆ ಮತ್ತು ಸರಿಹೊಂದಿಕೊಳ್ಳದ ಅಸಂಖ್ಯಾತ ಪ್ಯಾಟರ್ನ್‌ಗಳು ಅಲ್ಲಿ ಲಭ್ಯವಿರುವ ಕಾರಣದಿಂದಾಗಿ ನೀವು ಶೇರ್ವಾನಿ ಅಂಗಡಿಗಳಿಗೆ ಪ್ರವೇಶಿಸಿದಾಗ ನಿಮ್ಮ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ! ಅಂತಹ ಆಸಕ್ತಿದಾಯಕ ಪ್ಯಾಟರ್ನ್‌ಗಳಿಂದ, ನಿಮ್ಮ ಪ್ಯಾಟರ್ನ್ ಅನ್ನು ನೀವು ಗುರುತಿಸಬೇಕಾದ ಅಗತ್ಯವಿದೆ! ನಿಮ್ಮ ಆಯ್ಕೆಯನ್ನು ಮಾಡಿಕೊಳ್ಳಿ ಮತ್ತು ಸರಿಯಾದ ಪ್ಯಾಟರ್ನ್ ಅನ್ನು ಆರಿಸಿಕ್ಕೊಳ್ಳಿ. ಕೋಟ್ ಖರೀದಿಸುವ ಮುನ್ನ ನಿಮ್ಮ ಉದ್ದವನ್ನು ಅಳತೆ ಮಾಡಿ; ನಿಮ್ಮ ಸೆಲ್ವಾರ್, ಧೋತಿ ಅಥವಾ ಚೂಡಿದಾರ್ ಅನ್ನು ಆಯ್ಕೆಮಾಡಿಕೊಳ್ಳಿ. ನಿಮಗೆ ಅತ್ಯುತ್ತಮವಾದದ್ದು ಏನು ಎಂದು ಪರಿಶೀಲಿಸಿ!

ಆಧುನಿಕ ಶೇರ್ವಾನಿ ವಿನ್ಯಾಸಗಳನ್ನು ಪ್ರಯತ್ನಿಸಿ:

ವಿನ್ಯಾಸಕರು ಯಾವಾಗಲೂ ಹೊಸತನ್ನು ಪಡೆಯಲು ಪ್ರಯೋಗ ಮತ್ತು ವಿನ್ಯಾಸ ಮಾಡುತ್ತಿರುತ್ತಾರೆ. ಅಂತಹ ಡಿಸೈನರ್ ಉಡುಪುಗಳ ಲಾಭವನ್ನು ತೆಗೆದುಕೊಳ್ಳಿ ಹಾಗೂ ಅತ್ಯುತ್ತಮವಾಗಿ ಕಾಣುವಂತಹ ಆಧುನಿಕ ಶೇರ್ವಾನಿಯನ್ನು ಆಯ್ಕೆಮಾಡಿಕೊಳ್ಳಿ! ಒಂದು ಅನನ್ಯ ನೋಟಕ್ಕಾಗಿ, ನೀವು ವಿಶಿಷ್ಟವಾದ ಟ್ವಿಸ್ಟ್‌ಗಳನ್ನು ಹೊಂದಿರುವಂತಹ ಆಧುನಿಕ ಶೇರ್ವಾನಿಯಾದ ಪಥಾನಿ ಶೇರ್ವಾನಿ ಪ್ಯಾಟರ್ನ್‌ಗಳನ್ನು ಒಮ್ಮೆ ಪ್ರಯೋಗಿಸಬಹುದು, ಲೋಪವಿಲ್ಲದ ಪಲಾಝೋ ಶೈಲಿಯ ಶೇರ್ವಾನಿಗಳು ಮತ್ತು ಸರಿಯಾಗಿ ಹೊಂದಿಕೊಳ್ಳುವ ಜಾಕೆಟ್ ಮಾದರಿ ಮತ್ತು ಅದಕ್ಕಿಂತ ಹೆಚ್ಚಿನ ಶೇರ್ವಾನಿಗಳನ್ನು ಧರಿಸಿ ನೋಡಬಹುದು! ನೀವಿನ್ನೂ ಗೊಂದಲದಲ್ಲಿದ್ದರೆ ಮತ್ತು ಸಾಂಪ್ರದಾಯಕ ಮತ್ತು ಆಧುನಿಕ ವಿನ್ಯಾಸಗಳ ಮಿಶ್ರಣವನ್ನು ಬಯಸಿದ್ದರೆ, ಜೋಧಪುರಿ ಶೈಲಿಯ ಶೇರ್ವಾನಿಗಳನ್ನು/ಸ್ಯೂಟ್‌ಗಳನ್ನು ಆಯ್ಕೆಮಾಡಿ!

ನಿಮ್ಮ ದೇಹರಚನೆಗೆ ಪರಿಪೂರ್ಣವಾದುದನ್ನು ಪಡೆಯಿರಿ:

ನಿಮ್ಮ ಶೇರ್ವಾನಿಯು ಎಷ್ಟು ವೈಶಿಷ್ಟ್ಯದಿಂದ ಕೂಡಿದೆ ಎಂಬ ಬಗ್ಗೆ ಯೋಚನೆ ಮಾಡಬೇಡಿ, ನಿಮ್ಮ ಶೇರ್ವಾನಿಯು ನೋಡಲು ಎಷ್ಟು ರಾಜವೈಭವದಿಂದ ಮತ್ತು ಆಕರ್ಷಣೀಯವಾಗಿದೆ ಎಂದು ಆಲೋಚಿಸಬೇಡಿ, ಅದು ನಿಮ್ಮ ದೇಹರಚನೆಗೆ ಸರಿಯಾಗಿ ಹೊಂದಿಕೊಳ್ಳದಿದ್ದರೆ, ಅದು ತನ್ನ ಜಾದುವನ್ನು ಹರಡುವಲ್ಲಿ ವಿಫಲಗೊಳ್ಳುತ್ತದೆ. ಸರಿಯಾದ ಶೈಲಿ ಮತ್ತು ವಿನ್ಯಾಸವನ್ನು ಆಯ್ಕೆ ಮಾಡಿದ ನಂತರ, ನೀವು ಅದನ್ನು ಸರಿಯಾಗಿ ಅಳವಡಿಸಿಕೊಳ್ಳಬೇಕು. ತುಂಬ ಬಿಗಿಯಾಗಿ ಮತ್ತು ಅಸಹನೀಯವಾಗಿ ಮಾಡಬೇಡಿ ಅಥವಾ ಅದನ್ನು ತುಂಬಾ ಸಡಿಲ ಮತ್ತು ನಿಸ್ತೇಜಗೊಳಿಸಬೇಡಿ! ನೀವು ಅಸಾಧಾರಣವಾದ ಅನನ್ಯತೆಯನ್ನು ಶೇರ್ವಾನಿ ಮೂಲಕ ತೋರಿಸುತ್ತಿರುವಾಗ, ನಿಮ್ಮ ಉದ್ದ ಮತ್ತು ತೂಕಕ್ಕೆ ಅಳವಡಿಸಬಹುದಾದ ಪರಿಪೂರ್ಣ ಫಿಟ್ ಅನ್ನು ಪಡೆಯಿರಿ!

ಶೆರ್ವಾನಿ ಅನ್ನು ಆಯ್ಕೆ ಮಾಡುವಾಗ ಈ 5 ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಇವು ಅತ್ಯಂತ ಪ್ರಮುಖವಾದ ಅಂಶಗಳಾಗಿವೆ, ಇದು ಪರಿಪೂರ್ಣ ಶೈಲಿಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ! ಅತ್ಯುತ್ತಮವಾದ ರೀತಿಯಲ್ಲಿ ನಿಮ್ಮ ದೇಹರಚನೆಗೆ ಹೊಂದಿಕೊಳ್ಳುವ ಶೇರ್ವಾನಿಯಿಂದ ಉತ್ತಮವಾದ ನೋಟವನ್ನು ಪಡೆಯಿರಿ ಹಾಗೂ ನಿಮ್ಮ ಆಯ್ಕೆಗಳ ಜೊತೆಗೆ ನೀವು ಒಬ್ಬ ಹೊಸ ಫ್ಯಾಷನ್‌ನ ವಿನ್ಯಾಸಗಾರನಾಗಿ ಬದಲಾಗಿರಿ!

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
251 views
Matrimonial
251 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
298 views
Match Making
298 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
338 views
Astrology in Marriage
338 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category