0 Shares 124 Views
00:00:00
24 Mar

ಕಾತುರ ಹುಟ್ಟಿಸುವ ಐದು ಹಳೆಯ ವಿವಾಹದ ಪದ್ಧತಿಗಳು!

January 11, 2018
124 Views

ಹೆಚ್ಚಾದ ವಿಚ್ಛೇದನದ ಸಂಖ್ಯೆಗಳೊಂದಿಗೆ, ಪರಸ್ಪರ ಒಬ್ಬರನ್ನೊಬ್ಬರ ಕೈಗಳನ್ನು ಜೀವನದ ಉದ್ದಕ್ಕೂ ಹಿಡಿದುಕೊಂಡು ಸಾಗುವ ಮೂಲಕ ಜೀವಿತಾವಧಿಯಲ್ಲಿ ನೀವು ಪ್ರತಿಜ್ಞೆ ಮಾಡುವಂತಹ ವಿವಾಹದ ಸಮಾರಂಭಗಳನ್ನು ಬಹುದೊಡ್ಡ ಕಾಳಜಿಯೊಂದಿಗೆ ಜನರು ಜವಾಬ್ದಾರಿಯಿಂದ ನಿಭಾಯಿಸುತ್ತಾರೆ. ಇದುವೇ ಅತ್ಯಂತ ಪ್ರಮುಖವಾದ ಕಾರಣವಾಗಿದೆ, ಈ ಕಾರಣವು ನಮ್ಮನ್ನು ಹಳೆಯ ವಿವಾಹ ಪದ್ಧತಿಗಳ ಬಗ್ಗೆ ಮತ್ತೊಮ್ಮೆ ಆಲೋಚಿಸುವಂತೆ ಮತ್ತು ಹಿಂತಿರುಗಿ ನೋಡುವಂತೆ ನಮ್ಮನ್ನು ಬಲವಂತ ಪಡಿಸುತ್ತದೆ. ಹೌದು, ಎರಡು ಆತ್ಮಗಳು ಯಾವಾಗಲೂ ಒಟ್ಟಿಗೆ ಇದ್ದು ಸುಖದಿಂದ ಬಾಳುವಂತೆ ಮಾಡಿದ ಆ ಜೀವಮಾನದ ಮದುವೆಯ ರಹಸ್ಯವೇನಾಗಿತ್ತು? ಪರಸ್ಪರ ಒಬ್ಬರಿಗೊಬ್ಬರು ತಮ್ಮ ಬದ್ಧತೆಗೆ ಅನುಗುಣವಾಗಿ ಇದ್ದರೆ ಅಥವಾ ಬೇರೆ ಯಾವುದೋ ಒಂದು ಸುಂದರವಾದ ಬಂಧದ ಮೋಡಿಯು ಎಂದಿಗೂ ಕೂಡ ಕಡಿಮೆಯಾಗದಂತೆ ಅನ್ಯೋನ್ಯವಾಗಿ ಅವರನ್ನು ಬಂಧಿಸಲು ಸಾಧ್ಯವಾಗಿತ್ತೇ?

ಹಾಗಾದರೆ, ಕೆಲವು ಪ್ರಮುಖವಾದ ಹಳೆಯ ವಿವಾಹದ ಪ್ರವೃತ್ತಿಗಳನ್ನು ನಾವಿಲ್ಲಿ ಚರ್ಚಿಸೋಣ, ಆ ಪದ್ಧತಿಗಳು ಜೋಡಿಗಳ ನಡುವಿನ ವಿವಾಹದ ಬಂಧವನ್ನು ಮುರಿದುಹೋಗದಂತೆ ಕಾಪಾಡಿಕೊಂಡು ಬಂದಿರುತ್ತವೆ:

20ನೇ ವಯಸ್ಸಿನಲ್ಲಿ ಮದುವೆಯಾಗುವುದು-

ಇಲ್ಲ, ನಾನು ಖಂಡಿತವಾಗಿಯೂ ಬಾಲ್ಯ ವಿವಾಹದ ಬಗ್ಗೆ ಮಾತನಾಡುತ್ತಿಲ್ಲ. ಇಪ್ಪತ್ತನೇ ವಯಸ್ಸಿನಲ್ಲಿ ಪರಸ್ಪರ ಪ್ರತಿಜ್ಞೆ ಮಾಡಿ ಬಾಳ್ವೆ ನಡೆಸುವ ಜನರನ್ನು ಕುರಿತು ಮಾತನಾಡುತ್ತಿದ್ದೇನೆ. ವಯಸ್ಸಿಗೂ ಮುಂಚಿನ ಈ ಮದುವೆಯು ಹೇಗೆ ಸಹಾಯಮಾಡುತ್ತದೆ? ಹುಡುಗ ಹುಡುಗಿಯನ್ನು ವಾಸ್ತವದಲ್ಲಿ ಒಬ್ಬರನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ, ಏಕೆಂದರೆ ಅದು ಒಂದು ನಿಗದಿತ ವಯಸ್ಸಿಗಿಂತ ಮುಂಚಿತ ಮದುವೆಯಾಗಿದೆ, ಆ ವಯಸ್ಸಿನಲ್ಲಿ ಹುಡುಗ ಹುಡುಗಿಯು ಆತನ ಅಥವಾ ಆಕೆಯ ಸಂಗಾತಿಯ ಬಗ್ಗೆ ನಿಜವಾಗಿಯೂ ಆಲೋಚಿಸಲು ಪ್ರಾರಂಭಿಸಿರುತ್ತಾರೆ. ಹಾಗೂ ವ್ಯಕ್ತಿಯು ಈಗಾಗಲೇ ಸಂಗಾತಿಯನ್ನು ಪಡೆದುಕೊಂಡಿದ್ದಾಗ, ತಮ್ಮ ವೈವಾಹಿಕ ಸ್ಥಿತಿಗತಿಯು ಪರಮಾನಂದದ ಹಂತಯನ್ನು ತಂದುಕೊಟ್ಟಿರುವ ಪ್ರಕಾರ, ವ್ಯಕ್ತಿಯು ಈಗಾಗಲೇ ತನ್ನ ಸಂಗಾತಿಯನ್ನು ಪಡೆದುಕೊಂಡಿದ್ದಾಗ, ಆತ ಅಥವಾ ಆಕೆ ತಮ್ಮ ಜೀವನವನ್ನು ರೂಪಿಸಿಕೊಳ್ಳುವ ರೂಪುರೇಶೆಯನ್ನು ಪಡೆಯಲು ಪ್ರಾರಂಭಿಸುತ್ತಾರೆ.

ನಿಮ್ಮ ಸಂಗಾತಿಯನ್ನೇ ನಿಮ್ಮ ಆದ್ಯತೆಯನ್ನಾಗಿ ಮಾಡಿಕೊಳ್ಳುವುದು –

ಆದ್ಯತೆ, ಅಂದರೆ ಪ್ರಾಶಸ್ತ್ಯವೆಂಬುದು ಇಂದಿನ ಮದುವೆಗಳಲ್ಲಿ ಕೊರತೆಯಿರುವಂತಹ ಪದವಾಗಿದೆ ಮತ್ತು ಹಿಂದಿನ ಸಂಬಂಧಗಳಲ್ಲಿ ಅದು ಅತ್ಯುನ್ನತ ಮಹತ್ವದ್ದಾಗಿದೆ. ಆ ದಿನಗಳಲ್ಲಿ ಶಿಕ್ಷಣ, ವೃತ್ತಿ, ಮತ್ತು ಮಕ್ಕಳು ಎಲ್ಲವಕ್ಕೂ ಸಮಾನವಾಗಿ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು, ಆದರೆ ಸಂಗಾತಿಯು ಮಾತ್ರ ಯಾವಾಗಲೂ ತುತ್ತತುದಿಯ ಪ್ರಾಧಾನ್ಯತೆಯಾಗಿದ್ದಳು, ಇದರಿಂದಾಗಿ ಅಂದಿನ ವಿವಾಹ-ಬಂಧವು ಗಟ್ಟಿಯಾಗಿ ಉಳಿದಿತ್ತು.

ಕ್ಷಮಿಸಿ ಮತ್ತು ಮರೆತುಬಿಡಿ –

ಒಬ್ಬ ವ್ಯಕ್ತಿಯ ವೈವಾಹಿಕ ಸಂಬಂಧದಲ್ಲಿ ಕ್ಷಮಿಸುವ ಮತ್ತು ಮರೆಯುವ ಅಭ್ಯಾಸವು ಅವರ ಆ ಬಂಧವು ಹಾಗೇ ಉಳಿಯಲು ಒಂದು ಮೈಲಿಗಲ್ಲಾಗಿ ಕಾರ್ಯನಿರ್ವಹಿಸುವುದನ್ನು ಸಾಬೀತುಪಡಿಸಬಹುದು. ಯಾವ ಜೋಡಿ ತಾನೇ ಜಗಳವಾಡುವುದಿಲ್ಲ? ಆ ಜಗಳವೆಂಬುದು ದೊಡ್ಡದಾಗಿರಬಹುದು ಅಥವಾ ಸಣ್ಣದಿರಬಹುದು, ಆದರೆ ಅದು ಕೆಲವು ಹಂತಗಳಲ್ಲಿ ನಿಸ್ಸಂಶಯವಾಗಿ ನಡೆದುಬಿಡುತ್ತದೆ. ಹಾಗಾದರೆ ಅದು ನಿಮ್ಮ ಅಹಂಕಾರಕ್ಕೆ ಕಾರಣವಾಗುವುದೆಂದು ಮತ್ತು ನಿಮ್ಮ ಸಂಬಂಧಕ್ಕೆ ಶಾಶ್ವತವಾಗಿ ವಿದಾಯ ಹೇಳುವುದೆಂದು ಅರ್ಥವೇನು? ಖಂಡಿತ ಇಲ್ಲ, ಅದು ಅಪರೂಪವಾಗಿ ನಮ್ಮ ಪೋಷಕರು ಮತ್ತು ತಾತಮುತ್ತಾತಂದಿರ ಮದುವೆಗಳಲ್ಲಿ ಅಪರೂಪವಾಗಿ ನಡೆದಿತ್ತು. ಏಕೆಂದರೆ ತಾಳ್ಮೆಯಿಂದ ವಿಚಾರಗಳನ್ನು ಮತ್ತಷ್ಟು ಉತ್ತಮವಾಗಿ ಪರಿಹರಿಸಬಹುದೆಂದು ಅವರು ಚೆನ್ನಾಗಿ ತಿಳಿದಿದ್ದರು.

ಶೀಘ್ರದಲ್ಲೇ ಆಗುವ ಬದಲಾವಣೆಯನ್ನು ಆಲಂಗಿಸುವುದು-

ಒಬ್ಬ ವ್ಯಕ್ತಿಯು ತನ್ನ 35ನೇ ವಯಸ್ಸಿನಲ್ಲಿ ಮದುವೆಯಾದರೆ; ತನ್ನನ್ನು ತಾನು ಸಂಗಾತಿಯೊಂದಿಗೆ, ವೈವಾಹಿಕ ಬದುಕಿನ ಬದಲಾವಣೆಗಳನ್ನು ಒಪ್ಪಿಕೊಂಡು ಆಲಂಗಿಸುವುದು ಆಕೆಗಾಗಲೀ ಅಥವಾ ಆತನಿಗಾಗಲಿ ಸುಲಭದ ಮಾತಲ್ಲ. ಹಾಗಿರುವಾಗ ಒಬ್ಬ ವ್ಯಕ್ತಿಯಾಗಿ ಇಪ್ಪತ್ತನೇ ವಯಸ್ಸಿನಲ್ಲೇ ಮದುವೆಯಾಗುವುದೆಂದ ಅದು ನಿಜಕ್ಕೂ ಸುಲಭವೇನು? ಇಂದಿನ ಪೀಳಿಗೆಯು ಜೀವನದಲ್ಲಿ ಬದಲಾವಣೆಗಳನ್ನು ಸ್ವೀಕರಿಸುವುದನ್ನು ಕಲಿಯಬೇಕು ಹಾಗೂ ಅವರ ವೈವಾಹಿಕ ಜೀವನದ ಆನಂದವನ್ನು ಆದಷ್ಟು ಬೇಗ ಅಪ್ಪಿಕೊಳ್ಳಬೇಕು ಏಕೆಂದರೆ ಇದುವೇ ವೈವಾಹಿಕ ಬದುಕು ಆನಂದಮಯವಾಗಿರಬೇಕೆಂದರೆ ಅದುವೇ ಮೊದಲನೇ ಹೆಜ್ಜೆಯಾಗಿದೆ.

ಹೃದಯದಿಂದ ಹಂಚಿಕೊಳ್ಳುವುದು ಮತ್ತು ಕಾಳಜಿ ಮಾಡುವುದು-

ಇಂದಿನ ದಿನಗಳಲ್ಲಿ, ಕೇವಲ ಸಂಬಂಧದ ದೃಷ್ಟಿಯಿಂದ ಪರಸ್ಪರರ ಸಂತೋಷ ಮತ್ತು ದುಃಖಗಳನ್ನು ಜನರು ಹಂಚಿಕೊಳ್ಳುವುದಿಲ್ಲ ಮತ್ತು ಕಾಳಜಿ ತೋರುವುದಿಲ್ಲ, ಆದರೆ ಅವರು ನಿಜವಾಗಿಯೂ ಪರಸ್ಪರ ಅನ್ಯೋನ್ಯರಾಗುತ್ತಾರೆ. ಆದ್ದರಿಂದ, ಆ ನಿಕಟತೆಯನ್ನು ಹೇಗೆ ತರುವುದು? ಅದು ಶಾಶ್ವತ ಪ್ರೀತಿ ಮತ್ತು ಇನ್ನೊಬ್ಬ ವ್ಯಕ್ತಿಗಾಗಿ ಏನು ಬೇಕಾದರೂ ಮಾಡುವೆನೆಂಬ ಅಂತರಂಗದ ಬಯಕೆಗಳೊಂದಿಗೆ ಬರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಿಮ್ಮ ಹೃದಯದ ಕೇಂದ್ರಭಾಗದಿಂದ ಮತ್ತೊಬ್ಬ ವ್ಯಕ್ತಿಯನ್ನು ಸ್ವೀಕರಿಸಿ.

ವಿಶೇಷವಾಗಿ ಹಳೆಯ ಸಂಪ್ರದಾಯಗಳಲ್ಲಿ ನಂಬಿಕೆ ಇರುವವರಿಗಾಗಿ ಈ ಮದುವೆಯ ಪ್ರವೃತ್ತಿಗಳು ಇಂದು ತತ್ತರಿಸುವಂತೆ ಮಾಡುತ್ತವೆ. ಅವರ ಆ ವೈವಾಹಿಕ ಬಂಧವು ಜೀವಿತಾವಧಿಯ ಉದ್ದಕ್ಕೂ ಅಷ್ಟೊಂದು ಆನಂದದಿಂದ ಹೇಗೆ ಉಳಿಯಲು ಸಾಧ್ಯವಾಗುತ್ತದೆ ಎಂಬುದನ್ನು ನಿಜವಾಗಿಯೂ ನೋಡಬಹುದಾಗಿದೆ. ಆದ್ದರಿಂದ, ಮುಂದುವರಿಯಿರಿ ಮತ್ತು ಕೇವಲ ಪದಗಳನ್ನು ಓದಬೇಡಿ, ಆದರೆ ನಿಮ್ಮ ಸಂಬಂಧವನ್ನು ಬಲಪಡಿಸುವಲ್ಲಿ ಮೇಲಿನ ಪ್ರಮುಖಾಂಶಗಳು ನಿಮಗೆ ಸಹಾಯ ಮಾಡಬಲ್ಲವು. ಹಾಗಾಗಿ ಈ ಮೇಲಿನ ಅಂಶಗಳ ಮೂಲಕ ವ್ಯಕ್ತಪಡಿಸಿದ ಭಾವನೆಗಳನ್ನು ಅನುಭವಿಸಿ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
206 views
Matrimonial
206 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
234 views
Match Making
234 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
240 views
Astrology in Marriage
240 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category