0 Shares 585 Views
00:00:00
16 Sep

ಭಾರತೀಯ ವಿವಾಹಗಳಲ್ಲಿ ಮಾಂಗಲ್ಯಸೂತ್ರದ ಪ್ರಾಮುಖ್ಯತೆ

December 18, 2017
585 Views

ಹಿಂದೂ ಕಾನೂನಿನ ಪ್ರಕಾರ, ಎಲ್ಲಾ ಶಾಸ್ತ್ರೀಯ ಸಾಂಪ್ರದಾಯಿಕ ಆಚರಣೆಗಳನ್ನು ಅನುಸರಿಸಿದರೆ ಮಾತ್ರ ಇಬ್ಬರು ವ್ಯಕ್ತಿಗಳನ್ನು ವಿವಾಹಿತರೆಂದು ಪರಿಗಣಿಸಬೇಕು ಅಂದರೆ ಅವುಗಳಲ್ಲಿ ಅತ್ಯಂತ ಪವಿತ್ರ ಸಂಪ್ರದಾಯಗಳಲ್ಲಿ ಮಾಂಗಲ್ಯ ಸೂತ್ರವನ್ನು ಕಟ್ಟುವುದು ಒಂದಾಗಿದೆ. ಹಿಂದೂ ವಿವಾಹದ ಒಂದು ಮಾನ್ಯ ಪವಿತ್ರ ಆಚರಣೆಯೇ ಮಂಗಳಸೂತ್ರವನ್ನು ಕಟ್ಟುವುದು. ಮಂಗಳ ಸೂತ್ರವೆಂಬುದು ಒಂದು ಪವಿತ್ರವಾದ ದಾರವಾಗಿದ್ದು ಕರಿಮಣಿ ಮತ್ತು ಚಿನ್ನದ ಮಣಿಗಳಿಂದ ಪೋಣಿಸಲ್ಪಟ್ಟು ಕಟ್ಟಿರುತ್ತಾರೆ, ಅದನ್ನು ಮಹಿಳೆಯರು ತಮ್ಮ ವಿವಾಹಗಳಲ್ಲಿ ವರನಿಂದ ಕಟ್ಟಿಸಿಕೊಳ್ಳುತ್ತಾರೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ವಜ್ರ ಅಥವಾ ಚಿನ್ನದ ಪೆಂಡೆಂಟ್ ಆಗಿ ಮಂಗಳಸೂತ್ರದಂತೆ ಮಹಿಳೆಯರ ಕುತ್ತಿಗೆಯಲ್ಲ ಶೋಭಿಸುತ್ತದೆ. ಈ ದಾರವಿಲ್ಲದೆ ಯಾವುದೇ ಹಿಂದೂ ವಿವಾಹವು ಪೂರ್ಣಗೊಳ್ಳುವುದಿಲ್ಲ, ಏಕೆಂದರೆ ಅದು ಕೇವಲ ಒಂದು ಚಿನ್ನದ ದಾರವಾಗಿರದೆ ಬದಲಿಗೆ ಹೆಂಡತಿ ಅಥವಾ ಆಕೆಯ ಪತಿಯ ಒಂದು ಅತ್ಯಮೂಲ್ಯ ದೈವಿಕ ಬಂಧವು ಬೆಸೆದಿರುವುದನ್ನು ಸೂಚಿಸುತ್ತದೆ.

ಆದರೂ ಸಹ ಇಂದಿನ ದಿನಗಳಲ್ಲಿ ವಿವಾಹದಂತಹ ಬಂಧ ಬೆಸೆಯುವ ಮತ್ತು ಅದರ ಪ್ರತಿಜ್ಞೆಗಳ ಅರ್ಥವು ಬದಲಾಗಿದೆ, ಆದರೆ ಮಾಂಗಲ್ಯ ಸೂತ್ರದ ಪ್ರಾಮುಖ್ಯತೆಯು ಇಂದಿಗೂ ಅಸ್ತಿತ್ವದಲ್ಲಿದೆ. ಈ ಲೇಖನವು ಹಿಂದೂ ವಿವಾಹಗಳಲ್ಲಿ ಮಾಂಗಲ್ಯದ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತದೆ, ಆ ಮೂಲಕ ಪ್ರತಿಯೊಬ್ಬ ಹಿಂದೂ ವಿವಾಹಿತ ಮಹಿಳೆಯು ಅದನ್ನು ಏಕೆ ಧರಿಸುತ್ತಾಳೆ ಎಂಬ ಬಗ್ಗೆ ಕಾರಣವನ್ನು ನೀಡುತ್ತದೆ.

ಮಂಗಳಸೂತ್ರದ ಮಹತ್ವ:

ಮಂಗಳಸೂತ್ರ ಎಂಬ ಪದವನ್ನು ’ಮಂಗಳ’ ಮತ್ತು ’ಸೂತ್ರ’ ಎಂಬ ಎರಡು ಪದಗಳನ್ನು ಸೇರಿಸುವ ಮೂಲಕ ಪಡೆಯಲಾಗಿರುತ್ತದೆ, ಮಂಗಳ ಎಂದರೆ ಪವಿತ್ರವಾದುದ್ದು, ಸೂತ್ರ ಎಂದರೆ ದಾರ, ಹಾಗಾಗಿ ಅಕ್ಷರಶಃ ಮಂಗಳಕರ ದಾರವೆಂದರ್ಥ. ವಿವಾಹದ ಮಂಗಳಕರ ದಿನದಂದು, ಮದುವೆಯ ಆಚರಣೆಗಳ ಸಮಾರಂಭದ ಸಮಯದಲ್ಲಿ ವರನು ವಧುವಿನ ಕುತ್ತಿಗೆಯ ಸುತ್ತಲೂ ಇದನ್ನು ಕಟ್ಟುತ್ತಾನೆ. ಸಾಂಪ್ರದಾಯಿಕವಾಗಿ, ಮಂಗಳಸೂತ್ರವನ್ನು ಮೂರು ಗಂಟುಗಳಲ್ಲಿ ಕಟ್ಟಬೇಕು. ಅವುಗಳಲ್ಲಿ ಒಂದೊಂದು ಬಾರಿ ಕಟ್ಟುವ ಗಂಟು ವಿವಾಹಿತ ಜೀವನದ ಪ್ರಮುಖ ಅಂಶಗಳನ್ನು ಸೂಚಿಸುತ್ತವೆ. ಮೊದಲನೆಯ ಗಂಟು – ಆಕೆಯ ಪತಿಗೆ ಹೆಂಡತಿಯಾಗಿ ತಾನು ತೋರಬೇಕಾದ ನಿಷ್ಠೆಯನ್ನು ಸೂಚಿಸುತ್ತದೆ. ಎರಡನೇ ಗಂಟು ಹೊಸ ಕುಟುಂಬಕ್ಕೆ ತನ್ನನ್ನು ತಾನು ಸಮರ್ಪಣೆ ಮಾಡಿಕೊಳ್ಳುವ ಬಗ್ಗೆ ತಿಳಿಸುತ್ತದೆ. ಮೂರನೇ ಗಂಟು ದೇವರ ಕುರಿತು ಭಕ್ತಿಯನ್ನು ಸೂಚಿಸುತ್ತದೆ.

ಇದು ಏನನ್ನು ಸಂಕೇತಿಸುತ್ತದೆ?:

ಹಿಂದು ವಿವಾಹಗಳಲ್ಲಿ ಮತ್ತು ಹಿಂದು ಮಹಿಳೆಯರ ವಿವಾಹಿತ ಜೀವನದಲ್ಲಿ ಮಂಗಳಸೂತ್ರವು ಒಂದು ಮಹತ್ವದ ಪಾತ್ರವನ್ನು ಹೊಂದಿದೆ. ಸಾವಿನ ಕೊನೆ ಕ್ಷಣದವರೆಗೂ ತನ್ನ ಆತ್ಮದ ಜೊತೆಗಾರನೊಂದಿಗೆ ಶಾಶ್ವತವಾದ ಮದುವೆಯನ್ನು ಇದು ಸಂಕೇತಿಸುತ್ತದೆ. ಇಬ್ಬರು ಸಂಗಾತಿಗಳ ನಡುವಿನ ಮದುವೆ ಮತ್ತು ಬದ್ಧತೆಯ ದೃಢೀಕರಣದ ಸಂಕೇತವಾಗಿ ಹೆಂಡತಿಯು ಪ್ರೀತಿಯಿಂದ ಇದನ್ನು ಧರಿಸಬೇಕು. ಪತಿಯ ಮರಣದ ತನಕ ಹೆಂಡತಿ ಅದನ್ನು ಧರಿಸುತ್ತಾಳೆ. ಮಂಗಳಸೂತ್ರದಲ್ಲಿರುವ ಪ್ರತಿಯೊಂದು ಮಣಿಯು ಮದುವೆಯ ಪವಿತ್ರತೆಯನ್ನು ಮತ್ತು ವಿವಾಹಿತ ದಂಪತಿಗಳನ್ನು ರಕ್ಷಿಸಲು ದೈವಿಕ ಶಕ್ತಿಯನ್ನು ಹೊಂದಿರುತ್ತವೆ ಎಂದು ನಂಬಲಾಗಿದೆ. ಅಪಾಯ ಮತ್ತು ದುರ್ಘಟನೆಯಿಂದ ರಕ್ಷಿಸುವ ಮೂಲಕ ಪತಿಯ ರಕ್ಷಾಕವಚದಂತೆ ಕಾರ್ಯನಿರ್ವಹಿಸುತ್ತದೆ ಎಂದು ನಂಬಲಾಗಿದೆ. ಈ ಪವಿತ್ರವಾದ ಸೂತ್ರದ ಹರಿಯುವಿಕೆಯು ಅತ್ಯಂತ ದುರಾದೃಷ್ಟಕರವೆಂದು ಪರಿಗಣಿಸಲಾಗಿದೆ.

ಇಂದಿನ ದಿನಗಳಲ್ಲಿ ಮಂಗಳಸೂತ್ರ:

ಇಂದಿನ ದಿನಗಳಲ್ಲಿ ಮದುವೆ, ಸಂಬಂಧಗಳು ಮತ್ತು ಸಂಪ್ರದಾಯವು ಬದಲಾಗಿದೆ, ಮಂಗಳಸೂತ್ರದ ಮೌಲ್ಯವು ಕಳೆದುಹೋಗಿದೆ ಎಂದು ಪರಿಗಣಿಸಲಾಗಿದೆ. ಇಂದಿನ ದಂಪತಿಗಳಿಗೆ, ಇದು ಫ್ಯಾಷನ್ ಆಭರಣದ ಒಂದು ಭಾಗವಾಗಿದೆ, ಹಾಗಾಗಿ ಕೆಲವು ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಮಾತ್ರ ಇದನ್ನು ಧರಿಸಲಾಗುತ್ತದೆ. ಆದಾಗ್ಯೂ, ಹಲವು ವರ್ಷಗಳವರೆಗೂ ಸ್ಥಿರವಾಗಿ ಮತ್ತು ಅರ್ಥಪೂರ್ಣವಾಗಿ ಮೂಲರೂಪದಲ್ಲೇ ಉಳಿದಿರುವುದು ಮಂಗಳಸೂತ್ರದ ವೈಶಿಷ್ಟ್ಯವಾಗಿದೆ. ಮಹಿಳೆಯರು ಧರಿಸುವ ಇತರ ಎಲ್ಲಾ ಆಭರಣದ ತುಣುಕುಗಳಿಗಿಂತ ಹೆಚ್ಚಾಗಿ ಇದನ್ನು ಗೌರವಿಸುತ್ತಾರೆ ಎಂದು ನಾವು ನೋಡುತ್ತೇವೆ. ಆದ್ದರಿಂದ, ಜನರ ಸಾಂಸ್ಕೃತಿಕ ಮನಸ್ಥಿತಿಯಲ್ಲಿ ಭಾರೀ ಬದಲಾವಣೆ ಇದೆ ಎಂದು ನಾವು ಹೇಳಬಹುದು.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
287 views
Matrimonial
287 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
342 views
Match Making
342 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
440 views
Astrology in Marriage
440 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category