0 Shares 374 Views
00:00:00
18 Jan

ಸರಳವಾಸ್ತುವಿನ ರಚನಾತ್ಮಕ ವಿಜ್ಞಾನವನ್ನು ಬಳಸಿಕೊಂಡು ನಿಮ್ಮ ಆತ್ಮ ಸಂಗಾತಿಯನ್ನು ಹುಡುಕಿಕೊಳ್ಳಿ

March 30, 2018
374 Views

ವಿವಾಹವು ಒಂದು ಜೀವಮಾನದ ಗತಿಯ ಅಭೂತಪೂರ್ವ ಕ್ಷಣವಾಗಿದೆ. ಪ್ರತಿಯೊಬ್ಬರೂ ಸಮೃದ್ಧವಾದ ವೈವಾಹಿಕ ಜೀವನವನ್ನು ಎದುರು ನೋಡುತ್ತಾರೆ. ಸರಳವಾಸ್ತುವು ನಿಮಗೆ ಉಪಯುಕ್ತವಾದ ಮತ್ತು ಸುಲಭವಾದ ವೈಜ್ಞಾನಿಕ ಪರಿಹಾರೋಪಾಯಗಳನ್ನು ಒದಗಿಸುತ್ತದೆ. ವಾಸ್ತುವಿನ ಪ್ರಕಾರ, ಧನಾತ್ಮಕ ಶಕ್ತಿಯ ಒಳಹರಿವನ್ನು ಆಕರ್ಷಿಸುವ ರೀತಿಯಲ್ಲಿ ಇರುವಂತೆ, ಪವಿತ್ರವಾದ ವಿವಾಹಕ್ಕಾಗಿ ನಿಮ್ಮ ಮನೆಯ ವಿನ್ಯಾಸವನ್ನು ನಿರ್ಮಿಸಬೇಕು. ಅದು ನಿಮ್ಮ ಕುಟುಂಬದ ಪೋಷಕನ ಹುಟ್ಟಿದ ದಿನಾಂಕದ ಮೇಲೆ ಆಧಾರಿತವಾಗಿರುತ್ತದೆ. ಇದು ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯು ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ ಮತ್ತು ಋಣಾತ್ಮಕ ಶಕ್ತಿಯನ್ನು ಕನಿಷ್ಠಗೊಳಿಸುತ್ತದೆ. ನಿಮ್ಮ ಅನುಕೂಲಕರವಾದ ದಿಕ್ಕನ್ನು ತಿಳಿದುಕೊಳ್ಳಲು ನಮ್ಮ ಕಡೆಯ ಸರಳವಾಸ್ತು ತಜ್ಞರು ನಿಮಗೆ ಸಹಾಯ ಮಾಡುತ್ತಾರೆ. ಹಾಗೂ ಸರಳ ವಾಸ್ತುವಿನ ನಿಯಮಗಳಿಗೆ ಅನುಗುಣವಾಗಿ ನಿಮ್ಮ ಮನೆಯ ರಚನಾವಿನ್ಯಾಸವನ್ನು ಮಾಡಿಕೊಡುತ್ತಾರೆ. ಹೀಗೆ ಸರಳವಾಸ್ತುವು ನಿಮಗೆ ಸರಿಯಾದ ವೈವಾಹಿಕ ಜೋಡಿಯನ್ನು ಕಂಡುಕೊಳ್ಳುವಲ್ಲಿ ನಿಮಗೆ ಸಹಾಯ ಮಾಡುತ್ತದೆ.

ವಿವಾಹಕ್ಕಾಗಿ ವಾಸ್ತುವಿನ ಮಹತ್ವ

ಪ್ರತಿಯೊಬ್ಬರ ಜೀವನದಲ್ಲೂ ವಿವಾಹದ ವಿಚಾರದಲ್ಲಿ ಸಂಬಂಧ ಬೆಸೆಯುವಲ್ಲಿ ವಾಸ್ತುವು ಅತ್ಯಗತ್ಯವಾಗಿದೆ. ವಾಸ್ತು ಎಂಬುದು ಪ್ರತಿಯೊಂದು ಮನೆಯಲ್ಲೂ ಸಂತೋಷ ಮತ್ತು ಆರೋಗ್ಯಕರ ಸಂಬಂಧವು ಸ್ಥಿರಗೊಳ್ಳಬೇಕೆಂಬ ಉದ್ದೇಶದಿಂದ ಅನುಸರಿಸಬೇಕಾದ ನಮ್ಮ ಭಾರತೀಯ ಪ್ರಾಚೀನ ಪರಿಹಾರವಾಗಿದೆ. ನಿಮ್ಮ ಕೋಣೆಯ ರಚನಾವಿನ್ಯಾಸವನ್ನು ಪರಿಶೀಲಿಸಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಅದನ್ನೂ ಕೂಡ ವಾಸ್ತು ತತ್ವಗಳ ಪ್ರಕಾರ ವಿನ್ಯಾಸ ಮಾಡಬೇಕು. ವಾಸ್ತು ತತ್ವಗಳ ಪ್ರಕಾರ, ಅರ್ಹ ವಧು ಅಥವಾ ವರರ ಆವಾಸಸ್ಥಾನವನ್ನು ಸ್ಥಾಪಿಸಲಾಗಿದ್ದರೆ, ಅದು ಅನೇಕ ಮದುವೆಯ ಪ್ರಸ್ತಾಪಗಳನ್ನು ಆಕರ್ಷಿಸುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಮನೆಯಲ್ಲಿ ಆ ವ್ಯಕ್ತಿಗೆ ಸಾಕಷ್ಟು ಸ್ಥಳಾವಕಾಶವಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಪ್ರತಿಯೊಂದು ಮನೆಗೂ ಅದರದೇ ಆದ ‘ಸಂಬಂಧಸ್ಥಾನ’ ಅಥವಾ ‘ವಿವಾಹ ಸ್ಥಾನ’ ಅಥವಾ ‘ಸಂಬಂಧ ಸ್ಥಳ’ವು ಇರುತ್ತದೆ. ಆ ಸ್ಥಳವು ಚೆನ್ನಾಗಿ ಸುರಕ್ಷಿತವಾಗಿರಬೇಕು.

ಸಂಬಂಧದ ಸ್ಥಳವು ಶೌಚಾಲಯ ಅಥವಾ ಸ್ನಾನಗೃಹದಂತಹ ಮತ್ತು ಉಪಯುಕ್ತತೆಗಳಿಂದ ಪ್ರಭಾವಿತವಾಗಿದ್ದರೆ, ಆಗ ಅದು ಋಣಾತ್ಮಕತೆಯಿಂದ ಕೂಡಿದ ಶಕ್ತಿಯ ಹರಿವನ್ನು ಆಕರ್ಷಿಸುತ್ತದೆ. ಸ್ವಯಂಚಾಲಿತವಾಗಿ, ಮದುವೆಯ ಒಕ್ಕೂಟವನ್ನು ಸರಿಪಡಿಸುವಲ್ಲಿ ಸಮಸ್ಯೆಗಳು ಎದುರಾಗುವ ಸಂಭವವಿದೆ. ಇದಲ್ಲದೇ, ನಿಮ್ಮ ಸಂಬಂಧಸ್ಥಾನದ ರಚನೆಯಲ್ಲಿ ಬಿರುಕು ಉಂಟಾದಾಗ, ಆಗ ಅದು ಮದುವೆಯಲ್ಲಿ ಬಿಕ್ಕಟ್ಟಿನ ಒಂದು ಸಂಕೇತವಾಗಿದೆ. ನಿಮ್ಮ ಮನೆಯ ಸಂಬಂಧ ಸ್ಥಳವನ್ನು ನೀವು ಜಾಗರೂಕರಾಗಿ ಇರಿಸಬೇಕಾಗುತ್ತದೆ. ಒಂದುವೇಳೆ ನಿಮ್ಮ ಸಂಬಂಧಸ್ಥಾನದಲ್ಲಿ ಯಾವುದೇ ಸುಣ್ಣ, ಅಸ್ತವ್ಯಸ್ತತೆ ಮತ್ತು ತ್ಯಾಜ್ಯದ ಪದಾರ್ಥಗಳನ್ನು ಇರಿಸಬಾರದು ಏಕೆಂದರೆ, ಅದು ನಿಮ್ಮ ಸಂಬಂಧಗಳ ಮಾರ್ಗದಲ್ಲಿ ಅನಗತ್ಯವಾದ ಅಡೆತಡೆಗಳನ್ನು ಸೂಚಿಸುತ್ತದೆ. ಇದರಿಂದ ನಿಮ್ಮ ಶಿಕ್ಷಣ ಮತ್ತು ನೋಟದ ಮೇಲೆ ಯಾವುದೇ ಉಪಯೋಗವಾಗುವುದಿಲ್ಲ, ಒಂದುವೇಳೆ ನಿಮ್ಮ ಸಂಬಂಧ ಸ್ಥಾನವು ಸ್ಪಷ್ಟವಾಗಿಲ್ಲದಿದ್ದರೆ, ಖಂಡಿತವಾಗಿ ಇದು ನಿಮ್ಮ ಮದುವೆಗೆ ಅಡ್ಡಿಯಾಗಿರುತ್ತದೆ.

ಅಂತಿಮ ಪದ

ಮದುವೆ ಎಂಬುದು ಎಲ್ಲರ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ, ಅದು ನಿಮ್ಮ ಜೀವನಕ್ಕೆ ಒಂದು ಹೊಸ ಆರಂಭವನ್ನು ನೀಡುತ್ತದೆ ಹಾಗೂ ಪ್ರೀತಿ ಮತ್ತು ಬೆಂಬಲದ ರೂಪದಲ್ಲಿ ಸಾಧನೆಗಳನ್ನು ನೀಡುತ್ತದೆ. ನಮ್ಮ ಪ್ರಾಚೀನ ವೇದ ವಿಜ್ಞಾನವು ಮದುವೆಯನ್ನು ಒಂದು ಧಾರ್ಮಿಕ ಸಂಬಂಧವೆಂದು ವ್ಯಾಖ್ಯಾನಿಸಿರುತ್ತದೆ. ಆದಾಗ್ಯೂ, ವಿಳಂಬದ ವಿವಾಹದ ಕಾರಣದಿಂದಾಗಿ, ಸರಿಯಾದ ಸಂಗಾತಿಯನ್ನು ಆಯ್ಕೆಮಾಡುವ ಪ್ರಕ್ರಿಯೆಯು ಅನೇಕರಿಗೆ ಕಷ್ಟಕರವಾದ ಮತ್ತು ಕೆಲವರಿಗೆ ಆತಂಕವನ್ನು ಉಂಟುಮಾಡುವ ಹಂತವಾಗಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ಮದುವೆಗಾಗಿ ವಾಸ್ತ ಪ್ರಕಾರ, ನಿಮ್ಮ ಜೀವನದಲ್ಲಿ ವಾಸ್ತುವನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಹಾಗೂ ನಿಮ್ಮ ಜೀವನದಲ್ಲಿ ಪ್ರೀತಿ, ಸಂತೋಷ ಮತ್ತು ಸಮೃದ್ಧಿಯನ್ನು ತಂದುಕೊಡುವಲ್ಲಿ ವಾಸ್ತು ತತ್ವಗಳು ಅದ್ಭುತ ಚಮತ್ಕಾರಗಳನ್ನ ಸೃಷ್ಟಿಸಬಲ್ಲವು.

ನಿಮ್ಮ ಜೀವನದಲ್ಲಿ ಸರಳ ವಾಸ್ತುವಿನ ತತ್ವಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ನಿಮ್ಮ ಸಂಬಂಧವನ್ನು ಮತ್ತಷ್ಟು ಹೆಚ್ಚು ಆಹ್ಲಾದಕರ ಮತ್ತು ಫಲಪ್ರದವಾಗುವಂತೆ ಮಾಡಿಕೊಳ್ಳಬಲ್ಲಿರಿ. ಮದುವೆಗಾಗಿ, ಶಕ್ತಿಯ ಮತ್ತು ಕಂಪನಗಳ ಹರಿವಿನ ಮೇಲೆ ಧನಾತ್ಮಕ ಪ್ರಭಾವ ಬೀರಬೇಕೆಂಬ ಉದ್ದೇಶಕ್ಕಾಗಿ ಸರಳ ವಾಸ್ತು ತತ್ವಗಳನ್ನು ಬಳಸಿರಿ ಹಾಗೂ ಆ ಮೂಲಕ ಆರೋಗ್ಯಕರವಾದ ಮತ್ತು ದೀರ್ಘಕಾಲದ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ಇದು ಅತ್ಯಗತ್ಯ. ನಿಮ್ಮ ಸುಧಾರಣೆಗಾಗಿ ಇಂದು ಸರಳ ವಾಸ್ತುವಿನ ತತ್ವಗಳನ್ನು ಅಳವಡಿಸಿಕೊಳ್ಳಿ ಮತ್ತು ಸಂತೋಷದಿಂದ ಕೂಡಿದ ವೈವಾಹಿಕ ಜೀವನವನ್ನು ಪಡೆದು ಪ್ರಗತಿಯ ಪಥದಲ್ಲಿ ನಡೆಯಿರಿ!

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
352 views
Matrimonial
352 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
408 views
Match Making
408 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
585 views
Astrology in Marriage
585 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category