0 Shares 344 Views
00:00:00
18 Jan

ಮದುವೆಯಾಗಲು ಸರಿಯಾದ ವಯಸ್ಸು ಇದೆಯೇ?

January 15, 2018
344 Views

ವಿವಾಹವು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂದು ಹೇಳುವುದನ್ನು ಯಾರೂ ಮರೆಯುವುದಿಲ್ಲ, ಆದ್ದರಿಂದಲೇ ವಿವಾಹ ಎಂಬುವುದನ್ನು ಒಂದು ಮಂಗಳಕರ ಸಂಬಂಧವೆಂದು ಪರಿಗಣಿಸಲಾಗುತ್ತದೆ. ಇದು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲಿ, ಆದರೆ ಇದು ಎರಡು ಕುಟುಂಬಗಲ ಮಿಶ್ರಣವಾಗಿದೆ, ಆ ಕುಟುಂಬಗಳು ಪ್ರೀತಿ ವಾತ್ಸಲ್ಯದಿಂದ ಒಂದುಗೂಡುತ್ತವೆ, ಹಾಗೂ ದಂಪತಿಗಳ ಸಮೃದ್ಧಿ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸುತ್ತವೆ. ಜನರು ಮದುವೆಗೆ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿದ್ದಾರೆ ಹಾಗೂ ದುರದೃಷ್ಟವಶಾತ್, ಕೆಲವರು ಅದನ್ನು ಕಟ್ಟುನಿಟ್ಟಾದ ನಿಯಮಗಳು ಮತ್ತು ನಿಯಂತ್ರಣವಿರುವ ಸಂಪ್ರದಾಯವೆಂಬಂತೆ ನೋಡುತ್ತಾರೆ. ಅಂತಹ ವ್ಯವಸ್ಥೆಯಲ್ಲಿ, ಅನೇಕ ಹುಡುಗಿಯರು ಮತ್ತು ಹುಡುಗರು ನಿರ್ದಿಷ್ಟ ವಯಸ್ಸಿನ ಮುಂಚಿತವಾಗಿ ಮದುವೆಯಾಗುವಂತೆ ಒತ್ತಾಯಿಸಲಾಗುತ್ತದೆ. ಜೈವಿಕ ಗಡಿಯಾರವು ಟಿಕ್ ಎಂಬ ಶಬ್ದ ಪ್ರಾರಂಭವಾಗುವ ಮುನ್ನ, ಮದುವೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಅನೇಕರು ಭಾವಿಸುತ್ತಾರೆ. ಇದನ್ನು ಹೆಚ್ಚಾಗಿ ಹೇಳಲಾಗುತ್ತದೆ, ಆದ್ದರಿಂದ ದಂಪತಿಗಳು ಮಕ್ಕಳನ್ನು ಹೆರುವ ವಯಸ್ಸನ್ನು ದಾಟುವುದಿಲ್ಲ ಮತ್ತು ಕುಟುಂಬದ ಪರಂಪರೆಯನ್ನು ಅವರು ಮುಂದುವರೆಸಬಹುದು.

ಮದುವೆಯಾಗಲು ನಿಖರವಾದ ವಯಸ್ಸಿನ ಮಿತಿ

ವಿವಿಧ ಸಮುದಾಯಗಳಲ್ಲಿರುವ ಜನರು ತಮ್ಮ ಪುಟ್ಟ ಮಕ್ಕಳನ್ನು ಬಲವಂತವಾಗಿ ಮದುವೆಮಾಡುತ್ತಾರೆ ಹಾಗೂ ಇದು ಬಹಳಷ್ಟು ಸಾಮಾಜಿಕ ಹೊರೆಯಲ್ಲಿನ ಒಂದು ಕೆಲಸವಾಗಿದೆ. ಆರ್ಥಿಕವಾಗಿ ಸ್ವತಂತ್ರವಾಗಿರಲು ಯುವಕರು ಉತ್ಸುಕರಾಗಿರುವುದರಿಂದ, ಕಾಲಕ್ರಮೇಣ ಸಮಾಜದಲ್ಲಿ ಈ ಬಗೆಯ ರೂಪಾಂತರವು ನಡೆಯುತ್ತಿದೆ. ಈ ಕಾರಣದಿಂದಾಗಿ ಮತ್ತು ಇತರ ಅನೇಕ ಅಂಶಗಳಿಂದಾಗಿ ವಿವಾಹದ ವಯಸ್ಸಿನ ಮಿತಿಯಲ್ಲಿ ಹೆಚ್ಚಳವಾಗಿರುತ್ತದೆ. ಆದಾಗ್ಯೂ, ಒಬ್ಬ ವ್ಯಕ್ತಿಯು ಮದುವೆಯಾಗಬೇಕಾದರೆ ನಿರ್ದಿಷ್ಟ ವಯಸ್ಸಿನ ಮಿತಿಯಿಲ್ಲ ಆದರೆ ವೈಜ್ಞಾನಿಕವಾಗಿ ಒಬ್ಬ ವ್ಯಕ್ತಿಯು 28-34 ವರ್ಷಗಳ ನಡುವೆ ಮದುವೆಯಾಗಬೇಕು. ಈ ವಯಸ್ಸಿನ ಮಿತಿಯನ್ನು ವರ ಮತ್ತು ವಧುವಿಗೆ ಆದರ್ಶಪ್ರಾಯವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಆ ವಯಸ್ಸಿಗಾಗಲೇ ಜನರು ಸಾಕಷ್ಟು ಪ್ರಬುದ್ಧರಾಗಿರುತ್ತಾರೆಂದು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಈ ವಯಸ್ಸಿನ ವ್ಯಕ್ತಿಗಳು ವೈವಾಹಿಕ ಸಂಬಂಧವನ್ನು ಪ್ರವೇಶಿಸುವಾಗ ತಮ್ಮ ಇಪ್ಪತ್ತರ ಹರೆಯವನ್ನು ಸಂಪೂರ್ಣವಾಗಿ ದಾಟಿ ಬೆಳೆದಿರುತ್ತಾರೆ, ಆದ್ದರಿಂದ ತಮ್ಮ ಸಂಗಾತಿಗಳಲ್ಲಿ ಇರುವ ಭಿನ್ನತೆಗಳನ್ನು ಅರ್ಥಮಾಡಿಕೊಳ್ಳಲು ಪೂರ್ಣವಾಗಿ ಬೆಳೆದಿರುತ್ತಾರೆ ಹಾಗೂ ಪರಸ್ಪರ ತಮ್ಮ ನಡುವಿನ ಸಾಮ್ಯತೆಗಳನ್ನು ಹಂಚಿಕೊಳ್ಳಬಹುದು.

ಮೇಲೆ ನೀಡಿರುವ ವಯಸ್ಸಿನಲ್ಲಿ ವಿವಾಹದ ಮೈತ್ರಿಯು ನಡೆದರೆ, ಆ ವ್ಯಕ್ತಿಗಳು ವಿಚ್ಚೇದಿತರಾಗುವುದು ತುಂಬಾ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಆ ವಯಸ್ಸನ್ನು ಮದುವೆಯಾಗುವ ಚಾಲನಾ ಶಕ್ತಿ ಎಂದು ಕೆಲವರು ಪರಿಗಣಿಸುತ್ತಾರೆ, ಆದರೂ ಕೂಡ ಆ ಅಂಶವನ್ನು ಹೊರತುಪಡಿಸಿ ಮದುವೆಯಾಗಲೆಂದು ಇಚ್ಚಿಸುವ ಇಬ್ಬರು ವ್ಯಕ್ತಿಗಳು ಪರಸ್ಪರ ಅರ್ಥಮಾಡಿಕೊಳ್ಳಲೇಬೇಕು ಎಂಬುದು ಅತ್ಯಂತ ಮುಖ್ಯಾಂಶವಾಗಿದೆ. ಅನೇಕ ಪೋಷಕರು ತಮ್ಮ ಮಕ್ಕಳಲ್ಲಿ ಹೊಂದಾಣಿಕೆಯ ಅಂಶವನ್ನು ಇನ್ನೂ ಕೂಡ ಅವಲೋಕಿಸುವುದಿಲ್ಲ ಹಾಗೂ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಇಚ್ಛಿಸದ ಬೇರೊಬ್ಬರಿಗೆ ತಮ್ಮ ಮಗುವನ್ನು ಮದುವೆ ಮಾಡಿಸಲು ಒಪ್ಪುತ್ತಾರೆ. ಮದುವೆಯ ಕಾರಣದಿಂದಾಗಿ ಸಾಮಾಜಿಕ ಒತ್ತಡದಿಂದ ಪ್ರೇರೇಪಿಸಬಾರದು, ಈ ಕಾರಣದಿಂದಾಗಿ ಜನರು ತಪ್ಪು ನಿರ್ಧಾರಗಳನ್ನು ಹಚ್ಚಿನ ಸಮಯದಲ್ಲಿ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತದೆ. ಒಬ್ಬ ವ್ಯಕ್ತಿಗೆ ಮದುವೆಯಾಗುವಂತೆ ಬಲವಂತ ಮಾಡಬಾರದು, ಏಕೆಂದರೆ ಆತ/ಆಕೆ ಎಂದಿಗೂ ತಮ್ಮ ಜೀವನದಲ್ಲಿ ನೆಮ್ಮದಿಯಿಂದ ಬದುಕಲು ಎಂದಿಗೂ ಆಗದಿರಬಹುದು.

ವಿವಾಹ: ಇದು ಒಂದು ವಿಪತ್ತು

ಮದುವೆ ಎಂಬ ಸಂಪ್ರದಾಯವನ್ನು ವಯಸ್ಸಿನಿಂದ ಸೀಮಾ ನಿರ್ಣಯ ಮಾಡಬಾರದು; ಅದರ ಬದಲಿಗೆ, ವಿವಾಹ ಎಂಬುದು ಪರಿಪಕ್ವತೆ, ಮತ್ತು ಪ್ರೀತಿಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಅವಿವಾಹಿತರು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು,ಆದ್ದರಿಂದ ಅವರು ಒಂದೇ ರೀತಿಯ ಮಾನಸಿಕ ಹೊಂದಾಣಿಕೆಯಿಂದ ಯಾರೋ ಒಬ್ಬರನ್ನು ಮದುವೆಯಾಗಬಹುದು. ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚು ಹೊಂದಾಣಿಕೆಯ ಸಂಬಂಧವನ್ನು ಹೊಂದಿರಬೇಕು, ಹಾಗಾಗಿ, ತರುವಾಯದಲ್ಲಿ ತನಗಾಗಿ ತಾನೇ ಸಂಗತಿಯನ್ನು ಆಯ್ಕೆ ಮಾಡುವಷ್ಟು ಸಮಯ, ಬಿಡುವು ಮತ್ತು ತಿಳುವಳಿಕೆಯನ್ನು ಪಡೆಯಬಹುದು. ಈ ನಿರ್ಣಾಯಕ ಸಮಯದಲ್ಲಿ ಪೋಷಕರು ಸ್ವಲ್ಪ ತಾಳ್ಮೆ ಮತ್ತು ಬುದ್ಧಿವಂತಿಕೆ ಮೂಲಕ ಬಹಳಷ್ಟು ಭರವಸೆ, ಸಂತೋಷ ಮತ್ತು ಶಾಂತಿಯುತ ಜೀವನವನ್ನು ನೀಡಬಹುದು. ಇದರಿಂದ ಕೌಟುಂಬಿಕ ದೌರ್ಜನ್ಯ ಮತ್ತು ಇತರೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುವ ಸಂದರ್ಭವನ್ನು ಇದು ಗಣನೀಯವಾಗಿ ಇಳಿಮುಖವಾಗುವುದನ್ನು ತೋರಿಸುತ್ತದೆ. ಇಬ್ಬರು ವ್ಯಕ್ತಿಗಳು ಒಂದೇ ಛಾವಣಿಯಡಿಯಲ್ಲಿ ಪರಸ್ಪರ ಸಂತೋಷದಿಂದ ಬದುಕುವುದನ್ನು ಮತ್ತು ಭಿನ್ನಾಭಿಪ್ರಾಯಗಳನ್ನು ಗೌರವಿಸುವುದನ್ನು ಮುಂದುವರೆಸಿದಾಗ ಮಾತ್ರ ಆ ಒಂದು ಮದುವೆ ಪರಿಪೂರ್ಣಗೊಳ್ಳುತ್ತದೆ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
352 views
Matrimonial
352 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
408 views
Match Making
408 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
585 views
Astrology in Marriage
585 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category