0 Shares 147 Views
00:00:00
24 Mar

ನಿರ್ದೇಶನ ವಿಜ್ಞಾನದ ಸಹಾಯದಿಂದ ನಿಮಗೆ ಸರಿಯಾದ ವೈವಾಹಿಕ ಸಂಗಾತಿಯನ್ನು ಕಂಡುಕೊಳ್ಳಿ.

March 27, 2018
147 Views

ಮದುವೆಯು ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ; ಇದು ಬಹಳಷ್ಟು ಆಚರಣೆಗಳು, ಸಂಪ್ರದಾಯಗಳು ಮತ್ತು ಧಾರ್ಮಿಕ ರೂಢಿಗಳನ್ನು ಒಳಗೊಂಡಿದೆ. ವ್ಯಕ್ತಿಯ ಜೀವನದ ಗತಿಯನ್ನು ವಿಭಿನ್ನವಾದ ಗತಿಗೆ ಕರೆದೊಯ್ದು, ಬದಲಾಯಿಸುವ ಒಂದು ಹಂತವೇ ವಿವಾಹವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ತಮ್ಮ ಬಾಕಿವುಳಿದ ಜೀವನವನ್ನು ಒಬ್ಬ ವಿಶೇಷ ಸಂಗಾತಿಯೊಂದಿಗೆ ಕಳೆಯಲು ಬಯಸುತ್ತಾರೆ, ಅದಕ್ಕಾಗಿ ಅಂಥ ಅನನ್ಯ ಬಾಳ ಸಖಿಯನ್ನು/ಸಖನನ್ನು ಕಂಡುಕೊಳ್ಳುವುದು ಎಲ್ಲರಿಗೂ ಒಂದು ಕುತೂಹಲಕಾರಿಯಾದ ಮತ್ತು ಕಳವಳದ ಪ್ರಮುಖ ವಿಚಾರವಾಗಿರುತ್ತದೆ. ವಾಸ್ತವದಲ್ಲಿ, ತಮ್ಮ ಮಗುವಿಗೆ ಒಬ್ಬ ಪರಿಪೂರ್ಣ ಸಂಗಾತಿಯನ್ನು ಹುಡುಕುವುದೆಂದರೆ ಪೋಷಕ ವರ್ಗದವರಿಗೆ ಅದೊಂದು ಅತೀ ದೊಡ್ಡ ಜವಾಬ್ದಾರಿಯಾಗಿದೆ. ಅದೂ ಅಲ್ಲದೇ, ಕೆಲವರಂತೂ ತಮ್ಮ ವಿವಾಹಯೋಗ್ಯ ವಯಸ್ಸಿನಲ್ಲಿ ಸರಿಯಾದ ಸಂಗಾತಿಯನ್ನು ಪಡೆಯುವುದು ಕಷ್ಟಕರವೆಂದು ಭಾವಿಸುತ್ತಾರೆ.

ಭಾರತದಂತಹ ಒಂದು ಬಹುದೊಡ್ಡ ಧಾರ್ಮಿಕ ಸಂಪತ್ತಿನ ದೇಶದಲ್ಲಿ ನಾವು ನಮ್ಮ ಆಚರಣೆಗಳನ್ನು ಮತ್ತು ರೂಢಿ-ಸಂಪ್ರದಾಯಗಳನ್ನು ಬಹುಶ್ರದ್ಧಾ ಭಕ್ತಿಯಿಂದ ಅನುಸರಿಸುತ್ತಿದ್ದರೂ, ನಮ್ಮ ಜೀವನದಲ್ಲಿ ನಾವು ವಾಸ್ತುವಿನ ವಿಶೇಷ ಸೌಲಭ್ಯಗಳನ್ನು ಗಣನೆಗೆ ತೆಗೆದುಕೊಳ್ಳಲು ಮರೆಯುತ್ತೇವೆ. ದಿಕ್ಕುಗಳ ವಿಜ್ಞಾನದಲ್ಲಿ ವಾಸ್ತುವು ಒಂದು ಪ್ರಧಾನಪಾತ್ರವನ್ನು ವಹಿಸುತ್ತದೆ ಹಾಗೂ ಅದು ನಿಮಗೆ ಆರೋಗ್ಯಕರವಾದ ಒಂದು ಉಲ್ಲಾಸದಾಯಕ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ದಿಕ್ಕುಗಳು ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಪ್ರಭಾವ ಬೀರುತ್ತವೆ. ಒಟ್ಟು ಎಂಟು ದಿಕ್ಕುಗಳಿವೆ ಅದರಲ್ಲಿ ನಾಲ್ಕು ಹಿತಕರ/ಅನುಕೂಲಕರವಾದ ದಿಕ್ಕುಗಳಾಗಿದ್ದು, ಉಳಿದ ನಾಲ್ಕು ದಿಕ್ಕುಗಳು ಅನನುಕೂಲಕರವಾದ/ಅಹಿತಕರ ದಿಕ್ಕುಗಳಾಗಿವೆ. ವ್ಯಕ್ತಿಯೊಬ್ಬನ ಜೀವನದ ಮೇಲೆ ಕೇವಲ ಹಿತಕರವಾದ/ಅನುಕೂಲಕರ ದಿಕ್ಕುಗಳು ಮಾತ್ರ ಒಂದು ಉತ್ತಮ ಪ್ರಭಾವವನ್ನು ಬೀರಬಲ್ಲವು.

ಮದುವೆಗೆ ದಿಕ್ಕುಗಳ ವಿಜ್ಞಾನ

ಒಂದುವೇಳೆ ನೀವು ಸರಿಯಾದ ವಿವಾಹ ಜೋಡಿಯನ್ನು ಹುಡುಕುತ್ತಿದ್ದಲ್ಲಿ, ನಿಮ್ಮ ಮನೆಯಲ್ಲಿ ನಕಾರಾತ್ಮಕ ಹರಿವನ್ನು ತಪ್ಪಿಸಲು ವಾಸ್ತುವಿನ ಪವಿತ್ರವಾದ ತತ್ವಗಳನ್ನು ನೀವು ಅನುಸರಿಸಬೇಕು. ಮೂಲತಃ, ನಾಲ್ಕು ಉನ್ನತ ದಿಕ್ಕುಗಳು ಇವೆ ಅವುಗಳೆಂದರೆ ಆರೋಗ್ಯದ ದಿಕ್ಕು, ಸಂಪತ್ತಿನ ದಿಕ್ಕು, ವಿವಾಹದ ದಿಕ್ಕು, ಹಾಗೂ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣದ ದಿಕ್ಕು. ಇವುಗಳಲ್ಲಿ ಮದುವೆಯ ದಿಕ್ಕು(ವಿವಾಹದ ಸ್ಥಾನವು) ಒಂದು ಅತೀ ಕಿರಿದಾದ ಅಂತರದಲ್ಲಿ ಇರಬಾರದು ಹಾಗೂ ಆ ದಿಕ್ಕಿನಲ್ಲಿ ಯಾವುದೇ ಶೌಚಾಲಯವಾಗಲೀ ಅಥವಾ ಸ್ನಾನದ ಗೃಹವಾಗಲೀ ಇರಬಾರದು. ಹಾಗಾಗಿ ದಿಕ್ಕುಗಳ ವಿಜ್ಞಾನವೆಂಬುದು ನಿಮ್ಮ ಮನೆ ಮತ್ತು ನಿಮ್ಮ ವೈಯಕ್ತಿಕ ಜೀವನದ ಮೇಲೂ ಸಹ ಧನಾತ್ಮಕವಾದ ಪ್ರಭಾವವನ್ನು ಬೀರುತ್ತದೆ.

ವಿವಾಹದ ನಿರ್ದೇಶನವು ಅನುಕೂಲಕರ ದಿಕ್ಕಿನಲ್ಲಿ ಇಲ್ಲದಿದ್ದರೆ ಅಥವಾ ಇತರ ಭಾರೀ ವಸ್ತುಗಳಿಂದ ಇದು ಪ್ರಭಾವಿತವಾಗಿರುತ್ತದೆ, ನೀವು ಉತ್ತಮ ಮದುವೆಯ ಪ್ರಸ್ತಾಪಗಳನ್ನು ಕಳೆದುಕೊಳ್ಳಬಹುದಾದ ಸಾಧ್ಯತೆಗಳಿವೆ. ಎಲ್ಲಾ ನಿರೀಕ್ಷಿತ ವಧುಗಳು ಮತ್ತು ವರಗಳು, ಈ ದಿಕ್ಕಿನಲ್ಲಿ ಸೂಕ್ತವಾದ ರಚನೆಯನ್ನು ಖಚಿತಪಡಿಸಿಕೊಳ್ಳಿ. ವಿವಾಹದ ದಿಕ್ಕಿನಲ್ಲಿ ಭಾರವಾದ ವಸ್ತುಗಳನ್ನು ಇಡುವುದೂ ಕೂಡ, ಸರಿಯಾದ ವೈವಾಹಿಕ ಜೋಡಿಯನ್ನು ಕಂಡುಕೊಳ್ಳುವಲ್ಲಿ ನಿಮ್ಮ ಪ್ರವೃತ್ತಿಯ ಮೇಲೆ ಪರಿಣಾಮ ಬೀರುತ್ತದೆ. ನೀವು ಬೆಡ್ ರೂಂನಲ್ಲಿ ಮಲಗುವುದನ್ನು ಹಾಗೂ ಅದು ನಿಮ್ಮ ಹಿತಕರವಾದ ದಿಕ್ಕಿನಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ. ಲೋಹದಿಂದ ಮಾಡಿದ ಮಂಚದ ಮೇಲಿನ ಮಲಗುವುದನ್ನು ತಪ್ಪಿಸಿ ಹಾಗೂ ತಾಜಾವಾಗಿರುವ ಸುಗಂಧಭರಿತ ಹೂವುಗಳನ್ನು ಇಟ್ಟು ಅವುಗಳಿಗೆ ಪ್ರತಿ ದಿನ ನೀರನ್ನು ಚಿಮುಕಿಸುವುದನ್ನು ಖಚಿತಪಡಿಸಿಕೊಳ್ಳಿ. ಮನೆಯೊಳಗೆ ಮುಳ್ಳಿನ ಗಿಡಗಳನ್ನು ಇರಿಸುವುದನ್ನು ತಪ್ಪಿಸಿ, ಅವುಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇರಿಸದಂತಹ ಎಚ್ಚರವಹಿಸಿ. ಏಕೆಂದರೆ ಇದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನ ಸೆಳೆಯುತ್ತದೆ.

ವಿವಾಹ ಎಂಬುದು ಒಂದು ಧಾರ್ಮಿಕ ಸಂಬಂಧವಾಗಿದೆ; ನಿಮ್ಮ ವೈವಾಹಿಕ ಜೋಡಿಯ ವಿಚಾರಕ್ಕೆ ಬಂದಾಗ ನೀವು ಜಾಗರೂಕರಾಗಿರಬೇಕಾದ ಅಗತ್ಯವಿದೆ. ಸರಳವಾಸ್ತುವು ನಿಮಗೆ ಸರಳವಾದ, ವಿಶಿಷ್ಟವಾದ ಮತ್ತು ಉಪಯುಕ್ತವಾದ ವೈಜ್ಞಾನಿಕ ವಾಸ್ತು ಪರಿಹಾರೋಪಾಯಗಳನ್ನು ಶಿಫಾರಸು ಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಅಹಿತಕರ ಮತ್ತು ಹಿತಕರವಾದ ದಿಕ್ಕುಗಳಿರುತ್ತವೆ, ನಮ್ಮ ಸರಳವಾಸ್ತುವಿನ ತಜ್ಞರು ಋಣಾತ್ಮಕತೆಯನ್ನು ತಪ್ಪಿಸಲೆಂದು ನಿಮ್ಮ ಹಿತಕರವಾದ ದಿಕ್ಕನ್ನು ತಿಳಿಸಿಕೊಡುವಲ್ಲಿ ನಿಮಗೆ ಸಹಾಯ ಮಾಡುತ್ತಾರೆ ಹಾಗೂ ನಿಮ್ಮ ಮನೆಯಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ನೀವು ಎದುರಿಸುತ್ತಿರುವ ಅಡಚಣೆಗಳನ್ನು ಮನವರಿಕೆ ಮಾಡಿಕೊಡುವಲ್ಲಿ ನೆರವಾಗುತ್ತಾರೆ.

ಸರಳ ವಾಸ್ತುವು ನಿಮ್ಮ “ವಿವಾಹಸ್ಥಾನ”ವನ್ನು ಒಂದು ಅನುಕೂಲಕರವಾದ ದಿಕ್ಕಿನಲ್ಲಿ ಇರಿಸಲು ನಿಮಗೆ ಸಹಾಯ ಮಾಡುತ್ತದೆ ಹಾಗೂ ಅದು ಒಳ್ಳೆಯ ಮದುವೆಯ ಪ್ರಸ್ತಾಪಗಳನ್ನು ಪಡೆಯಲು ನಿಮಗೆ ಅನುವುಮಾಡಿಕೊಡುತ್ತದೆ. ಸರಳ ವಾಸ್ತುವಿನ ಪರಿಶುದ್ಧ ತತ್ವಗಳ ಸಹಾಯದಿಂದ, ನೀವು ಒಬ್ಬ ಸರಿಯಾದ ಮದುವೆ ಜೋಡಿಯನ್ನು ಕಂಡುಕೊಳ್ಳಬಹುದು ಹಾಗೂ ಮುಂದೆ ಸಂತೋಷಮಯವಾದ ವೈವಾಹಿಕ ಜೀವನವನ್ನು ನಡೆಸಬಹುದು.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
206 views
Matrimonial
206 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
234 views
Match Making
234 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
240 views
Astrology in Marriage
240 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category