0 Shares 409 Views
00:00:00
18 Jan

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

April 6, 2018
409 Views

“ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ” ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ ನಡೆಸಲು, ಪರಸ್ಪರ ಬೆಂಬಲದೊಂದಿಗೆ ಜೀವಿಸಲು ಖಂಡಿತವಾಗಿಯೂ ಶಪಥದ ಪ್ರತಿಜ್ಞೆಯನ್ನು ನಡೆಸಲಾಗುತ್ತದೆ. ಜೀವನದ ಆಗುಹೋಗುಗಳ ನಡುವೆ, ಏರುಪೇರುಗಳ ಸಂದಿಗ್ಧ ಪರಿಸ್ಥಿತಿಯಲ್ಲಿ ಕೈಬಿಡದಂತೆ ಸದಾ ಜೊತೆಯಾಗಿಯೇ ಇರುತ್ತೇವೆಂದು ಒಬ್ಬರಿಗೊಬ್ಬರು ವಚನ ನೀಡುತ್ತಾರೆ.

ಕೆಲವೊಮ್ಮೆ, ಸೂಕ್ತವಾದ ಸಂಗಾತಿಯನ್ನು ಕಂಡುಕೊಳ್ಳುವುದು ಅವರಿಗೆ ಬಹಳ ಕಷ್ಟವಾಗುತ್ತದೆ. ಮದುವೆಯಲ್ಲಿ ವಿಳಂಬವಾಗಲು ಕಾರಣವೇನು? ಈ ಬಗೆಯ ಪ್ರಶ್ನೆಯು ನಿಮ್ಮ ಮನಸ್ಸಿನಲ್ಲಿ ಚಿಂತಾಜನಕ ಸ್ಥಿತಿಯನ್ನು ಮೂಡಿಸುತ್ತವೆ. ಈ ಪ್ರಶ್ನೆಗೆ ಉತ್ತರವನ್ನು ನಿಮ್ಮ ಮನೆಯ ದಿಕ್ಕಿನಲ್ಲಿ ಮತ್ತು ಸ್ಥಳದಲ್ಲಿ ಕಂಡುಕೊಳ್ಳಬಹುದಾಗಿದೆ. ವಾಸ್ತುವಿನಲ್ಲಿ ನಿಮ್ಮ ಸಮಸ್ಯೆಗಳಿಗೆ ಎಲ್ಲಾ ಬಗೆಯ ಪರಿಹಾರಗಳು ಇವೆ. ದಿಕ್ಕಿನ ವಿಜ್ಞಾನವು ನಿಮ್ಮ ಮದುವೆಯಲ್ಲಿ ಒಂದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಶುಭಪ್ರದ ದಿಕ್ಕು ಇರುತ್ತದೆ, ಹಾಗೂ ನಿಮ್ಮ ಮದುವೆಯ ದಿಕ್ಕು ಸೂಕ್ತವಾದ ದಿಕ್ಕಿನಲ್ಲಿ ಇಲ್ಲದಿದ್ದರೆ, ಆಗ ಅದು ನಿಮ್ಮ ತಡವಾದ ಮದುವೆಗೆ ಕಾರಣವಾಗಬಹುದು.

ವಾಸ್ತುವು ಹೇಗೆ ಸಹಾಯ ಮಾಡಬಲ್ಲದು

ವಾಸ್ತು ತತ್ವಗಳು ಮಾನವರ ದೈನಂದಿನ ಚಟುವಟಿಕೆಗಳ ಬಗ್ಗೆ ತುಂಬಾ ಕಾಳಜಿಯನ್ನು ವಹಿಸುತ್ತವೆ. ಮನೆಯೊಳಗಿನ ಶಾಂತಿ ಮತ್ತು ಸಮೃದ್ಧಿಗಾಗಿ ಧನಾತ್ಮಕ ಕಂಪನಗಳನ್ನು ಆಕರ್ಷಿಸಬೇಕೆಂಬ ಉದ್ದೇಶವು ಈ ವಾಸ್ತು ತತ್ವದಲ್ಲಿ ಅಡಕವಾಗಿದೆ. ದಿಕ್ಕುಗಳ ವಿಜ್ಞಾನವು ನಿಮ್ಮ ಒಟ್ಟಾರೆ ಆರೋಗ್ಯ, ಸಂಪತ್ತು, ಮದುವೆ ಮತ್ತು ಶಿಕ್ಷಣದ ವಿಚಾರಗಳ ಮೇಲೆ ಪ್ರಭಾವ ಬೀರುತ್ತದೆ.

ದಿಕ್ಕುಗಳ ವಿಜ್ಞಾನಕ್ಕೆ ಅನುಗುಣವಾಗಿ, ನಿಮ್ಮ ಮನೆಯಲ್ಲಿ ಮದುವೆ (ವಿವಾಹಸ್ಥಾನ)ಯ ವಿಭಾಗವನ್ನು ಒಂದು ಹಿತಕರ ದಿಕ್ಕಿನಲ್ಲಿ ಇರುವಂತೆ ಮಾಡಬೇಕು. ಹಾಗೂ ಆ ನಿರ್ದಿಷ್ಟ ವಿಭಾಗವು ಉದ್ದದಲ್ಲಿ ಕಿರಿದಾಗಿ ಇರಬಾರದು. ಮನೆಯಲ್ಲಿರುವ ವಿವಾಹದ ವಿಭಾಗವು ಕಿರಿದಾಗಿ ಅಥವಾ ಚಿಕ್ಕಗಾತ್ರದಲ್ಲಿದ್ದರೆ, ಆಗ ಅದು ಮದುವೆಯಲ್ಲಿ ಅಡೆತಡೆಗಳನ್ನು ಉಂಟುಮಾಡಬಲ್ಲದು ಅಥವಾ ಅದು ನಿಮ್ಮ ಮದುವೆಯನ್ನು ಮುಂದೂಡಬಹುದು.

ಮನೆಯ ವಿವಾಹದ ವಿಭಾಗದಲ್ಲಿ ಶೌಚಾಲಯ /ಸ್ನಾನದಕೋಣೆ ಇಲ್ಲವೆಂದು ಖಚಿತಪಡಿಸಿಕೊಳ್ಳಿ ಮತ್ತು ಆ ಸ್ಥಳದಲ್ಲಿ ದೀರ್ಘಕಾಲದವರೆಗೆ ಭಾರವಾದ ವಸ್ತುಗಳನ್ನು ಇರಿಸುವುದನ್ನು ತಪ್ಪಿಸಿ. ನೀವು ಮದುವೆಯಾಗಲು ಹೊರಟಿದ್ದರೆ, ಮದುವೆಯಾಗಿದ್ದರೆ ನಿಮ್ಮ ಮಲಗುವ ಕೋಣೆಯಲ್ಲಿಯೇ ನೀವು ನಿದ್ರಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಹಾಗೂ ಮದುವೆಯಲ್ಲಿ ಯಾವುದೇ ವಿಳಂಬವನ್ನು ತಪ್ಪಿಸಲು ನಿಮ್ಮ ಅನುಕೂಲಕರ ದಿಕ್ಕನ್ನು ಖಾತ್ರಿಮಾಡಿಕೊಳ್ಳಿ. ಆ ಸ್ಥಳದಲ್ಲಿ ಯಾವುದೇ ಕಸವಾಗಲೀ ಅಥವಾ ಕೊಳಕಾಗಲೀ ಇರುವಂತಿಲ್ಲ ಹಾಗೂ ಅದು ಗೊಂದಲದಿಂದ ತುಂಬಿರುವ ಗೂಡಾಗುವಂತಿಲ್ಲ ಮತ್ತು ಯಾವಾಗಲೂ ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಈ ಮಾರ್ಗಸೂಚಿಗಳನ್ನು ಅನುಸರಿಸದೆ ಇದ್ದ ಪಕ್ಷದಲ್ಲಿ, ಆಗ ಶಕ್ತಿಯ ಹರಿವಿನಲ್ಲಿ ಅಸಮತೋಲನವನ್ನು ಉಂಟುಮಾಡಬಹುದು ಮತ್ತು ಮದುವೆಯಲ್ಲಿ ವಿಳಂಬವಾಗಲು ಕಾರಣವಾಗಬಹುದು.

ಮದುವೆ ಎಂಬುದು ಎಲ್ಲಾ ಪವಿತ್ರ ಆಚರಣೆಗಳು ಮತ್ತು ಸಂಪ್ರದಾಯಗಳಿಂದ ತುಂಬಿರುತ್ತದೆ. ಮದುವೆಯಲ್ಲಿ ವಾಸ್ತು ಎಂಬುದು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ; ಇದು ಮದುವೆಯ ಪ್ರಸ್ತಾಪಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಹಾಗೂ ಅದು ಸಂತೋಷದ ಮತ್ತು ಆರೋಗ್ಯಕರ ವೈವಾಹಿಕ ಜೀವನವನ್ನು ಕಾಪಾಡಿಕೊಳ್ಳುತ್ತದೆ. ಸರಳ ವಾಸ್ತುವು ಸರಳವಾಗಿರುವ, ಅನನ್ಯವಾದ ವಾಸ್ತು ಪರಿಹಾರೋಪಾಯಗಳನ್ನು ನಿಮಗೆ ಒದಗಿಸುತ್ತದೆ. ನಿಮ್ಮ ಅನುಕೂಲಕರ ದಿಕ್ಕನ್ನು ತಿಳಿದುಕೊಳ್ಳಲು ಸರಳವಾಸ್ತು ತಜ್ಞರು ನಿಮಗೆ ಸಹಾಯ ಮಾಡುತ್ತಾರೆ. ನಮ್ಮ ತಜ್ಞರು ನಿಮಗೆ ಅಮೂಲ್ಯವಾದ ವಾಸ್ತು ಪರಿಹಾರೋಪಾಯಗಳನ್ನು ನೀಡುತ್ತಾರೆ ಮತ್ತು ಮದುವೆಯ ವಿಳಂಬವನ್ನು ತಪ್ಪಿಸಲು ಮದುವೆಯ ದಿಕ್ಕನ್ನು ಹೇಗೆ ಬಳಸಿಕೊಳ್ಳಬೇಕೆಂದು ಅವರು ನಿಮಗೆ ಮಾರ್ಗದರ್ಶನ ನೀಡುತ್ತಾರೆ.

ನೀವು ಮೂರರಿಂದ ಎಂಟು ತಿಂಗಳೊಳಗೆ ಫಲಿತಾಂಶಗಳನ್ನು ನೋಡಬಹುದು ಮತ್ತು ಸರಳ ವಾಸ್ತುವಿನ ಪವಿತ್ರ ತತ್ವಗಳನ್ನು ಅನುಷ್ಠಾನಗೊಳಿಸಿದ ನಂತರವಷ್ಟೇ ನೀವು ಮದುವೆ ಪ್ರಸ್ತಾಪಗಳನ್ನು ಪಡೆಯಬಹುದು ಮತ್ತು ನೀವು ಮುಂದೆ ಒಂದು ಸೊಗಸಾದ ಮತ್ತು ಶಾಂತಿಯುತ ಜೀವನವನ್ನು ನಡೆಸಬಹುದು!

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
352 views
Matrimonial
352 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
585 views
Astrology in Marriage
585 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

ಮಂಗಳನು ಎಂಟು ಮನೆಯಲ್ಲಿರುವಂತಹ ಮದುವೆ
Astrology in Marriage
408 views
Astrology in Marriage
408 views

ಮಂಗಳನು ಎಂಟು ಮನೆಯಲ್ಲಿರುವಂತಹ ಮದುವೆ

Saral Marriage - March 30, 2018

ಮಂಗಳ ಗ್ರಹವು ಎಂಟನೇ ಮನೆಯಲ್ಲಿರುವಾಗ, ವ್ಯಕ್ತಿಯ ಮೇಲೆ ಹಾಗೂ ಜೀವನ ಸಂಗಾತಿಯ ಮೇಲೂ ಸಹ ಆ ಗ್ರಹವು ಅತ್ಯಂತ ಸೂಕ್ಷ್ಮವಾದ ಮತ್ತು ಅಪಾಯಕಾರಿ ಸ್ಥಳವಾಗಿರುತ್ತದೆ. ಇದು ವ್ಯಕ್ತಿಯ ಸಂಬಂಧ, ಒಡನಾಟ, ಸಂತೋಷ, ಯೋಗಕ್ಷೇಮ, ಪ್ರಗತಿ, ಅಥವಾ ಮದುವೆಯ…

Leave a Comment

Your email address will not be published.

Most from this category