0 Shares 140 Views
00:00:00
24 Mar

ಭಾರತೀಯ ವಿವಾಹದ ಶಾಪಿಂಗ್ ಮಾರ್ಗದರ್ಶಿ

January 15, 2018
140 Views

ನಿಮ್ಮ ಮದುವೆಯ ದಿನಗಳನ್ನು ನಿಗದಿಪಡಿಸಿದ ನಂತರ, ನೀವು ಬಹುಶಃ ಯೋಚಿಸುವ ಮೊದಲ ವಿಚಾರವೇ ಶಾಪಿಂಗ್ ಮಾಡುವುದು. ಇದು ಮಾತ್ರ ನಡೆಯುವುದಿಲ್ಲ ಏಕೆಂದರೆ ಅದೊಂದೇ ಅತಿಮುಖ್ಯ, ಅದು ಮದುವೆಯ ಭಾವನೆಯನ್ನು ಮೂಡಿಸುತ್ತ, ಬಾಕಿ ಎಲ್ಲಾ ಉಳಿದ ಅಂಶವು ನಂತರದ ಸರದಿಯಲ್ಲಿ ಬರುತ್ತದೆ. ಶಾಪಿಂಗ್ ಎಂಬುದು ಕೇವಲ ಭಾವಪರವಶವಾಗುವ ಬಟ್ಟೆಗಳ ಖರೀದಿಯನ್ನು ಮಾತ್ರ ಒಳಗೊಂಡಿರುವುದಿಲ್ಲ, ಆದರೆ ಅದರ ಜೊತೆಗೆ ಒಂದು ನವೀನ ಆರಂಭವನ್ನು ಬಯಸುವ ಅಂಶಗಳನ್ನು ಸಹ ಒಳಗೊಂಡಿರುತ್ತದೆ. ಹೀಗಾಗಿ, ಮದುವೆ ಸಮಾರಂಭಕ್ಕೆ ಅಲಂಕಾರವಾಗುವ ಬಟ್ಟೆಗಳಿಂದ ಹಿಡಿದು ಖರೀದಿಸುವುದಕ್ಕೆ ಬಹುತೇಕ ವಸ್ತುಗಳನ್ನು ಇರುತ್ತವೆ. ನಾವು ನಿಮಗೆ ಪರಿಶೀಲನಾಪಟ್ಟಿ (ತಾಳೆ ಪಟ್ಟಿ) ಅನುಸರಿಸುವಂತೆ ಮತ್ತು ಸಮಾರಂಭಕ್ಕೆ ಬಹು ಸುಂದರವಾಗಿ ಅಲಂಕಾರಗೊಳ್ಳಲು ಸಹಾಯವಾಗುವಂತ ಸರಳವಾದ ಒಂದು ಶಾಪಿಂಗ್ ಮಾರ್ಗದರ್ಶಿಯನ್ನು ನೀಡುತ್ತಲಿದ್ದೇವೆ.

ನಿಮ್ಮ ಬಜೆಟ್ ಅನ್ನು ಸಿದ್ಧಪಡಿಸಿಕೊಳ್ಳಿ

ನೀವು ಖರೀದಿಸಲು ಅಗತ್ಯವಿರುವ ಎಲ್ಲ ವಸ್ತುಗಳ ವೆಚ್ಚವನ್ನು ಒಳಗೊಂಡಿರುವ ಬಜೆಟ್ ಅನ್ನು ನೀವು ಮಾಡಿಕೊಳ್ಳಬೇಕಾಗಿದೆ. ಬಟ್ಟೆ, ಆಭರಣಗಳು, ಸೌಂದರ್ಯವರ್ಧಕಗಳು, ಗೃಹೋಪಯೋಗಿ ವಸ್ತುಗಳು, ಉಡುಗೊರೆಗಳು, ಬಟ್ಟೆಯ ಗವಸುಗಳು ಮತ್ತು ಹೆಚ್ಚಿನವುಗಳು ನಿಮಗೆ ಅಗತ್ಯವಿರುವ ಕೆಲವು ಸಾಮಾನ್ಯ ವಸ್ತುಗಳಾಗಿವೆ. ಈ ಪ್ರಕ್ರಿಯೆಯು ನಿಮ್ಮನ್ನು ಬಜೆಟ್‌ನೊಳಗೆ ಉಳಿಯಲು ಸಹಾಯ ಮಾಡುತ್ತದೆ ಮತ್ತು ನೀವು ಅತಿಯಾದ ಖರ್ಚುಮಾಡುವುದರಿಂದ ತಡೆಯುತ್ತದೆ.

ನಿಮ್ಮ ಪರಿಶೀಲನಾಪಟ್ಟಿಗಳನ್ನು ಮಾಡಿಕೊಳ್ಳಿ

1. ನಿಮಗೆ ಅಗತ್ಯ ಬೀಳಲಿರುವ ವಸ್ತುಗಳ ಪಟ್ಟಿಯನ್ನು ಮಾಡಿಕೊಳ್ಳಿ ಅಥವಾ ಒಂದು ಶಾಪಿಂಗ್ ಗೈಡ್ ಮಾರ್ಗದರ್ಶಿಯನ್ನು ರಚಿಸಿಕೊಳ್ಳಿ. ಸಂಬಂಧಪಟ್ಟ ಜನರಿಗಾಗಿ ನಿಮಗೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಇವುಗಳು ಹೊಂದಿರುತ್ತದೆ, ಉದಾಹರಣೆಗೆ, ವಧು, ವರ, ಸಂಬಂಧಿಕರು, ಸ್ನೇಹಿತರು, ಮತ್ತು ಹೆಚ್ಚಿನವುಗಳು. ವಧುವಿಗಾಗಿ ಮಾಡಿದ ಪಟ್ಟಿಯಲ್ಲಿ ಬಟ್ಟೆ, ಆಭರಣ, ಮೇಕಪ್ ಮತ್ತು ಹೆಚ್ಚಿನದನ್ನು ಹೊಂದಿರಬೇಕು. ವರನಿಗಾಗಿ ಮಾಡಿದ ಪಟ್ಟಿಯು ಸಾಂಪ್ರದಾಯಿಕ ಅವಶ್ಯಕತೆಗಳು ಅಥವಾ ಅತನ ಆದ್ಯತೆಗಳ ಪ್ರಕಾರ ಇರಬೇಕು.

2. ಸಂಬಂಧಿಕರಿಗಾಗಿ ನೀಡಲಾಗುವ ಉಡುಗೊರೆಗಳ ಬೇರೆ ಪಟ್ಟಿಯನ್ನು ರಚಿಸಿ. ಇದಕ್ಕಾಗಿ ನಿಮಗೆ ಒಂದು ಪಟ್ಟಿಯ ಅಗತ್ಯ ಬೀಳಲಿದೆ. ಏಕೆಂದರೆ ನೀವು ಯಾವುದೇ ಒಂದನ್ನೂ ಕೂಡ ತಪ್ಪಿಸಿಕೊಳ್ಳದಂತೆ ಖಚಿತಪಡಿಸಿಕೊಳ್ಳಲು ಈ ಪಟ್ಟಿ ಸಹಾಯಕ್ಕೆ ಬರುತ್ತದೆ. ಭಾರತೀಯ ವಿವಾಹ ಸಮಾರಂಭದ ಪೂರ್ವ ಮತ್ತು ನಂತರದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯದ ವಸ್ತುಗಳ ಪಟ್ಟಿಯನ್ನು ನೀವು ಮಾಡಬೇಕಾಗಿದೆ.

3. ವಧುವರರು ತಮ್ಮದೇ ಆದ ಅವಶ್ಯಕತೆಗಳ ಸೆಟ್ ಅನ್ನು ಹೊಂದಿರುತ್ತಾರೆ ಮತ್ತು ನಾವು ಅವುಗಳನ್ನು ಜೋಡಿಸಿಕೊಳ್ಳಬೇಕಾದ ಅಗತ್ಯ ಬೀಳುತ್ತದೆ. ಯಾವುದೇ ಖರೀದಿ ಮಾಡುವ ಮುನ್ನ ನೀವು ವಧುವರರನ್ನು ಸಂಪರ್ಕಿಸಿ ಅವರ ಇಚ್ಛಾನುಸಾರ ಖರೀದಿಸಿ. ಒಂದು ಹೊಸ ಕುಟುಂಬಕ್ಕಾಗಿ ಉಡುಗೊರೆಗಳನ್ನು ಖರಿದಿಸುವ ವಿಚಾರದಲ್ಲಿ ಅವರ ಜೀವನಶೈಲಿ, ಉದ್ಯೋಗ, ಮತ್ತು ಆದ್ಯತೆಗಳಿಗೆ ಹೆಚ್ಚು ಒತ್ತುಕೊಡಬೇಕಾಗುತ್ತದೆ.

4. ಅಂತಿಮವಾಗಿ, ಮದುವೆಯ ಧಾರ್ಮಿಕ ಆಚರಣೆಗಳಿಗೆ ಪಟ್ಟಿಯಲ್ಲಿರುವ ಅಗತ್ಯದ ವಸ್ತುಗಳನ್ನು ಕೊಂಡುಕೊಳ್ಳಬೇಕು. ಈ ರೀತಿಯ ಶಾಪಿಂಗ್ ಅನ್ನು ಪ್ರತ್ಯೇಕವಾಗಿ ಮಾಡಬೇಕು ಮತ್ತು ಮದುವೆಯ ಪುರೋಹಿತರ ಸೂಚನೆಗಳನ್ನು ಅನುಸರಿಸಬೇಕು.

ಮುಂಚಿತವಾಗಿ ಖರೀದಿಗಳನ್ನು ಮಾಡಿ

ಭಾರತೀಯ ವಿವಾಹಕ್ಕಾಗಿ ಸರಿಯಾದ ಶಾಪಿಂಗ್ ಮಾರ್ಗದರ್ಶಿಯನ್ನು ಅನುಸರಿಸಲು, ನೀವು ಮುಂದೆ ಒಂದು ಯೋಜನೆಯನ್ನು ಪ್ರಾರಂಭಿಸಬೇಕು. ಎಲ್ಲವನ್ನೂ ಕೊನೆಯ ಕ್ಷಣದವರೆಗೆ ಇಟ್ಟುಕೊಳ್ಳಬೇಡಿ ಏಕೆಂದರೆ ಅದರ ಅರ್ಥ ಹೆಚ್ಚು ಖರ್ಚು. ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ಅಥವಾ ಉಡುಪುಗಳನ್ನು ಕಾಯ್ದಿರಿಸಿಕೊಳ್ಳಲು ಒಂದು ವರ್ಷದವರೆಗೆ ರಿಯಾಯಿತಿಗಳು ಮತ್ತು ಮಾರಾಟದ ಬಗ್ಗೆ ನಿಮಗೆ ಎಚ್ಚರವಿರಲಿ. ಭಾರತೀಯ ವಿವಾಹ ಸಂಪ್ರದಾಯವು ಸುದೀರ್ಘಕಾಲದ ಸಂಬಂಧವಾಗಿದೆ ಮತ್ತು ಸಾಮಾನ್ಯವಾಗಿ ಅದು ಅತ್ಯಲ್ಪಕಾಲದಲ್ಲಿ ನಡೆಯುವುದಿಲ್ಲ, ಆದ್ದರಿಂದ ನೀವು ಸಾಕಷ್ಟು ಸಮಯವನ್ನು ಹೊಂದಿಸಿಡಬೇಕು.

ನಿರ್ವಹಿಸಬೇಕಾದ ಸಮಸ್ಯೆಗಳು

ನಿಮ್ಮ ದೊಡ್ಡ ಬಜೆಟ್ ಅಥವಾ ಸ್ವಲ್ಪ ಸಮಯ ಇರಬಹುದು ಹಾಗೂ ಅದು ನಿಮ್ಮನ್ನು ತ್ವರಿತಗತಿಯ ಖರೀದಿಗಳ ಮೂಲಕ ತಲುಪಿಸುತ್ತದೆ. ಆದಾಗ್ಯೂ, ನಿಮ್ಮ ಉತ್ಪನ್ನಗಳು ಗುಣಮಟ್ಟದ್ದವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ನೀವು ಈಗಾಗಲೇ ಖರೀದಿಸಿದ ಅಂಗಡಿಗಳನ್ನು ಆಯ್ಕೆ ಮಾಡಲು ಪ್ರಯತ್ನಿಸಿ, ಏಕೆಂದರೆ ಅವರು ನಿಮಗೆ ಉತ್ಪನ್ನಗಳನ್ನು ಉತ್ತಮ ದರದಲ್ಲಿ ನೀಡುತ್ತಾರೆ. ಯಾರಿಂದ ನೀವು ಯಾವಾಗಲೂ ಉತ್ಪನ್ನಗಳನ್ನು ಖರೀದಿಸಿ ತಂದಿರುತ್ತೀರೋ ಅಂಥ ಅಂಗಡಿಗೆ ನೀವು ಏನನ್ನಾದರೂ ಸುಲಭವಾಗಿ ಹಿಂದಿರುಗಿಸಬಹುದು, ನೀವು ಖರೀದಿಸಿದ ವಸ್ತುಗಳಿಗೆ ಅಂಗಡಿಯವರು ಕೊಟ್ಟಂಥ ರಸೀದಿಯನ್ನು (ರಿಸೀಪ್ಟ್) ಪಡೆದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ಇದರಿಂದ, ಹಿಂತಿರುಗಿಸಬಹುದಾದ ಸಾಧ್ಯತೆ ಹೆಚ್ಚಾಗಿರುತ್ತದೆ.

ಈ ಶಾಪಿಂಗ್ ಮಾರ್ಗದರ್ಶಿಯು ನಿಮ್ಮ ಮೂಲಭೂತ ಅಂಶಗಳ ಮೂಲಕ ಕರೆದೊಯ್ಯುತ್ತದೆ. ಅದನ್ನು ನೀವು ಅನುಸರಿಸಬೇಕಾದ ಅಗತ್ಯವಿದೆ. ನಿಮ್ಮ ಬಜೆಟ್ ಇಲ್ಲಿ ಅತ್ಯಮೂಲ್ಯವಾದ ಅಂಶವಾಗಿ ಕೆಲಸ ಮಾಡುತ್ತದೆ. ಹಾಗಾಗಿ ಪ್ರತೀ ಪರಿಶೀಲನಾಪಟ್ಟಿಗಾಗಿ ನಿರ್ದಿಷ್ಟ ಮೊತ್ತವನ್ನು ನೀವು ವಿಂಗಡಿಸುವುದರಿಂದ ಅದು ನಿಮಗೆ ಬಹಳಷ್ಟು ರೀತಿಯಲ್ಲಿ ಸಹಾಯಕ್ಕೆ ಬರಲಿದೆ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
207 views
Matrimonial
207 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
236 views
Match Making
236 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
241 views
Astrology in Marriage
241 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category