0 Shares 137 Views
00:00:00
24 Mar

ಭಾರತೀಯ ವಿವಾಹಗಳಲ್ಲಿ ಸಂಗೀತ ಕಚೇರಿಯನ್ನು ಏಕೆ ನಡೆಸುತ್ತಾರೆ ?

January 4, 2018
137 Views

ಸಂಗೀತವು ಅಭಿವ್ಯಕ್ತಿಗೊಳಿಸುವ ಅಂತಿಮ ಮೂಲವಾಗಿದೆ! ಭಾರತೀಯ ಸಂಸ್ಕೃತಿಯು ಸಂಗೀತದಲ್ಲಿ ಬಹು ಸುಂದರವಾದ ವೈವಿಧ್ಯತೆಯನ್ನು ಹೊಂದಿದೆ. ಸಂತೋಷ, ದುಃಖ ಮತ್ತು ವಿಭಿನ್ನ ಅಭಿವ್ಯಕ್ತಿಗಳಿಗಾಗಿ, ನಮ್ಮ ಬಳಿ ಅನೇಕ ಸುಂದರವಾದ ಸಂಗೀತವಿದೆ! ‘ಸಂಗೀತ’ ಎಂಬ ಪದವನ್ನು ಅರ್ಥವೆಂದರೆ ‘ಒಟ್ಟಿಗೆ ಸಂಗೀತ ಹಾಡುವುದು’! ಈ ಅದ್ಭುತ ಸಮಾರಂಭವು ಸಂಗೀತದೊಂದಿಗೆ ವಿವಾಹದ ಆಚರಣೆಗಳನ್ನು ಮಾಡುವಂತಹ ಸಂಪ್ರದಾಯವನ್ನು ಮಾತ್ರ ಹೊಂದಿರುವುದಲ್ಲದೆ ಒಗ್ಗಟ್ಟಾಗಿ ಆಚರಣೆಯನ್ನು ಸಂತೋಷದಿಂದ ಸಂಭ್ರಮಿಸುವ ಕಾರ್ಯವನ್ನು ಹೆಚ್ಚಿಸುತ್ತದೆ!

ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಕೆಲವು ಅದ್ಭುತ ಸಂಗೀತವು ಸೇರಿದಾಗ ಯಾವುದೇ ಕಾರ್ಯಕ್ರಮವು ಅವಿಸ್ಮರಣೀಯವಾಗುತ್ತದೆ! ಸಂಗೀತವು ಎಲ್ಲರನ್ನು ಒಗ್ಗೂಡಿಸುವಂತಹ ಮಾಂತ್ರಿಕತೆಯನ್ನು ಹೊಂದಿದೆ! ಖಂಡಿತವಾಗಿ ಸಂಗೀತ ಸಮಾರಂಭವು ಬಹಳಷ್ಟು ಸಂತೋಷದಿಂದ ಕೂಡಿರುತ್ತದೆ!

ಭಾರತೀಯ ವಿವಾಹಗಳಲ್ಲಿ ಸಂಗೀತ ಸಮಾರಂಭದ ಪ್ರಾಮುಖ್ಯತೆ ಇಲ್ಲಿದೆ!:

ಸಂಗೀತ ಸಮಾರಂಭವು ಮದುವೆಯ 3-4 ದಿನಗಳ ಸಂಭ್ರಮಾಚರಣೆಯ ಒಂದು ಅಂಗವಾಗಿದೆ. ಈ ಹಿಂದೆ, ಮಹಿಳೆಯರಿಗೆ ಸಂಗೀತ ಕಚೇರಿಯು ನಿರ್ಬಂಧಿಸಲಾಗಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರು ಮತ್ತು ಮಹಿಳೆಯರಿಬ್ಬರೂ ಭಾಗವಹಿಸುತ್ತಾರೆ ಮತ್ತು ಆ ಸಮಾರಂಭವನ್ನು ಅತೀವ ರೋಮಾಂಚನವನ್ನಾಗಿ ಮಾಡುತ್ತಾರೆ!

1. ಈ ಸಮಾರಂಭವನ್ನು ವಧು ಮತ್ತು ವರ ಇಬ್ಬರೂ ಕೂಡ ನಿರ್ವಹಿಸುತ್ತಾರೆ. ಕೆಲವೊಮ್ಮೆ ಇದನ್ನು ವಧುವಿನ ಮತ್ತು ವರನ ಮನೆಯಲ್ಲಿ ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತದೆ, ಆದರೆ ಕೆಲವೊಮ್ಮೆ ಎರಡೂ ಕುಟುಂಬಗಳು ಇದನ್ನು ಒಟ್ಟಿಗೆ ಆಚರಿಸುತ್ತವೆ. ಈ ಸಮಾರಂಭದಲ್ಲಿ, ಎಲ್ಲಾ ಮಹಿಳೆಯರು ಒಟ್ಟುಗೂಡುತ್ತಾರೆ ಮತ್ತು ಸಾಂಪ್ರದಾಯಿಕ ಮದುವೆಯ ಹಾಡುಗಳನ್ನು ‘ಡೋಲ್ಕಿ’ ಅಥವಾ ಇತರ ಸಂಗೀತ ವಾದ್ಯಗಳನ್ನು ನುಡಿಸಿ ಹಾಡುತ್ತಾರೆ.

2. ಹಿಂದೆ ಈ ಹಾಡುಗಳನ್ನು ಮದುವೆಗೂ ಮುನ್ನ ಪ್ರತಿ ಸಂಜೆ 8-10 ದಿನಗಳವರೆಗೆ ಮದುವೆಯ ತನಕ ಹಾಡಲಾಗುತ್ತಿತ್ತು. ಇದು ಮದುವೆಯ ಸಂತೋಷವನ್ನು ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ. ಇಂದಿನ ದಿನಗಳಲ್ಲಿ ಪ್ರದರ್ಶನದ ಪರಿಕಲ್ಪನೆಯು ಹೊರಹೊಮ್ಮಿದೆ. ವಧು ಮತ್ತು ವರನ ಕುಟುಂಬಗಳು ವಿವಿಧ ಹಾಡುಗಳನ್ನು ಹಾಡುವ ಮೂಲಕ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಹಾಗೆಯೇ, ವಧು ವರರು ಒಟ್ಟಿಗೆ ಪ್ರದರ್ಶನ ನೀಡಲು ನಿರ್ಧರಿಸುತ್ತಾರೆ ಮತ್ತು ಆ ಸಂಭ್ರಮಾಚರಣೆಯನ್ನು ಆನಂದಿಸುತ್ತಾರೆ. ಪ್ರತಿಯೊಬ್ಬರು ಕೆಲವು ದಿನಗಳ ಕಾಲ ತಮ್ಮ ಹಾಡು ನೃತ್ಯವು ಪರಿಪೂರ್ಣವಾಗಲು ಕೆಲವು ತಾಲೀಮುಗಳನ್ನು ಮಾಡುತ್ತಾರೆ.

3. ಇದು ಎಲ್ಲರನ್ನು ಒಟ್ಟುಗೂಡಿಸುತ್ತದೆ. ಕುಟುಂಬದ ಸದಸ್ಯರ ನಡುವಿನ ಬಂಧವು ಈ ಸಮಾರಂಭದೊಂದಿಗೆ ಹೆಚ್ಚಾಗುತ್ತದೆ. ಯಾವುದೇ ಕಾರ್ಯಕ್ರಮವನು ಹಾಡು ನೃತ್ಯಗಳಿಲ್ಲದೆ ಅಪೂರ್ಣವೆನಿಸುತ್ತದೆ ಮತ್ತು ಹೀಗಾಗಿ, ಈ ಸಮಾರಂಭವು ಕುಟುಂಬ ಸದಸ್ಯರಲ್ಲಿ ಬಹಳಷ್ಟು ಉತ್ಸಾಹವನ್ನು ಮತ್ತು ರೋಮಾಂಚನವನ್ನು ಉಂಟುಮಾಡುತ್ತದೆ. ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ, ಆಗಾಗ್ಗೆ ಕುಟುಂಬ ಸದಸ್ಯರನ್ನು ಭೇಟಿ ಮಾಡುವುದು ತುಂಬಾ ಕಷ್ಟ, ಹಾಗಾಗಿ, ತಾಲೀಮುಗಳು ಮತ್ತು ಆಚರಣೆಗಳಿಗಾಗಿ ಪ್ರತಿಯೊಬ್ಬರೂ ಒಟ್ಟುಗೂಡಿದಾಗ, ಒಗ್ಗಟ್ಟಿನ ಸಂತೋಷವನ್ನು ಸರಳವಾಗಿ ವಿವರಿಸಲು ಸಾಧ್ಯವಿಲ್ಲ! ನೃತ್ಯಕ್ಕಿಂತ ಮದುವೆಗೆ ಹೆಚ್ಚಿನ ಉತ್ಸಾಹವನ್ನು ಸೇರಿಸಲು ಹೆಚ್ಚು ಆಸಕ್ತಿದಾಯಕ ಮಾರ್ಗ ಯಾವದೆ? ಕುಟುಂಬ ಸದಸ್ಯರಿಗೆ ಈ ವಿವಾಹದ ವೈಭವವನ್ನು ಸಂಪೂರ್ಣವಾಗಿ ಹಚ್ಚಿಸುತ್ತದೆ, ಏಕೆಂದರ ಇದು ಅವರ ಅತ್ಯಂತ ಅವಿಸ್ಮರಣೀಯ ಮತ್ತು ನಿರೀಕ್ಷಿತ ಸಮಾರಂಭವಾಗಿದೆ!

4. ವಧು ವರರು ಒಟ್ಟಾಗಿ ಪೂರ್ವಾಭ್ಯಾಸ ನಡೆಸುವಾಗ ಒಂದು ಸುಂದರವಾದ ಸಮಯವನ್ನು ಕಳೆಯುತ್ತಾರೆ. ವಧು ವರರು ಸಾಮಾನ್ಯವಾಗಿ ಸಂಗೀತ ಸಮಾರಂಭದಲ್ಲಿ ಒಟ್ಟಿಗೆ ಪ್ರದರ್ಶನ ನೀಡುತ್ತಾರೆ! ಮದುವೆಯ ಸಮಾರಂಭಗಳು ಮತ್ತು ವ್ಯವಸ್ಥೆಗಳ ನಡುವೆ, ಇದು ಅವರ ಸಂಬಂಧವನ್ನು ಗಟ್ಟಿಗೊಳಿಸುವ ಮತ್ತು ಗುಣಮಟ್ಟದ ಸಮಯವನ್ನು ಒಟ್ಟಾಗಿ ವಿವಾಹ ಪೂರ್ವದಲ್ಲಿ ಕಳೆಯಲು ಇರುವ ಒಂದು ಅದ್ಭುತ ಕಾಲಾವಧಿಯಾಗಿದೆ! ಇದು ವಧು ಮತ್ತು ವರನು ಒಟ್ಟಾಗಿ ವಿಶ್ರಾಂತಿ ತೆಗೆದುಕೊಳ್ಳುವ ಹಾಗೂ ಒಬ್ಬರಿಗೊಬ್ಬರು ಆನಂದಿಸುವ ಒಂದು ಪ್ರಣಯ ಕಾಲವಾಗಿದೆ!

5. ಸಂಗೀತ ಸಮಾರಂಭವು ಅಸಾಧಾರಣವಾದ ಒಂದು ವಿವಾಹದ ಸಮಾರಂಭವಾಗಿದೆ, ಇದರಲ್ಲಿ ಮಹಿಳೆಯರು ಒಟ್ಟುಗೂಡಿ ಸಾಂಪ್ರದಾಯಿಕ ವಿವಾಹದ ಹಾಡುಗಳನ್ನು ಹಾಡುತ್ತಾರೆ, ಜನರು ವಧು ವರರ ಸಮಕ್ಷಮದಲ್ಲಿ ಒಟ್ಟಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ, ಹಾಗೆಯೇ ವಧು ವರರು ಕೂಡ ಒಂದು ಬಹು ಸುಂದರವಾದ ಪ್ರದರ್ಶನವನ್ನೂ ಕೂಡ ಅರ್ಪಿಸುತ್ತಾರೆ. ಉಡುಗೊರೆಗಳನ್ನು ವಿನಿಮಯ ಮಾಡಲಾಗುತ್ತದೆ ಮತ್ತು ಕುಟುಂಬ ಸದಸ್ಯರು ಹಬ್ಬವನ್ನು ಒಟ್ಟಿಗೆ ಆನಂದಿಸುತ್ತಾರೆ!

ಹೀಗಾಗಿ, ಕುಟುಂಬ ಸದಸ್ಯರ ನಡುವೆ ಬಂಧವನ್ನು ಬೆಳೆಸಲು ಸಂಗೀತವನ್ನು ನಡೆಸಲಾಗುತ್ತದೆ ಹಾಗೂ ನೃತ್ಯ ಮಾಡುತ್ತಿರುವಾಗ ಮದುವೆಯ ಸಮಾರಂಭವನ್ನು ಆನಂದಿಸುತ್ತಾರೆ! ಪ್ರತಿಯೊಬ್ಬರು ತಮ್ಮ ಮುಕ್ತ ಮನಸ್ಸಿನಿಂದ ಹಾಡು ನೃತ್ಯದ ಮೂಲಕ ತಮ್ಮನ್ನು ತಾವು ಅಭಿವ್ಯಕ್ತಗೊಳಿಸಿಕೊಂಡು ಆ ವಿವಾಹ ಸಮಾರಂಭವನ್ನು ಒಂದು ಸುಂದರವಾದ ರೋಮಾಂಚನಕಾರಿ ಕ್ಷಣವನ್ನಾಗಿ ಬದಲಿಸುತ್ತಾರೆ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
206 views
Matrimonial
206 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
234 views
Match Making
234 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
240 views
Astrology in Marriage
240 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category