0 Shares 172 Views
00:00:00
18 Jan

ನೀವು ಎಷ್ಟು ಚೆನ್ನಾಗಿ ಸಂವಹನ ನಡೆಸುತ್ತೀರಿ?

December 27, 2017
172 Views

ಸಂವಹನವು ಅತ್ಯಂತ ಪ್ರಮುಖವಾದ ಅಂಶವಾಗಿದ್ದು ಅದು ಯಾವುದೇ ಸಂಬಂಧವನ್ನು ಬೆಳೆಸಬಹುದು ಅಥವಾ ಮುರಿಯಬಹುದು. ವೈಯಕ್ತಿಕ ಸಂಬಂಧಗಳ ವಿಚಾರಕ್ಕೆ ಬಂದಾಗ ಅದು ಹೆಚ್ಚು ನಿರ್ಣಾಯಕವಾಗುತ್ತದೆ. ನಾವು ಪ್ರೀತಿಯ ಬಾಂಧವ್ಯದಲ್ಲಿ ಇರುವಾಗ ಅದನ್ನು ಮುಂದಿನ ಹಂತಕ್ಕೆ ಕರೆದೊಯ್ಯುವಲ್ಲಿ ಸಂವಹನವು ಯಾವಗಲು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ, ಪರಸ್ಪರ ಸಂವಹನವನ್ನು ನಾವು ಎಷ್ಟು ಚೆನ್ನಾಗಿ ನಡೆಸುತ್ತೇವೆ ಎಂಬ ಅಂಶದ ಆಧಾರದ ಮೇಲೆ ಯಾವುದೇ ಸಂಬಂಧದ ಯಶಸ್ಸಿನ ಕಥೆಯು ಅವಲಂಬಿಸಿರುತ್ತದೆ.

ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಂವಹನವನ್ನು ಉತ್ತಮಗೊಳಿಸಲು ಬೇಕುಬೇಡಗಳ ಒಂದು ಸಾಮರಸ್ಯವಿದೆ:

ಏನನ್ನು ಅನುಸರಿಸಬೇಕು:

1. ನಿಮ್ಮ ಸಂಗಾತಿಯ ಸೂಚನೆಯನ್ನು ಪಡೆದುಕೊಳ್ಳಿ:

ನೀವು ಸಂಗಾತಿಯೊಂದಿಗೆ ನಿರ್ದಿಷ್ಟವಾಗಿ ಮಾತನಾಡುತ್ತಿರುವಾಗ ಯಾವುದೇ ಸಾಮಾನ್ಯವಾದ ಸಂಗತಿಗಳ ಬಗ್ಗೆ ಸಂವಹನವನ್ನು ನಡೆಸಬೇಡಿ. ಆದ್ದರಿಂದ, ನೀವು ತಿಳಿಸಬೇಕಾದ ವಿಚಾರದ ಬಗ್ಗೆ ಆತನ/ಆಕೆಯ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ.

2. ಸಂದರ್ಭಸನ್ನಿವೇಶಗಳು ಲೆಕ್ಕಕ್ಕೆ ಬರುತ್ತವೆ:

ನಿರ್ದಿಷ್ಟ ಕಾಲಾವಕಾಶಗಳಲ್ಲಿಯೇ ಕೆಲವು ವಿಷಯಗಳನ್ನು ಚರ್ಚಿಸಬೇಕಾಗುತ್ತದೆ, ಆದ್ದರಿಂದ ಸಂವಹನ ನಡೆಸಲು ಸರಿಯಾದ ಸಮಯ, ಸರಿಯಾದ ಸ್ಥಳ ಮತ್ತು ಸರಿಯಾದ ಭಾವನೆಗಳನ್ನು ಗುರುತಿಸಲಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

3. ಗಮನವನ್ನು ಕೇಂದ್ರೀಕರಿಸಿ:

ವಿಷಯದ ಮೇಲೆ ಯಾವಾಗಲೂ ಗಮನವನ್ನು ಕೇಂದ್ರೀಕರಿಸಬೇಕೆಂದು ಸಲಹೆ ನೀಡಲಾಗುತ್ತದೆ ಮತ್ತು ವಿಷಯವು ತುಂಬಾ ಮುಖ್ಯವಾಗಿದ್ದರೆ ಮತ್ತು ನಿರ್ಧಾರ ತೆಗೆದುಕೊಳ್ಳಬೇಕೆಂದಾದರೆ ವ್ಯತ್ಯಯಕ್ಕೆ ಒಳಗಾಗಬೇಡಿ/ ಚಂಚಲರಾಗಬೇಡಿ.

4. ಕಣ್ಣು/ಕಣ್ಣಿನ ಬಂಧ:

ನಿಮ್ಮ ಸಂಗಾತಿಗೆ/ಪಾಲುದಾರನಿಗೆ ಒಂದು ಸಂದೇಶವನ್ನು ತಿಳಿಯಪಡಿಸಲು ಕಣ್ಣಿನ ಸಂಪರ್ಕ ತುಂಬಾ ಮುಖ್ಯ. ಸಂದೇಶದ ತೀವ್ರತೆಯನ್ನು ಅರ್ಥಮಾಡಿಕೊಳ್ಳುವಂತೆ ಇದು ಅವರನ್ನು ಮಾಡುತ್ತದೆ.

5. “ನಾನು” ಎಂಬ ಪದ ಪ್ರಯೋಗ:

ವೈಯಕ್ತಿಕ ಸಂವಹನದಲ್ಲಿ ಇದು ಅತೀ ಮುಖ್ಯವಾದ ಪದ. ಈ ಪದವು ಅರ್ಥದಲ್ಲಿ ಬಹಳಷ್ಟು ಅಗಾಧ ಪ್ರಮಾಣವನ್ನು ಹೊಂದಿದೆ ಹಾಗೂ ನಿಮಗೆ ಆಸಕ್ತಿಯಿದೆ ಎಂದು ಮತ್ತೊಬ್ಬ ವ್ಯಕ್ತಿಗೆ ಭಾಸವಾಗುವಂತೆ ಮಾಡುತ್ತದೆ ಹಾಗೂ ಆತ / ಆಕೆ ಏನನ್ನು ಮಾತನಾಡುತ್ತಿದ್ದಾನೆ / ಳೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು.

6. ಮಾತುಗಳನ್ನು ಪುನರಾವರ್ತಿಸಿ:

ನಿಮ್ಮ ಸಂಗಾತಿಯು ಏನನ್ನು ತಿಳಿಸುತ್ತಾಳೆ/ನೆ ಎಂಬುದನ್ನು ಪುನರಾವರ್ತಿಸುವಂತೆ ಯಾವಾಗಲೂ ಸಲಹೆ ನೀಡಲಾಗುತ್ತದೆ. ಯಾವುದೇ ವಿಚಾರದ ಮೇಲೆ ಒಂದೇ ನಿರ್ಧಾರವನ್ನು ಮತ್ತು ಒಂದೇ ತಿಳುವಳಿಕೆಯನ್ನು ಇಬ್ಬರೂ ಕೂಡ ಹೊಂದಿದ್ದಾರೆಂದು ಖಚಿತಪಡಿಸಿಕೊಳ್ಳಿ.

ಬೇಕು/ಅಗತ್ಯವಿರುವ ಅಂಶಗಳು :

1. ಅಡ್ಡಿಪಡಿಸುವುದರಿಂದ ದೂರವಿರಿ:

ಅವನು / ಅವಳು ಕೆಲವು ಚಟುವಟಿಕೆಯಲ್ಲಿ ಕಾರ್ಯನಿರತವಾಗಿದ್ದರೆ, ಮಾತನಾಡಬೇಕೆಂದು ಅವರನ್ನು ಅಡ್ಡಿಪಡಿಸಲು ಹೋಗಬೇಡಿ. ಕಾರಣ, ಬಹುತೇಕ ಸಮಯದಲ್ಲಿ ನಾವು ವಶಕ್ಕೊ ಒಳಗಾಗಲ್ಪಟ್ಟಿದ್ದಾಗ, ಇನ್ನೊಬ್ಬ ವ್ಯಕ್ತಿಯು ಏನಾದರೂ ಸಂವಹನ ನಡೆಸುತ್ತಿದ್ದಾಗ, ಏನೋಒಂದನ್ನು ಕಳೆದುಕೊಳ್ಳುವ ಪ್ರತಿಯೊಂದು ಅವಕಾಶವೂ ಅಲ್ಲಿರುತ್ತದೆ, ಹಾಗಾಗಿ ನಾವು ಅದರ ಮೂಲತತ್ವದಿಂದ ತಪ್ಪಿಸಿಕೊಳ್ಳುತ್ತೇವೆ.

2. ಸಂವಹನದ ಮೂಲಕ ಚಾಲನೆ:

ವೈಯಕ್ತಿಕ ಸಂಬಂಧದಲ್ಲಿ ಇದು ಒಂದು ದೊಡ್ಡ ಸಂಖ್ಯೆಯಾಗಿದೆ ಏಕೆಂದರೆ ನೀವು ಕೇವಲ ಈಗತಾನೇ ಒಳಗೆ ಇಣುಕಿ ನೀಡುತ್ತೀರಿ ಮತ್ತು ಅದರಿಂದ ಕೆಲವು ಸಂದೇಶವನ್ನು ಪಡೆಯುತ್ತೀರಿ. ಬೇರೆ ವ್ಯಕ್ತಿಯು ಅದನ್ನು ತೆಗೆದುಕೊಂಡಾಗ ಅಥವಾ ತೆಗೆದುಕೊಳ್ಳದಿರುವಾಗ ಅದಕ್ಕಾಗಿ ನೀವು ಹೊರಗೆ ಹೋಗಿ, ಖಚಿತಪಡಿಸುವಂತಿಲ್ಲ.

3. ನಿಮ್ಮ ಸಂಗಾತಿಯನ್ನು ತೆಗಳುವುದನ್ನು/ದೂಷಿಸುವುದನ್ನು ತಪ್ಪಿಸಿ:

ಭವಿಷ್ಯದ ಚರ್ಚೆಗಾಗಿ ನೆನಪಿಟ್ಟುಕೊಳ್ಳುವಂತೆ ಮತ್ತು ಏನೋಒಂದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವಂತೆ ಸಂಗಾತಿಗೆ ತಿಳಿಸುವುದು ಸೂಕ್ತವಾದ ನಡತೆಯಲ್ಲ, ಏಕೆಂದರೆ ಅದು ತುಂಬಾ ನಿಷ್ಪ್ರಯೋಜಕವಾಗಿದೆ.

4. ಕಿರಿಕಿರಿಯು ವಿಫಲತೆಗೆ ಕಾರಣವಾಗುತ್ತದೆ:

ಆಕೆಯ / ಆತನ ವೈಯಕ್ತಿಕ ಹೇಳಿಕೆಯನ್ನು ಕುರಿತು ವ್ಯಕ್ತಿಯು ಸಂಪೂರ್ಣವಾಗಿ ಮಾತನಾಡಲು ಅವಕಾಶ ನೀಡಿ. ತದನಂತರ ನೀವು ಅದರ ಬಗ್ಗೆ ಪ್ರತಿಕ್ರಿಯಿಸಬಹುದು. ಅವರ ಮಾತುಗಳನ್ನು ನಿಲ್ಲಿಸಬೇಡಿ ಅಥವಾ ನೀವು ಅವರ ಮಾತುಗಳನ್ನು ಪೂರ್ಣಗೊಳಿಸಬಾರದು.

5. ಕೊನೆಯಲ್ಲಿ ಪ್ರಶ್ನೆಗಳು:

ಸಂವಹನ ಅಥವಾ ಸಂಭಾಷಣೆಯು ಪೂರ್ಣಗೊಳ್ಳಲು ಬಿಡಿ, ನಂತರದಲ್ಲಿ ನೀವು ಪ್ರಶ್ನೆಗಳನ್ನು ಕೇಳಬಹುದು ಮತ್ತು ಪ್ರಶ್ನೆಗಳಿಗೆ ಮಧ್ಯದಲ್ಲಿ ಅಡ್ಡಿ ಪಡಿಸಬೇಡಿ, ಏಕೆಂದರೆ ಇದು ಮಾತನಾಡುತ್ತಿರುವ ವಿಚಾರದಿಂದ ವ್ಯತ್ಯಯಗೊಂಡು ವಿಚಲನಗೊಳ್ಳಲು ಕಾರಣವಾಗಬಹುದು ಮತ್ತು ಬೇರೆ ಏನನ್ನಾದರೂ ಹೇಳಲು ಹೊರಡಬಹುದು.

6. ಅಂತಿಮ ಮಾತು ನನ್ನದಾಗಿರುತ್ತದೆ.

ಯಾವುದೇ ಸಂವಹನದಲ್ಲಿ ಕೊನೆಯ ಮಾತಿಗಾಗಿ ಎಂದಿಗೂ ಸ್ಪರ್ಧಿಸಬಾರದು. ಇದು ವ್ಯಾಪಾರ-ವ್ಯವಹಾರದ ಒಂದು ಚರ್ಚೆಯೇನಲ್ಲ, ಅದು ನಡೆಯುತ್ತಲೇ ಇರುತ್ತದೆ. ಇಬ್ಬರ ಯೋಗಕ್ಷೇಮಕ್ಕಾಗಿ ಮತ್ತು ಎರಡೂ ಜೀವಗಳ ಉಳಿವಿಗಾಗಿ ಅಂತಿಮದಲ್ಲಿ ಯಾರುಬೇಕಾದರೂ ಮುನ್ನಡೆ ಸಾಧಿಸುತ್ತಾರೆ. ಆದ್ದರಿಂದ ಮಾತನಾಡುವಾಗ ಸ್ಪರ್ಧೆಗೆ ಇಳಿಯಬೇಡಿ.

ಸಂಗಾತಿಗಳ ಅಥವಾ ಪಾಲುದಾರರ ನಡುವೆ ಪರಿಣಾಮಕಾರಿ ಸಂವಹನಕ್ಕಾಗಿ ಕೊಡುವ ಮತ್ತು ತೆಗೆದುಕೊಳ್ಳುವ ಒಂದು ಅತ್ಯುತ್ತಮ ವಿಧಾನವಾಗಿದೆ. ಒಬ್ಬ ವ್ಯಕ್ತಿ ಮಾತನಾಡಲು ಅವಕಾಶ ನೀಡಿ ಆಗ ಬೇರೊಬ್ಬನು ಅದನ್ನು ಕೇಳಿಸಿಕೊಳ್ಳಬೇಕು ಹಾಗೂ ಅದಕ್ಕೆ ಪ್ರತಿಯಾಗಿ ಯಾವುದೇ ಅಡಚಣೆಯಿಲ್ಲದೇ ಆಲಿಸುವುದು ಕೂಡ ಉತ್ತಮ ಫಲಿತಾಂಶಗಳಿಗೆ ಕಾರಣವಾಗುತ್ತದೆ. ತಾಳ್ಮೆ, ಶಕ್ತಿ ಮತ್ತು ಗಮನ ಮೂರು ಪ್ರಾಥಮಿಕ ಗುಣಗಳು ವೈಯಕ್ತಿಕವಾದ ಪರಿಣಾಮಕಾರಿ ಸಂವಹನಕ್ಕೆ ಅಗತ್ಯವಿರುತ್ತವೆ. ಹಾಗೂ ಪಾಲುದಾರರ ನಡುವೆ ಯಾವುದೇ ಚರ್ಚೆಯೂ ಉತ್ಸಾಹಭರಿತವಾಗಿರಲಿ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
352 views
Matrimonial
352 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
408 views
Match Making
408 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
585 views
Astrology in Marriage
585 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category