0 Shares 158 Views
00:00:00
18 Jun

ವಿವಾಹ-ಪೂರ್ವ ಸಮಾರಂಭದ ಅದ್ಭುತ ಫೋಟೋಗ್ರಫಿ ಒಂದು ಮಾರ್ಗದರ್ಶಿ

January 15, 2018
158 Views

ವಿವಾಹ-ಪೂರ್ವ ಫೋಟೋಗ್ರಫಿಯ ಸೆಷನ್ ಅನ್ನು ಪಡೆಯುವುದು ಒಂದು ರೀತಿಯಲ್ಲಿ ಹೆಚ್ಚಿನ ಧಾರ್ಮಿಕ ಕಾರ್ಯ ಅಥವಾ ಸಂದರ್ಭವಾಗಿ ಮಾರ್ಪಟ್ಟಿದೆ, ಆದ್ದರಿಂದ ನಾವು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದಿಲ್ಲ. ನಿಮ್ಮ ಜೀವನದ ಬಹು ದೊಡ್ಡ ದಿನದ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ನಿಮ್ಮ ವಿವಾಹದ ಸಮಾರಂಭಕ್ಕಿಂತಲೂ ಹೆಚ್ಚಿನ ಬಹುತೇಕ ಸವಿನೆನಪುಗಳನ್ನು ಜನರ ಮನದಲ್ಲಿ ಮೂಡಿಸಲು ಇದು ಜನರಿಗಾಗಿ ಮಾಡುವ ಒಂದು ಆಮಂತ್ರಣದಂತೆ ಕೆಲಸ ಮಾಡುತ್ತದೆ, ನಾವಿಲ್ಲಿ ಕೆಲವು ಸಲಹೆಗಳನ್ನು ಗುರುತು ಹಾಕಿ ಕೊಟ್ಟಿದ್ದೇವೆ. ಆದ್ದರಿಂದ, ನೀವು ಮದುವೆ ಸಮಾರಂಭದ ಏರ್ಪಾಡುಗಳಲ್ಲಿ ಮುಳುಗುವುದಕ್ಕೂ ಮುನ್ನ, ಒಂದು ಸೂಕ್ತವಾದ ಫೋಟೋಗ್ರಫಿ ಸೆಷನ್ ಅನ್ನು ಪಡೆದುಕೊಳ್ಳಬಹುದು.

ಅತ್ಯುತ್ತಮವಾದವರನ್ನು ನೇಮಿಸಿಕೊಳ್ಳಿ

ನಿಮ್ಮ ಬಜೆಟ್ ನ ಆಧಾರದ ಮೇಲೆ ಈ ಕೆಲಸಕ್ಕಾಗಿ ಯಾರನ್ನು ಆಯ್ಕೆಮಾಡಬಹುದೆಂದು ಹಲವಾರು ಫೋಟೋಗ್ರಫರ್‌ಗಳನ್ನು ಕಲೆಹಾಕಿ, ಅವರಲ್ಲಿ ಅತ್ಯುತ್ತಮವಾದವರನ್ನು ಆಯ್ಕೆಮಾಡಿ. ಆದಾಗ್ಯೂ, ನಿಮಗೆ ಅತ್ಯುತ್ತಮವಾಗಿ ಏನು ಮತ್ತು ಯಾರು ಹೆಚ್ಚು ಸೂಕ್ತವೆಂಬುದನ್ನು ನೀವೇ ನೋಡಬೇಕು. ಉತ್ತಮ ಛಾಯಾಗ್ರಾಹಕ ನಿಮ್ಮ ಆಲೋಚನೆಗಳು, ವಿಷಯಗಳು, ಸ್ಥಳಗಳು ಮತ್ತು ಇತರ ಅಂಶಗಳನ್ನು ಸೂಚಿಸಬಹುದು. ನಿಮ್ಮ ಆಲೋಚನೆಗಿಂತ ಅದು ಸುಲಭವಾದ ಮಾರ್ಗವಾಗಬಹುದು. ಇಮೇಜ್‌ಗಳನ್ನು ಹೇಗೆ ಡಿಸೈನ್ ಮಾಡುತ್ತೇನೆಂದು ಅವನು ನಿಮಗೆ ಮೊದಲೇ ತಿಳಿಸಲು ಸಹ ಸಾಧ್ಯವಾಗುತ್ತದೆ. ಇದರಿಂದ ನೀವು ಶ್ರೇಷ್ಠ ಫಲಿತಾಂಶವನ್ನು ಪಡೆಯುವುದರೊಂದಿಗೆ ನಿಮ್ಮ ನಿರೀಕ್ಷೆಯನ್ನು ನಿಜವಾಗಿಸುವ ಫೋಟೋ ಇಮೇಜ್‌ಗಳನ್ನು ಪಡೆಯಲು ಸಾಧ್ಯ.

ಸ್ಥಳ

ವಿವಾಹ-ಪೂರ್ವ ಫೋಟೋಗ್ರಫಿ ಸೆಷನ್‌ನ ಪ್ರಮುಖ ಅಂಶವೆಂದರೆ ನೀವು ಪೋಟೋಶೂಟ್‌ಗೆ ಆಯ್ಕೆ ಮಾಡಿಕೊಳ್ಳುವ ಸ್ಥಳವಾಗಿದೆ. ಹಾಗಾಗಿ ಸ್ಥಳದ ಆಯ್ಕೆಯು ವಿವಾಹಪೂರ್ವದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ನಿಮ್ಮ ಇಮೇಜ್ ಗಳು ಯಾವ ರೀತಿಯಲ್ಲಿ ಇರಬೇಕೆಂಬುದನ್ನು ತೀರ್ಮಾನಿಸಲು ಆ ಸಮಾರಂಭದ ಹಿನ್ನೆಲೆಯೂ ಕೂಡ ಸಾಕಷ್ಟು ಪ್ರಭಾವ ಪೂರ್ಣವಾಗಿರಲಿದೆ. ನೀವು ಹೊರಾಂಗಣ ಸ್ಥಳವನ್ನು ಹುಡುಕುತ್ತಿದ್ದಲ್ಲಿ, ದಿನದ ಬೆಳಗಿನ ಸಮಯದಲ್ಲಿ ಫೋಟೋಶೂಟ್ ಅನ್ನು ಮಾಡಬೇಕಾಗುವುದು. ಈ ಬಗೆಯ ಫೋಟೋಶೂಟ್‌ಗಾಗಿ ನೀವು ಅಲಂಕೃತವಾಗಿರುವ ಒಳಾಂಗಣದಲ್ಲೂ ಅಥವಾ ಸ್ಟುಡಿಯೊದಲ್ಲೂ ಸಹ ಮಾಡಬಹುದು.

ಏನನ್ನು ಧರಿಸಬೇಕೆಂದು ಆಯ್ಕೆ ಮಾಡಿ

ನಿಮ್ಮ ಫೋಟೋಗ್ರಫಿ ಸೆಷನ್, ನಿಮ್ಮ ಸಂಗಾತಿ ಮತ್ತು ನಿಮ್ಮನ್ನು ಮಾತ್ರ ಒಳಗೊಂಡಿರಲಿದೆ ಎಂದು ನಾವು ಭಾವಿಸುತ್ತೇವೆ. ಕೆಲವು ಸಂದರ್ಭಗಳಲ್ಲಿ, ಈ ಶೂಟ್ ನಲ್ಲಿ ಸ್ನೇಹಿತರನ್ನೂ ಮತ್ತು ಕುಟುಂಬವರ್ಗದವರನ್ನೂ ಸಹ ಸೇರಿಸಲಾಗುತ್ತದೆ. ನಿಮ್ಮ ಉಡುಪುಗಳು ಪರಸ್ಪರ ಮೇಳೈಸಿವೆ ಮತ್ತು ಒಂದಕ್ಕೊಂದು ಪೂರಕವಾಗಿವೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಇದನ್ನು ವಿಶೇಷವಾಗಿ ವಧುವರರು ಅನುಸರಿಸಬೇಕಾದ ಅಗತ್ಯವಿದೆ. ಇದೇ ರೀತಿಯಲ್ಲಿ ಪರಿಕರಗಳನ್ನು ಸಹ ಜೋಡಿಸಿಕೊಳ್ಳಿ.

ನಿಮ್ಮ ಪ್ರೇಮದ ಕಥೆಯನ್ನು ಪ್ರದರ್ಶಿಸಿ

ಒಂದು ವಿವಾಹ-ಪೂರ್ವ ಛಾಯಾಗ್ರಹಣ ಸಮಾರಂಭವೆಂಬುದು, ನಿಮ್ಮ ಸಂಗಾತಿಯೊಂದಿಗೆ ನೀವು ಹಂಚಿಕೊಳ್ಳುವ ಬಂಧವನ್ನು ಪ್ರದರ್ಶಿಸುವ ವಿಚಾರವನ್ನು ಕುರಿತದ್ದಾಗಿರಲಿ. ನೀವಿಬ್ಬರೂ ಎಲ್ಲಾ ದಂಪತಿಗಳಿಗಿಂತ ಹೇಗೆ ಭಿನ್ನರಾಗಿದ್ದೀರಿ ಎಂಬುದನ್ನು ಇಡೀ ಜಗತ್ತಿಗೆ ಇದು ತೋರಿಸುತ್ತದೆ, ಆದರೆ ನಿಜವಾದ ಪ್ರೀತಿಯ ಸಾಮ್ಯತೆಯು ನಮ್ಮೆಲ್ಲರಿಗೂ ಒಂದೇ ಆಗಿರುತ್ತದೆ. ಈ ಸೆಷನ್ ಸಂಪೂರ್ಣವಾಗಿ ಭಾವನೆಗಳ ಬಗ್ಗೆ ಇರುತ್ತದೆ ಹಾಗೂ ನೀವು ಪರಸ್ಪರರ ಬಗ್ಗೆ ಎಷ್ಟು ಭಾವನೆಯೊಂದಿಗೆ ಬೆಸೆದಿದ್ದೀರಿ ಎಂಬುದನ್ನು ತೋರಿಸುವ ಒಂದು ಅದ್ಭುತ ಮಾರ್ಗವಾಗಿದೆ. ಪ್ರತಿಯೊಂದು ಇಮೇಜ್, ಪ್ರತಿಯೊಂದು ಎಕ್ಸ್ ಪ್ರೆಷನ್, ಪ್ರತಿಯೊಂದು ಕ್ಷಣವನ್ನು ನಿಮ್ಮ ನೆನಪುಗಳ ಒಳಗೆ ಶಾಶ್ವತವಾಗಿ ಬಂಧಸಿ ಇಡಿ.

ವೀಡಿಯೋಗ್ರಫಿ

ಒಂದುವೇಳೆ ನಿಮಗೆ ಇನ್ನೂ ಕೇವಲ ಫೋಟೋಗಳನ್ನು ತೆಗೆಸಿಕೊಳ್ಳುವುದು ಇಷ್ಟವಾಗದಿದ್ದರೆ, ನೀವು ವೀಡಿಯೊವನ್ನು ಸಹ ಮಾಡಬಹುದು. ವಿವಾಹ-ಪೂರ್ವ ಫೋಟೋಗ್ರಫಿ ಸೆಷನ್ ನಲ್ಲಿ ವೀಡಿಯೋ ಕವರೇಜ್ ಅನ್ನೂ ಸಹ ಅಳವಡಿಸಿಕೊಳ್ಳಬಹುದು, ಇದರಿಂದ ನಿಮ್ಮ ಸಂಗಾತಿಯು ಸಾಮಾನ್ಯವಾಗಿ ಯಾವ ಕೆಲಸಗಳಲ್ಲಿ ನಿರತರಾಗಿದ್ದಾರೆ ಎಂಬುದನ್ನು ಪರಸ್ಪರ ಹಂಚಿಕೊಳ್ಳುವುದನ್ನು ಕಾಣಲಾಗುತ್ತದೆ. ಉದಾಹರಣೆಗೆ, ಡೇಟ್ ನಡೆಸುವ ರಾತ್ರಿಯನ್ನು ಮಾಡುವ ಭೇಟಿ, ಸೂರ್ಯಾಸ್ತದ ಸಮಯದಲ್ಲಿ ನೀರಿನ ಬಳಿ ಕುಳಿತುಕೊಳ್ಳುವುದು, ತಾವು ಬಯಸುವ ಅತ್ಯದ್ಭುತವಾದ ಅಮ್ಯೂಸ್ಮೆಂಟ್ ಪಾರ್ಕ್ ಗಳಿಗೆ ಹೋಗುವುದು, ಇನ್ನೂ ಮುಂತಾದವು. ಇದು ನಿಜವಾದ ಕ್ಷಣಗಳನ್ನು ದಾಖಲಿಸಲು ಸಹಾಯ ಮಾಡುತ್ತದೆ ಮತ್ತು ಪೂರ್ವನಿರ್ಧಾರಿತ ಸ್ನ್ಯಾಪ್ ಶಾಟ್ ಗಳಿಗಿಂತ ಉತ್ತಮವಾದ ಫಲಿತಾಂಶವನ್ನು ತಂದಕೊಡಬಲ್ಲದು.

ಈ ಫೋಟೋಗ್ರಫಿ ಸಮಾರಂಭದ ಸೌಂದರ್ಯ ಮತ್ತು ಭವ್ಯತೆಯಲ್ಲಿ ಇನ್ನು ಸ್ವಲ್ಪ ಹೆಚ್ಚು ಇಷ್ಟಪಡುವಂತಹ ಅನುಭವದಲ್ಲಿ ನಿರತರಾಗಿರಿ. ಇದು ನೀವು ಇನ್ನೆಂದಿಗೂ ಪಡೆಯಲು ಸಾಧ್ಯವಾಗದ ಅತ್ಯಂತ ಆಹ್ಲಾದಕರ ಗಳಿಗೆಗಳಲ್ಲಿ ಒಂದಾಗಿದೆ. ಇದಾದ ತಕ್ಷಣವೇ ನಿಮ್ಮ ಹತ್ತಿರದ ಆತ್ಮೀಯ ಸಂಬಂಧಿಕರ ಕುಟುಂಬವನ್ನು ಮತ್ತು ಸ್ನೇಹಿತರನ್ನು ಸ್ವಾಗತಿಸುವುದರಲ್ಲಿ ತೊಡಗಿಕೊಳ್ಳಿ. ಇದು ಒಟ್ಟಿಗೆ ಒಂದಾಗಿ ಬೆಳೆಯುವ ಒಂದು ಅತ್ಯಂತ ಸುಂದರಮಯವಾದ ಮಾರ್ಗವು ಇದಾಗಿದೆ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
248 views
Matrimonial
248 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
292 views
Match Making
292 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
332 views
Astrology in Marriage
332 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category