0 Shares 119 Views
00:00:00
21 Jan

ಮಂಟಪ ಸಮಾರಂಭವು ಏಕೆ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ?

December 21, 2017
119 Views

ಮದುವೆಯ ಪೂರ್ವ ಮತ್ತು ನಂತರದ ಸಮಾರಂಭಗಳು ಮೋಜು ಮತ್ತು ಸಾಹಸಗಳಿಂದ ತುಂಬಿರುತ್ತವೆ ವಧುವರರು ತಮ್ಮ ತಮ್ಮ ಕುಟುಂಬಗಳೊಂದಿಗೆ ಈ ಸಮಾರಂಭವನ್ನು ಆನಂದಿಸುತ್ತಾರೆ. ಆದರೆ ಅತ್ಯಂತ ಮುಖ್ಯವಾದ ಮತ್ತು ಮಹತ್ವದ ಸಮಾರಂಭವೆಂದರೆ ಮಂಟಪ ಸಮಾರಂಭವಾಗಿದೆ. ಹಲವು ಪ್ರಮುಖ ಆಚರಣೆಗಳನ್ನು ಮಂಟಪ ಸಮಾರಂಭದಲ್ಲಿ ನಡೆಸಲಾಗುತ್ತದೆ. ನವದಂಪತಿಗಳು ಆಹ್ವಾನಿತರಿಂದ ಆಶೀರ್ವದಿಸಲ್ಪಟ್ಟ ನಂತರ, ಮದುವೆಯ ಸಮಯದಲ್ಲಿ ಇದು ನಡೆಯುತ್ತದೆ. ಸಾಮಾನ್ಯವಾಗಿ, ಕುಟುಂಬ ಸದಸ್ಯರು ಮತ್ತು ನಿಕಟ ಸ್ನೇಹಿತರು ಮತ್ತು ಸಂಬಂಧಿಗಳು ಮಾತ್ರ ಮಂಟಪ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ. ಏಕೆಂದರೆ ಇದು ಪತಿ ಪತ್ನಿಯಿರಿಂದ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ.

ಮಂಟಪ:

ಮಂಟಪ ಎಂಬುದು ಮದುವೆಯ ಸ್ಥಳದಲ್ಲಿ, ಒಂದು ಸಾಂಪ್ರದಾಯಿಕವಾದ ತಾತ್ಕಾಲಿಕವಾಗಿ ಸ್ಥಾಪಿತವಾದ ಒಂದು ವ್ಯವಸ್ಥೆಯಾಗಿರುತ್ತದೆ. ಇದನ್ನು ಹೆಚ್ಚಾಗಿ ಒಂದು ಪವಿತ್ರವಾದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಮದುವೆಗಳು ಅದ್ಧೂರಿಯಿಂದ ಆಚರಿಸದೇ ಇದ್ದಂತಹ ಹಿಂದಿನ ದಿನಗಳಲ್ಲಿ ಮಂಟಪವನ್ನು ಸಾಮಾನ್ಯವಾಗಿ ವಧುವಿನ ಮನೆಯಲ್ಲಿ ಮಾಡಲಾಗುತ್ತಿತ್ತು. ಮಂಟಪವನ್ನು ಮೇಲ್ಛಾವಣಿಯಿಂದ ಮುಚ್ಚಲಾಗಿದ್ದು, ಅದರೊಂದಿಗೆ ಪ್ರತಿಯೊಂದು ಮೂಲೆಯಲ್ಲಿ ನಾಲ್ಕು ಸ್ತಂಭಗಳ ಆಧಾರದ ಮೇಲೆ ನಿಂತಿರುತ್ತವೆ.

ಮಂಟಪದಲ್ಲಿ ಧಾರ್ಮಿಕ ವಿಧಿಗಳು:

ಶುಭ ಲಗ್ನ ಅಥವಾ ವಿವಾಹ ಲಗ್ನದ ಸಮಯದಲ್ಲಿ ನಡೆಸಬೇಕಾದ ವಿವಿಧ ಧಾರ್ಮಿಕ ಆಚರಣೆಗಳನ್ನು ಮಂಟಪ್ ಸಮಾರಂಭದಲ್ಲಿ ನಡೆಸಲಾಗುತ್ತದೆ ಎಂದು ಪರಿಗಣಿಸಲಾಗಿದೆ. ಈ ಧಾರ್ಮಿಕ ವಿಧಿಗಳು ಎಂದರೆ ಫೇರೆ, ಸಿಂಧೂರ, ಮಂಗಲಸೂತ್ರ ಮತ್ತು ಕೆಲವೊಮ್ಮೆ ಹೂವಿನಹಾರ ವಿನಿಮಯ. ಮಾವಿನ ಎಲೆಗಳು, ಕಳಸ, ಬಾಳೆಹಣ್ಣು ಎಲೆಗಳು ಮತ್ತು ವರ್ಣರಂಜಿತ ಹೂವುಗಳನ್ನು ಬಳಸುವ ಮೂಲಕ ಸಾಂಪ್ರದಾಯಿಕ ಮಂಟಪಗಳನ್ನು ಅಲಂಕರಿಸಲಾಗುತ್ತದೆ. ವಿವಾಹದಲ್ಲಿ ತೊಡಗಿರುವ ಕುಟುಂಬಗಳ ಜಾತಿ ಮತ್ತು ಮತಗಳ ಆಧಾರದ ಮೇಲೆ ಈ ಅಲಂಕಾರವು ಅವಲಂಬಿಸಿರುತ್ತದೆ.

ನಾಲ್ಕು ಆಧಾರ ಸ್ತಂಭಗಳಿಂದ ಬೆಂಬಲಿಸಲ್ಪಟ್ಟ ಮಂಟಪವು ಮಾನವನ ಜೀವಿತಾವಧಿಗೆ ಸಂಬಂಧಪಟ್ಟಿರುತ್ತವೆ ಅವುಗಳೆಂದರೆ, ಬ್ರಹ್ಮಚರ್ಯೆ, ಗೃಹಸ್ಥಾ, ವಾನಪ್ರಸ್ಥ ಮತ್ತು ಸನ್ಯಾಸ. ಆ ನಾಲ್ಕು ಸ್ತಂಭಗಳು ಕೂಡ 1250 ವರ್ಷಗಳಿಂದ ಕೂಡಿದ ನಾಲ್ಕು ಯುಗಗಳಾದ ಸತ್ಯಯುಗ, ದ್ವಾಪರಯುಗ, ತ್ರೇತಾಯುಗ ಮತ್ತು ಕಲಿಯುಗವನ್ನು ಪ್ರತಿನಿಧಿಸುತ್ತವೆ.

ಮುಖ್ಯವಾಗಿ ಮಂಟಪ ಎಂಬುದು ನವವಿವಾಹಿತ ಜೋಡಿಗೆ ಮನೆಯ ಒಂದು ಸಂಕೇತವಾಗಿದೆ, ಅಲ್ಲಿ ಅವರು ಫೇರಾಗಳ ರೂಪದಲ್ಲಿ ಪ್ರತಿಜ್ಞೆಗಳನ್ನು/ವಚನಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಿಂದೂ ವಿವಾಹದ ಸಂದರ್ಭದಲ್ಲಿ ಒಟ್ಟು ಏಳುಫೇರಾಗಳನ್ನು ಪೂರ್ಣಗೊಳಿಸಲಾಗುತ್ತದೆ. ಅವುಗಳನ್ನು ಸಪ್ತಪದಿ ಎಂದು ನಮ್ಮಲ್ಲಿ ಕರೆಯಲಾಗುತ್ತದೆ. ಪ್ರತಿಯೊಂದು ಫೇರಾ ವಧುವರರು ಪರಸ್ಪರ ಒಬ್ಬರಿಗೊಬ್ಬರು ಮಾಡುವ ವಚನವನ್ನು ಅಥವಾ ಪ್ರತಿಜ್ಞೆಯನ್ನು ಪ್ರತಿನಿಧಿಸುತ್ತದೆ.

ಮೊದಲ ಫೇರಾ ಸಮಯದಲ್ಲಿ, ದಂಪತಿಗಳು ಸಾಕಷ್ಟು ಪೋಷಣೆ ಮತ್ತು ಪರಿಶುದ್ಧ ಆಹಾರಕ್ಕಾಗಿ ಪ್ರಾರ್ಥಿಸುತ್ತಾರೆ. ಎರಡನೆಯದು, ಅವರು ಆರೋಗ್ಯ ಮತ್ತು ಸಮೃದ್ಧ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ. ನಂತರ ಮೂರನೇ ಫೆರಾದಲ್ಲಿ, ದಂಪತಿಗಳು ಸಂಪತ್ತನ್ನು ಪ್ರಾರ್ಥಿಸುತ್ತಾರೆ. ನಾಲ್ಕನೇ ಫೇರಾದಲ್ಲಿ, ದಂಪತಿಗಳು ಪರಸ್ಪರರ ಕುಟುಂಬಗಳಿಗೆ ತಮ್ಮ ಪ್ರೀತಿ ಮತ್ತು ಗೌರವವನ್ನು ಹೆಚ್ಚಿಸಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.

ಐದನೇ ಫೇರಾ, ಅವರ ಜೀವನದಲ್ಲಿ ಸದ್ಗುಣ ಮತ್ತು ವೀರೋಚಿತ ಮಕ್ಕಳಿಗಾಗಿ ಮಾಡುವ ಪ್ರಾರ್ಥನೆಯು ಸೇರಿದೆ. ಆರನೇ ಫೇರಾದಲ್ಲಿ, ನವವಿವಾಹಿತರು ಒಂದು ಶಾಂತಿಯುತ ಮತ್ತು ಸುದೀರ್ಘ ಜೀವನವನ್ನು ಒಟ್ಟಿಗೆ ಕೇಳುತ್ತಾರೆ. ಅಂತಿಮವಾಗಿ, ಏಳನೇ ಫೆರಾದಲ್ಲಿ, ಒಂದೆರಡು ನಿಷ್ಠೆ, ಒಡನಾಟ, ತಿಳುವಳಿಕೆ ಮತ್ತು ಒಗ್ಗಟ್ಟಿನಿಂದ ಬಾಳ್ವೆನಡೆಸುವಂತೆ ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ನಂತರದಲ್ಲಿ, ಈ ಪ್ರತಿಜ್ಞೆಗಳನ್ನು ಎಂದಿಗೂ ಮುರಿಯದಿರಲು ಮತ್ತು ಪರಸ್ಪರ ಸ್ನೇಹಿತರಾಗಿರಬೇಕೆಂದು ಭರವಸೆ ನೀಡುತ್ತಾರೆ. ಮಂಟಪ್ ಸಮಾರಂಭವು ಮುಗಿದ ನಂತರ ಮದುವೆಯು ಪೂರ್ಣಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಫೇರಾಗಳ ನಂತರ, ವರನು ವಧುವಿನ ಕುತ್ತಿಗೆಯ ಸುತ್ತ ಮ್ಯಾಂಗಲ್ಯ ಸೂತ್ರವನ್ನು/ಮಂಗಳಸೂತ್ರವನ್ನು ಕಟ್ಟುತ್ತಾನೆ ಮತ್ತು ಸಿಂಧೂರವನ್ನು ಹಚ್ಚುತ್ತಾನೆ. ಮಂಗಳಸೂತ್ರ ಮತ್ತು ಸಿಂಧೂರಗಳು ಒಬ್ಬ ವಿವಾಹಿತ ಮಹಿಳೆಯ / ಸುಮಂಗಲಿಯ ಚಿಹ್ನೆಗಳಾಗಿವೆ.

ಕನ್ಯಾದಾನ ಎಂದರೆ ವಧುವಿನ ಕೈಗಳನ್ನು ಆಕೆಯ ತಂದೆಯಾಗಲೀ ಅಥವಾ ಯಾವುದೇ ಪುರುಷ ಸದಸ್ಯನಾಗಲೀ ವರನ ಕೈನಲ್ಲಿ ಇರಿಸುವ ಮೂಲಕ ಮುಕ್ತವಾಗಿ ಆಕೆಯ ಜವಾಬ್ದಾರಿಯನ್ನು ವಹಿಸುವುದು. ಇದನ್ನು ಒಂದು ಶ್ರೇಷ್ಠವಾದ ಕ್ರಿಯೆಯೆಂದು ಹೇಳಲಾಗುತ್ತದೆ, ಬೇರೊಂದು ಮನೆಯಲ್ಲಿ ಸಂತೋಷ ಮತ್ತು ಪ್ರೀತಿಯನ್ನು ತುಂಬಲೆಂದು ತಂದೆಯು ತನ್ನ ಮಗಳನ್ನು ಕಳುಹಿಸಲು ಸಿದ್ಧವಾಗುತ್ತಾನೆ. ಇಲ್ಲಿಗೆ ಮಂಟಪ ಸಮಾರಂಭವು ಕೊನೆಗೊಳ್ಳುತ್ತದೆ, ಆನಂತರದಲ್ಲಿ ಎಲ್ಲಾ ಅತಿಥಿಗಳು ವಧುವಿನ ವಿದಾಯ ಸಮಾರಂಭಕ್ಕೆ ತೆರಳುತ್ತಾರೆ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
156 views
Matrimonial
156 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
186 views
Match Making
186 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
180 views
Astrology in Marriage
180 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category