0 Shares 157 Views
00:00:00
21 Jan

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

April 6, 2018
157 Views

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ ಸಂತೋಷ ಮತ್ತು ಅಮೋಘ ಆನಂದದ ಆಚರಣೆಗಳನ್ನು ಮತ್ತು ಸಮಾರಂಭಗಳನ್ನು ನಡೆಸಿ ಒಬ್ಬರಿಗೊಬ್ಬರು ಆ ಖುಷಿಯನ್ನು ಹಂಚಿಕೊಳ್ಳುತ್ತಾರೆ. ಆದರ್ಶ ಸಂಗಾತಿಯನ್ನು ಪಡೆದಾಗ, ಪ್ರತಿಯೊಬ್ಬರೂ ತಮ್ಮ ಜೀವನ-ಸಂಗಾತಿಯೊಂದಿಗೆ, ಜೀವನ ನಡೆಸುವಲ್ಲಿ ಪರಿವರ್ತನೆಯ ಒಂದು ಹಂತದ ಮೂಲಕ ಹಾದುಹೋಗುತ್ತಾರೆ. ಹಾಗೂ ಕೆಲವರು ತಮ್ಮ ಸಂಗಾತಿಯನ್ನು ಹುಡುಕುವಲ್ಲಿ ಬಹಳಷ್ಟು ಅಡೆತಡೆಗಳನ್ನು ಮತ್ತು ಮದುವೆಯಲ್ಲಿ ವಿಳಂಬವನ್ನು ಎದುರಿಸುತ್ತಾರೆ. ನೀವು ಮದುವೆಯಲ್ಲಿ ವಿಳಂಬವನ್ನು ಎದುರಿಸಿದ್ದೀರಾ? ನಿಮ್ಮ ಮನೆಯಲ್ಲೇ ನಿಮ್ಮ ಈ ಸಮಸ್ಯೆಗೆ ಪರಿಹಾರವನ್ನು ನೀವು ಕಾಣಬಹುದು. ನಮ್ಮ ಪೂರ್ವಜರು ತಮ್ಮತಮ್ಮ ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯದ ಬಾಳ್ವೆಗಾಗಿ ವಾಸಸ್ಥಾನದ ತತ್ವಗಳನ್ನು ಕಾರ್ಯಗತಗೊಳಿಸಲು ಬಳಸುತ್ತಾರೆ. ಮೂಲಭೂತವಾಗಿ, ಅವುಗಳು ನಿಮ್ಮ ಮನೆಯ ವಾಸ್ತು ದಿಕ್ಕುಗಳನ್ನು ಮತ್ತು ಶಕ್ತಿಯ ವಿಜ್ಞಾನವನ್ನು ಆಧರಿಸಿದೆ, ನಿಮ್ಮ ಮನೆಯ ರಚನೆ ಮತ್ತು ಅದರ ಪವಿತ್ರ ತತ್ವಗಳು ನಿಮ್ಮ ಆದರ್ಶ ಸಂಗಾತಿಯನ್ನು ಕಂಡುಹಿಡಿಯುವಲ್ಲಿ ಸಹಾಯ ಮಾಡುತ್ತದೆ ಎಂದು ಅದು ಪರಿಗಣಿಸುತ್ತದೆ.

ಮದುವೆಯ ವಿಳಂಬಕ್ಕೆ ವಾಸ್ತು

ಜನರು ವಾಸ್ತುವನ್ನು ಅಳವಡಿಸಿಕೊಳ್ಳುವುದಿಲ್ಲ ಎಂಬ ಯುಗದಲ್ಲಿ ನಾವು ಇದ್ದೇವೆ. ಇದು ನಮ್ಮ ಜೀವನದಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶಾಂತಿ ಮತ್ತು ಸಮೃದ್ಧಿಯೊಂದಿಗೆ ತಮ್ಮ ಜೀವನವನ್ನು ತುಂಬಿಕೊಳ್ಳಲು ಎಲ್ಲರೂ ಬಯಸುತ್ತಾರೆ. ನಿಮ್ಮ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿ ಪಡೆಯಲು ನೀವು ವಾಸ್ತು ತತ್ವಗಳ ಪ್ರಕಾರ ನಿಮ್ಮ ಮನೆಯನ್ನು ನಿರ್ಮಿಸಬೇಕಾಗಿದೆ. ನಿಮ್ಮ ಮನೆಯ ಮೇಲೆ ಪರಿಣಾಮ ಬೀರುವ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳ ಪರಸ್ಪರ ಪ್ರಭಾವವಿದ್ದೇ ಇರುತ್ತದೆ. ಮದುವೆಯಲ್ಲಿ ವಿಳಂಬವನ್ನು ತಪ್ಪಿಸಲು ನಿಮ್ಮ ಮನೆಯಲ್ಲಿರುವ ’ಸ್ಥಾನಗಳು’ ಅನುಕೂಲಕರ ದಿಕ್ಕಿನಲ್ಲಿರಬೇಕು. ನಿಮ್ಮ ಮನೆಯ ಮದುವೆ ಸ್ಥಾನವು ನಕಾರಾತ್ಮಕ ಶಕ್ತಿಯಿಂದ ತುಂಬಿದ್ದರೆ, ನಿಮ್ಮ ಮದುವೆಯಲ್ಲಿ ನೀವು ಎದುರಿಸುತ್ತಿರುವ ಅಡಚಣೆಗಳಿಗೆ ಅದು ಪ್ರಮುಖ ಕಾರಣವಾಗಿರುತ್ತದೆ. ಹೀಗಾಗಿ ತಿರಸ್ಕಾರದ ಮತ್ತು ಸ್ವೀಕಾರಾರ್ಹದ ಮದುವೆಯ ಪ್ರಸ್ತಾಪಗಳಿಗೆ ಅದು ಕಾರಣವಾಗಬಹುದು. ಮದುವೆಯನ್ನು ಪ್ರತಿನಿಧಿಸುವ ನಿಮ್ಮ ಮನೆಯಲ್ಲಿ ನಿರ್ದಿಷ್ಟ ವಿಭಾಗವು ನಕಾರಾತ್ಮಕ ಶಕ್ತಿಯಿಂದ ತುಂಬಿಲ್ಲವೆಂದು ಹಾಗೂ ನಿಮ್ಮ ವೈವಾಹಿಕ ಜೀವನದಲ್ಲಿ ಹಿನ್ನಡೆಗಳನ್ನು ಉಂಟುಮಾಡುತ್ತದೆ ಎಂದು ಖಚಿತಪಡಿಸಿಕೊಳ್ಳಿ.

7 ಚಕ್ರಗಳು

ಚಕ್ರಗಳು ನಿಮ್ಮ ದೇಹದ ಮುಖ್ಯ ಶಕ್ತಿಯ ಕೇಂದ್ರಗಳಾಗಿವೆ. ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ 7 ಚಕ್ರಗಳನ್ನು ಹಿಡಿದಿಟ್ಟು ಕೊಂಡಿರುತ್ತವೆ, ಅವುಗಳು ದೇಹಕ್ಕೆ ಜೀವ ಶಕ್ತಿಯನ್ನು ನೀಡುತ್ತವೆ. ದೇಹದ ಆಂತರಿಕ ಶಕ್ತಿಯು ಬ್ರಹ್ಮಾಂಡದ ಶಕ್ತಿಯೊಂದಿಗೆ ಸಂಪರ್ಕ ಹೊಂದಿದಾಗ ಈ ಚಕ್ರಗಳು ವಿದ್ಯುದಾವೇಶಕ್ಕೆ ಒಳಗಾಗುತ್ತವೆ. ಆದಾಗ್ಯೂ, 4 ನೇ ಚಕ್ರವಾದ ಹೃದಯ ಚಕ್ರವು ಹೃದಯದ ಹತ್ತಿರದಲ್ಲಿರುತ್ತದೆ, ಅದು ಭಾವನೆಗಳನ್ನು, ಸಹಾನುಭೂತಿಯನ್ನು ಮತ್ತು ಪ್ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸುವುದನ್ನು ಪ್ರತಿನಿಧಿಸುತ್ತದೆ. ಈ ಚಕ್ರವನ್ನು ಕ್ರಿಯಾಶೀಲವನ್ನಾಗಿ ಮಾಡದಿದ್ದರೆ, ಅದು ನಿಮ್ಮ ಮದುವೆಯಲ್ಲಿನ ವಿಳಂಬಕ್ಕೆ ಕಾರಣವಾಗಬಹುದು.

ಶ್ವೇತವರ್ಣದ ವಿವಾಹ ಹೂವುಗಳು

ಬೆರಗುಗೊಳಿಸುವ ಬಿಳಿ ಹೂವುಗಳು ಮತ್ತು ಬೆಳ್ಳಿಯ ವೈಶಿಷ್ಯತೆಗಳೊಂದಿಗೆ ನೀವು ಎಲ್ಲವನ್ನೂ ಬಿಳಿ ಬಣ್ಣದಲ್ಲಿ ಪಡೆಯಬಹುದು. ಇದು ಬಹಳಷ್ಟು ಸೊಬಗನ್ನು ಸೇರಿಸುತ್ತದೆ ಹಾಗೂ ವಿವಾಹೋತ್ಸವಗಳನ್ನು ಜಗಮಗಿಸುವ ಬೆಳಕು ಮತ್ತು ಪ್ರೇಮವನ್ನು ಸೂಚಿಸುವ ಭಾವನೆಗಳನ್ನು ಮತ್ತಷ್ಟು ವರ್ಧಿಸುತ್ತದೆ.

ವ್ಯಕ್ತಿಯ ವೈವಾಹಿಕ ಸಂಬಂಧವನ್ನು ಅಭಿವೃದ್ಧಿಪಡಿಸುವಲ್ಲಿ ಶಕ್ತಿ ವಿಜ್ಞಾನವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ ಹಾಗೂ ಆರೋಗ್ಯಕರವಾದ ಮತ್ತು ಸಂತೋಷದಿಂದ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ಇದು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸರಳ ವಾಸ್ತುವು ನಿಮಗೆ ಸರಳವಾದ ಮತ್ತು ಅನನ್ಯವಾದ ವಾಸ್ತು ಪರಿಹಾರವನ್ನು ಒದಗಿಸುತ್ತದೆ. ನಮ್ಮ ನುರಿತ ತಜ್ಞರು ನಿಮ್ಮ ಅನುಕೂಲಕರ ದಿಕ್ಕನ್ನು ತಿಳಿದುಕೊಂಡು ನಿಮಗೆ ಮಾರ್ಗದರ್ಶನ ನೀಡುತ್ತಾರೆ, ಇದು ಕುಟುಂಬಪೋಷಕನ ಜನ್ಮ ದಿನಾಂಕದ ಮೇಲೆ ಆಧಾರಿತವಾಗಿದೆ. ಸರಳ ವಾಸ್ತುವಿನ ಪವಿತ್ರ ತತ್ವಗಳು ನಿಮ್ಮ ಮನೆಯಿಂದ ಮತ್ತು ನಿಮ್ಮ ಜೀವನದಿಂದ ಎಲ್ಲ ನಕಾರಾತ್ಮಕ ಶಕ್ತಿಗಳು ಸ್ವರೂಪ ಪಡೆಯಲು ಸಹಾಯ ಮಾಡುತ್ತವೆ. ಆದಾಗ್ಯೂ, ಹಿಂದೆ ಜನರು ಅನೇಕ ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು, ಆದರೆ ಸರಳ ವಾಸ್ತುವಿನ ಶಕ್ತಿ ವಿಜ್ಞಾನದ ಸಹಾಯದಿಂದ ಅವರು ಇಂದು ಭವ್ಯವಾದ ಜೀವನವನ್ನು ನಡೆಸುತ್ತಿದ್ದಾರೆ. ಸರಳ ವಾಸ್ತುವಿನ ಪರಿಹಾರಗಳನ್ನು ಅಳವಡಿಸಿಕೊಳ್ಳುವುದು ಮದುವೆ ಪ್ರಸ್ತಾಪಗಳನ್ನು ಪಡೆಯಲು ಸಹಾಯ ಮಾಡುತ್ತದೆ.

You may be interested

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
187 views
Match Making
187 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
180 views
Astrology in Marriage
180 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

ಮಂಗಳನು ಎಂಟು ಮನೆಯಲ್ಲಿರುವಂತಹ ಮದುವೆ
Astrology in Marriage
183 views
Astrology in Marriage
183 views

ಮಂಗಳನು ಎಂಟು ಮನೆಯಲ್ಲಿರುವಂತಹ ಮದುವೆ

Saral Marriage - March 30, 2018

ಮಂಗಳ ಗ್ರಹವು ಎಂಟನೇ ಮನೆಯಲ್ಲಿರುವಾಗ, ವ್ಯಕ್ತಿಯ ಮೇಲೆ ಹಾಗೂ ಜೀವನ ಸಂಗಾತಿಯ ಮೇಲೂ ಸಹ ಆ ಗ್ರಹವು ಅತ್ಯಂತ ಸೂಕ್ಷ್ಮವಾದ ಮತ್ತು ಅಪಾಯಕಾರಿ ಸ್ಥಳವಾಗಿರುತ್ತದೆ. ಇದು ವ್ಯಕ್ತಿಯ ಸಂಬಂಧ, ಒಡನಾಟ, ಸಂತೋಷ, ಯೋಗಕ್ಷೇಮ, ಪ್ರಗತಿ, ಅಥವಾ ಮದುವೆಯ…

Leave a Comment

Your email address will not be published.

Most from this category