0 Shares 481 Views
00:00:00
18 Jun

ಕುಂಭ ವಿವಾಹದ ಬಗ್ಗೆ ಮತ್ತಷ್ಟು ತಿಳಿಯಿರಿ

December 27, 2017
481 Views

ಯಾರೊಬ್ಬರ ಜಾತಕದಲ್ಲಿ, ಮಂಗಳಿಕ ಅಥವಾ ದುಪ್ಪಟ್ಟು ಮಂಗಳಿಕ ದೋಷವು ಇದ್ದಾಗ, ಕುಂಭ ವಿವಾಹ ಎಂದು ಕರೆಯಲಾಗುವ ಒಂದು ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಮಂಗಳ ದೋಷವು ವಿವಾಹದ ನಂತರ ಬಹಳ ಹಿಂಸಾತ್ಮಕವಾಗಿ ಮತ್ತು ಆಕ್ರಮಣಕಾರಿಯಾಗಿ ಪರಿಣಮಿಸುತ್ತದೆ.

ಕುಂಭ ವಿವಾಹದ ಪ್ರಕ್ರಿಯೆ:

ಕುಂಭ ವಿವಾಹವು ಯಾವುದೇ ಇತರೆ ಸಾಮಾನ್ಯ ವಿವಾಹದಂತೆ ಇದೆ. ಉದಾಹರಣೆಗೆ, ಒಬ್ಬ ಹುಡುಗಿ ಮಂಗಳಿಕ ದೋಷವನ್ನು ಹೊಂದಿದ್ದಾಳೆ ಎಂದಾದರೆ, ಆಕೆಗೆ ಈ ಧಾರ್ಮಿಕ ಕ್ರಿಯೆಯನ್ನು ನಡೆಸಬೇಕಾದ ಅಗತ್ಯವಿದೆ. ಅದು ಒಂದು ನಿಜವಾದ ಮದುವೆಯೆಂಬಂತೆ ಇರುತ್ತದೆ, ಅದರಲ್ಲಿ ಪ್ರತಿಯೊಂದು ವಿಚಾರವನ್ನು ಒಂದೇ ರೀತಿಯಾಗಿ ನಿರ್ವಹಿಸಲಾಗುತ್ತದೆ. ಹುಡುಗಿಯು ಮದುವೆಯ ವೇಷಭೂಷಣವನ್ನು ಆಭರಣ ಮತ್ತು ಒಂದು ದಾರವನ್ನು ಧರಿಸಬೇಕಾದ ಅಗತ್ಯವಿದೆ. ಪೋಷಕರು ಫೇರಾಗಳೊಂದಿಗೆ ಜೊತೆಜೊತೆಯಾಗಿ ಸರಿಯಾದ ರೀತಿಯಲ್ಲಿ ಕನ್ಯಾದಾನವನ್ನು ಮಾಡುತ್ತಾರೆ. ಹಾಗೂ ಪ್ರತಿಜ್ಞೆಗಳನ್ನು ಸಹ ತೆಗೆದುಕೊಳ್ಳಲಾಗುತ್ತದೆ ಮತ್ತು ಮಣ್ಣಿನಿಂದ ಮಾಡಿದ ಮಡಕೆಯೊಂದಿಗೆ ‘ಫೇರೇ’ಯನ್ನು ಸಹ ತೆಗೆದುಕೊಳ್ಳಲಾಗುತ್ತದೆ.

ಎಲ್ಲಾ ಸಮಾರಂಭಗಳನ್ನು ನಡೆಸಬೇಕಾದರೆ, ಒಬ್ಬ ಪುರೋಹಿತನನ್ನು ಆಹ್ವಾನಿಸಲಾಗುತ್ತದೆ, ಆತ ಎಲ್ಲಾ ಮಂತ್ರಗಳನ್ನು ಪಠಿಸುತ್ತಾನೆ ಮತ್ತು ಯಾವುದೇ ಇತರೆ ಸಾಮಾನ್ಯ ಮಾನವನ ವಿವಾಹದಂತೆ ಅದನ್ನು ಕೊನೆಮುಟ್ಟಿಸುತ್ತಾನೆ. ಆನಂತರದಲ್ಲಿ, ಆ ಸಮಾರಂಭವು ಮುಗಿದಮೇಲೆ ಹುಡುಗಿಯು ತನ್ನ ಬಟ್ಟೆಗಳನ್ನು ಬದಲಿಸುತ್ತಾಳೆ. ಆಮೇಲೆ ಆಕೆ ಮಣ್ಣಿನ ಮಡಕೆಗೆ ಕಟ್ಟಲಾಗಿರುವ ದಾರವನ್ನು ತೆಗೆದುಹಾಕಬೇಕೆಂದು ಭಾವಿಸಲಾಗಿದೆ ಹಾಗೂ ಆ ಮಡಿಕೆಯು ಯಾರೊಬ್ಬರಿಗೂ ಅರಿವಿಲ್ಲದೇ ಆ ಕೊಳದಲ್ಲಿ ಅಥವಾ ನದಿಯಲ್ಲಿ ಮುಳುಗುತ್ತದೆ. ಒಮ್ಮೆ ಈ ನಿರ್ದಿಷ್ಟ ಧಾರ್ಮಿಕ ವಿಧಿಯನ್ನು ನಡೆಸಿದ ಮೇಲೆ ಆ ಹುಡುಗಿಯು ಮಂಗಳಿಕ ದೋಷದಿಂದ ಮುಕ್ತವಾಗುತ್ತಾಳೆ ಮತ್ತು ಆಕೆ ಮದುವೆಯಾಗಲು ಅರ್ಹವಾಗುತ್ತಾಳೆ ಅಥವಾ ನಿಜವಾದ ಮದುವೆಗೆ ಮುಂದುವರೆಯುತ್ತಾಳೆ. ಒಮ್ಮೆ ಕುಂಭ ವಿವಾಹವನ್ನು ನಡೆಸಿದ ನಂತರ ಯಾವುದೇ ಸಮಸ್ಯೆಗಳು ಇರುವುದಿಲ್ಲ ಹಾಗೂ ಆಕೆಯ ಪತಿಯು ಆಕೆ ಬಳಲುತ್ತಿದ್ದಂತಹ ಮಂಗಳ ದೋಷದಿಂದ ಸುರಕ್ಷಿತನಾಗುತ್ತಾನೆ.

ಕುಂಭ ವಿವಾದಲ್ಲಿ ಮಡಕೆಯ ಪಾತ್ರವೇನು:

ಒಂದು ಹುಡುಗಿಯ ಜೀವನದಲ್ಲಿ ಮೊದಲ ಪತಿಯ ಪಾತ್ರವನ್ನು ನಿರ್ವಹಿಸುವ ಮೂಲಕ ಮಡಕೆಯ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ, ಅದು ಒಂದು ಸಜೀವ ವಸ್ತುವಲ್ಲ. ಆದ್ದರಿಂದ ಭಾರತೀಯ ಪುರಾಣಗಳ ಪ್ರಕಾರ ಈ ಮದುವೆಯು ಸ್ವೀಕಾರಾರ್ಹವಲ್ಲ ಹಾಗೂ ಯಾವುದೇ ಪುರುಷನೊಂದಿಗೆ ಒಂದು ಸಾಮಾನ್ಯ ವಿವಾಹವು ಆಕೆಯ ಪ್ರಾಥಮಿಕ ವಿವಾಹದೆಂದು ಭಾವಿಸಲಾಗುತ್ತದೆ. ಇಲ್ಲಿ ಹುಡುಗಿಯ ಎಲ್ಲಾ ದೋಷಗಳನ್ನು ಅಥವಾ ತೊಂದರೆಗಳನ್ನು ಮಡಕೆಯು ತೆಗೆದುಕೊಳ್ಳುತ್ತದೆ, ಆದ್ದರಿಂದ ಮಂಗಲ್ ಇನ್ನು ಮುಂದೆ ಗಂಡನ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.

ಕುಂಭ ವಿವಾಹದಲ್ಲಿ ಮಹತ್ವ:

ಕುಂಭ ವಿವಾದ ಆಚರಣೆಯು ತನ್ನದೇ ಆದ ರೀತಿಯಲ್ಲಿ ಗಮನಾರ್ಹವಾಗಿದೆ ಮತ್ತು ಹೆಚ್ಚಿನ ಜನರು ಇದರ ಪ್ರಯೋಜನವನ್ನು ಪಡೆದಿರುತ್ತಾರೆ. ಕುಂಭ ವಿವಾಹವು ಪ್ರಮುಖವಾಗಿ ಮಂಗಳನಿಂದ ಬರುವ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಯಾವುದೇ ವ್ಯಕ್ತಿಯು ಮಂಗಳಿಕನಾಗಿದ್ದಾಗ ಈ ಧಾರ್ಮಿಕ ವಿಧಿಯನ್ನು ಮಾಡಲಾಗುತ್ತದೆ, ಅಂದರೆ ಯಾವುದೇ ಜಾತಕದ 1ನೇ, 4ನೇ, 7ನೇ, 8ನೇ, ಅಥವಾ 12ನೇ ಮನೆಯಲ್ಲಿ ಮಂಗಳನು ನೆಲೆಸಿರುತ್ತಾನೆ. ಯಾವುದೇ ಪಂಡಿತರು ಕುಂಭ ವಿವಾಹವನ್ನು ನಿಮಗೆ ಶಿಫಾರಸು ಮಾಡಿದರೆ, ನೀವು ಮಂಗಳಿಕ ಮತ್ತು ನೀವು ಮದುವೆಯಾಗುತ್ತಿರುವ ವ್ಯಕ್ತಿಯು ಮಾಂಗಳಿಕ ಅಲ್ಲದವರು ಎಂದು ಅದು ಸೂಚಿಸುತ್ತದೆ. ಮಂಗಳಿಕ ಇರುವಂತಹ ಒಬ್ಬ ವ್ಯಕ್ತಿಯು ಮಂಗಳಿಕ ಪತಿ/ಪತ್ನಿಯನ್ನು ಮಾತ್ರ ಮದುವೆಯಾಗಬೇಕೆಂದು ಹೇಳಲಾಗುತ್ತದೆ, ಇಲ್ಲವಾದರೆ ಮಂಗಳಿಕ ಅಲ್ಲದ ಸಂಗಾತಿಯು ವ್ಯಾಪಾರದಲ್ಲಿ ಕುಸಿತ, ಕೆಟ್ಟ ಆರೋಗ್ಯ ಅಥವಾ ಮದುವೆಯ ನಂತರವೂ ಕೂಡ ದುರ್ಘಟನೆಯನ್ನು ಅನುಭವಿಸಬಹುದು.

ಮಂಗಳಿಕ ದೋಷವನ್ನು ಕಡಿಮೆಗೊಳಿಸುವ ಇತರ ಪರಿಹಾರಗಳು:

ಕುಂಭ ವಿವಾಹದ ಹೊರತಾಗಿಯೂ, ಮಂಗಳಿಕ ದೋಷದ ಕೆಟ್ಟ ಪರಿಣಾಮಗಳನ್ನು ನೀವು ಕಡಿಮೆಗೊಳಿಸಬಹುದಾದ ಇತರ ಖಚಿತ ಉಪಾಯಗಳು ಇಲ್ಲಿವೆ. ಮಡಕೆಯ ಕುಂಭ ವಿವಾಹವನ್ನು ಹೊರತುಪಡಿಸಿ ಅಶ್ವತ್ (ಅರಳಿ) ಮರದೊಂದಿಗೆ ಸಹ ಮದುವೆ ಮಾಡಬಹುದು. ಮಂಗಲ್ ದೋಷದ ಪರಿಣಾಮವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು, ಆದರೆ ನೀವು ಅದನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿಲ್ಲ.

ಉತ್ತಮ ಕಾರ್ಯಗಳು:

ನೀವು ಪ್ರಾಮಾಣಿಕರಾಗಿದ್ದರೆ ಮತ್ತು ನಿಮ್ಮ ಕೆಲಸಗಳು ಪರಿಶುದ್ಧವಾಗಿದ್ದರೆ, ನಿಮ್ಮ ದೋಷಗಳ ಎಲ್ಲಾ ಕೆಟ್ಟ ಪರಿಣಾಮಗಳನ್ನು ನೀವು ಅನುಭವಿಸಬೇಕಾದ ಅಗತ್ಯವಿರುವುದಿಲ್ಲ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
248 views
Matrimonial
248 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
292 views
Match Making
292 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
332 views
Astrology in Marriage
332 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category