0 Shares 244 Views
00:00:00
27 Jun

ಎನರ್ಜಿ ಸೈನ್ಸ್ ಅಥವಾ ಶಕ್ತಿ ವಿಜ್ಞಾನದ ಸಹಾಯದಿಂದ ನಿಮ್ಮ ವಿವಾಹ ಜೋಡಿಯನ್ನು ಕಂಡುಕೊಳ್ಳಿ

March 27, 2018
244 Views

ವಿವಾಹ ಅಥವಾ ಮದುವೆ ಎಂಬುದು ಒಬ್ಬ ವ್ಯಕ್ತಿಯ ಜೀವನದಲ್ಲಿ ಒಂದು ಮಹತ್ವದ ಭಾಗವಾಗಿದೆ. ಅದು ಒಬ್ಬ ವ್ಯಕ್ತಿಯು ಆತನ ಅಥವಾ ಆಕೆಯ ಆತ್ಮಸಂಗಾತಿಯನ್ನು ಸಂಧಿಸಿದಾಗ, ಮತ್ತು ಜೀವಿತಾವಧಿಯ ಬದ್ಧತೆಯನ್ನು ಕಂಡುಕೊಂಡಾಗ ಆ ಒಂದು ಮಹತ್ವದ ಘಟ್ಟಕ್ಕೆ ಒಂದು ಅರ್ಥಸಿಗುತ್ತದೆ. ಮದುವೆ ಎಂಬ ಬಂಧದ ಮೂಲಕ ಎರಡು ಜೀವಗಳನ್ನು ಬೆಸೆಯುವ ಈ ಒಂದು ಪವಿತ್ರ ಸಂಬಂಧವು ಜೀವನದುದ್ದಕ್ಕೂ ಹುಡುಗ-ಹುಡುಗಿ ಇಬ್ಬರನ್ನೂ ಹಂತಹಂತವಾಗಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಕೈಹಿಡಿದು ನಡೆಯುವಂತೆ ಮಾಡಿ ಪ್ರೀತಿಯೆಂಬ ಮೊಗ್ಗು ಹೂವಾಗಿ ಅರಳುವಂತೆ ಮಾಡಿ, ದಿನದಿಂದ ದಿನಕ್ಕೆ ಪ್ರೀತಿಯ ಚಿಲುಮೆಯನ್ನು ಹೊಮ್ಮಿಸುತ್ತದೆ. ಆದಾಗ್ಯೂ, ತಮಗೆ ಸರಿಯಾದ ವೈವಾಹಿಕ ಜೋಡಿಯನ್ನು ಕಂಡುಕೊಳ್ಳುವಲ್ಲಿ, ಕೆಲವು ಜನರು ತಮ್ಮ ಬಾಳಲ್ಲಿ ಹಲವು ಅಡೆತಡೆಗಳನ್ನು ಕಾಣುತ್ತಾರೆ.

ನಿಮ್ಮ ಜೀವನದಲ್ಲಿ ಎಲ್ಲವೂ ಸರಿಯಾದ ರೀತಿಯಲ್ಲಿ ಸಾಗುತ್ತಿದ್ದಾಗ ನಿಮಗೆ ಜೀವನ ಎಷ್ಟೊಂದು ಮಧುರ ಎನಿಸುತ್ತದೆ. ಆದರೆ ನಿಮ್ಮ ಜೀವನ ಸಂಗಾತಿಯನ್ನು ಕಂಡುಕೊಳ್ಳುವಲ್ಲಿ ನೀವು ಒಂದು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ತಮ್ಮ ಜೀವನವನ್ನು ಖುಷಿಯಿಂದ ನಡೆಸಲು ಅಥವಾ ತಮ್ಮ ಆವಾಸಸ್ಥಾನದಲ್ಲಿ ಆನಂದದಿಂದ ಉಳಿಯಲು, ನಮ್ಮ ಪೂರ್ವಜರು ತಮ್ಮ ಜೀವನದಲ್ಲಿ ವಾಸ್ತು ಎಂಬ ಒಂದು ಅತೀಂದ್ರೀಯ ಪರಿಕಲ್ಪನೆಯನ್ನು ಬಳಸಿದರು. ಮನುಷ್ಯರ ಜೀವನದಲ್ಲಿ ವಾಸ್ತು ಎಂಬ ಅಂಶವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮ್ಮ ಜೀವನದಲ್ಲಿ ಮತ್ತು ವಾಸಸ್ಥಳದಲ್ಲಿ ಒಂದು ಸಾಮರಸ್ಯದ ಹೊನಲನ್ನು ಹರಿಸಲು ಅದು ನಿಮಗೆ ಸಹಾಯ ಮಾಡುತ್ತದೆ. ಮನೆಯಲ್ಲಿ, ಬಡಾವಣೆಯಲ್ಲಿ ಮತ್ತು ಪ್ರಾದೇಶಿಕ ಒಳಾಂಗಣದಲ್ಲಿ ಎಲ್ಲರೊಂದಿಗೆ ಸಾಮರಸ್ಯದಿಂದ ಜೀವನ ನಡೆಸಲು ಮನೆಯ ವಿನ್ಯಾಸ ಮತ್ತು ಪ್ರದೇಶದ ಜ್ಯಾಮಿತಿಯು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಆದರ್ಶ ಬಾಳಸಂಗಾತಿಯನ್ನು ಹುಡುಕಿಕೊಳ್ಳುವಲ್ಲಿ, ನಿಮ್ಮ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅದಕ್ಕೆ ನಿಮ್ಮ ಮನೆಯಲ್ಲಿನ ಪ್ರಮುಖ ವಾಸ್ತುವಿನ ದೋಷವೂ ಕಾರಣವಿರುವ ಸಾಧ್ಯತೆಯಿದೆ. ವಾಸ್ತುವನ್ನು ನಿಮ್ಮ ಮನೆಯಲ್ಲಿ ಅಳವಡಿಸಿಕೊಂಡ ನಂತರದಲ್ಲಿ, ನೀವು ಒಂದು ಆದರ್ಶವಾದ ಪರಿಹಾರವನ್ನು ಮತ್ತು ನಿಮಗೆ ಒಬ್ಬ ಸಂಗಾತಿಯನ್ನು ಕಂಡುಕೊಳ್ಳಬಹುದು.

ಶಕ್ತಿ ವಿಜ್ಞಾನ

ವಾಸ್ತುವು ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರಗಳಲ್ಲೂ ನಮಗೆ ಸಹಾಯ ಮಾಡುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಸಾಮರಸ್ಯದ ಮತ್ತು ಧನಾತ್ಮಕ ಪ್ರಭಾವವನ್ನು ಉಂಟುಮಾಡುವುದು ವಾಸ್ತುವಿನ ಗುರಿಯಾಗಿದೆ. ಅದೇನೇ ಇದ್ದರೂ, ಪವಿತ್ರವಾದ ವಾಸ್ತು ತತ್ವಗಳ ಪ್ರಕಾರ, ವಾಸಸ್ಥಾನದ ಕಟ್ಟಡವನ್ನು ನಿರ್ಮಾಣ ಮಾಡದಿದ್ದರೆ, ಆಗ ನಿಮ್ಮ ಆವಾಸಸ್ಥಾನದಲ್ಲಿ ಒಂದು ದೊಡ್ಡ ವಾಸ್ತು ದೋಷವು ತಲೆದೋರುವ ಸಾಧ್ಯತೆ ಇರುತ್ತದೆ. ಎಲ್ಲರ ಜೀವನದಲ್ಲಿಯೂ ಎರಡು ವಿಧದ ಶಕ್ತಿಗಳಿರುತ್ತವೆ, ಅವುಗಳೆಂದರೆ – ಧನಾತ್ಮಕ ಮತ್ತು ಋಣಾತ್ಮಕ, ಅದು ನಿಮ್ಮ ಜೀವನದ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರಬಲ್ಲದು. ಮದುವೆಗೆ ಅನುಕೂಲಕರವಾಗಿರುವ ದಿಕ್ಕನ್ನು ಯಾವುದೇ ವಸ್ತುವಿನಿಂದ ನಿರ್ಬಂಧಿಸಲಾಗಿದ್ದರೆ, ಅದು ನಿಮ್ಮ ಮನೆಯಲ್ಲಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ಒಂದು ನಕಾರಾತ್ಮಕ ಶಕ್ತಿಯ ಹರಿವನ್ನು ಉಂಟುಮಾಡಬಹುದು. ನೀವು ಆಗಿಂದಾಗ್ಗೆ ಮದುವೆಯ ಅನೇಕ ಪ್ರಸ್ತಾಪಗಳನ್ನು ಕಳೆದುಕೊಳ್ಳಬಹುದು ಪರಿಪೂರ್ಣ ಬಾಳ ಸಂಗಾತಿಯನ್ನು ಹುಡುಕಲು ನಿಮಗೆ ಸಾಧ್ಯವಾಗದೇ ಇರಬಹುದು. ಕಟ್ಟಡದ ಅಥವಾ ಮನೆಯ ರಚನೆಯನ್ನು ಸರಿಯಾಗಿ ನಿರ್ಮಿಸದಿದ್ದರೆ, ಅಥವಾ ನಿಮ್ಮ ಮನೆಯಲ್ಲಿ ಶಕ್ತಿಗಳ ನಡುವೆ ಒಂದು ಅಡ್ಡಗೋಡೆಯು ಇದ್ದಲ್ಲಿ, ಈ ಬಗೆಯ ಅಡತಡೆಗಳು ಎದುರಾಗಬಹುದು.

ಸಪ್ತ ಚಕ್ರಗಳು

ಪ್ರತಿಯೊಬ್ಬ ಮನುಷ್ಯನಲ್ಲಿಯೂ ಅವರ ದೇಹದಲ್ಲಿ ಏಳು ಚಕ್ರಗಳು ನೆಲೆಗೊಂಡಿರುತ್ತದೆ ಎಂದು ಹೇಳಲಾಗುತ್ತದೆ. ಅವು ಶರೀರದ ಶಕ್ತಿಯ ಕೇಂದ್ರಗಳಾಗಿವೆ ಮತ್ತು ಅವುಗಳನ್ನು ಪ್ರತಿಯೊಬ್ಬ ಮನುಷ್ಯನ ಪವರ್‌ಹೌಸ್‌ಗಳೆಂದು ಪರಿಗಣಿಸಲಾಗಿದೆ. ಅವುಗಳು ಅಗೋಚರವಾದ ಸೂಕ್ಷ್ಮ ಶಕ್ತಿಯ ಬಿಂದುಗಳಾಗಿದ್ದು, ಶರೀರದ ಆಂತರಿಕ ಶಕ್ತಿಯು ವಿಶ್ವದ ಕಾಸ್ಮಿಕ್ ಶಕ್ತಿಯೊಂದಿಗೆ ಸಮ್ಮಿಲಿತಗೊಂಡಾಗ, ಆ ಶಕ್ತಿಯ ಕೇಂದ್ರಗಳಲ್ಲಿ ಅಭೂತಪೂರ್ವ ಶಕ್ತಿಯು ಸಂಗ್ರಹಣೆಗೊಂಡು, ಸಂಚಲನಗೊಳ್ಳುತ್ತವೆ. ಚಕ್ರಗಳನ್ನು ಶಕ್ತಿಯುತಗೊಳಿಸುವುದರಿಂದ ನಿಮಗೆ ಜೀವನದಲ್ಲಿ ಧನಾತ್ಮಕ ಫಲಿತಾಂಶಗಳು ಮತ್ತು ಶಾಂತಿಯನ್ನು ಪಡೆಯಲು ಸಹಾಯವಾಗುತ್ತದೆ.

ಒಬ್ಬ ವ್ಯಕ್ತಿಯ ವೈವಾಹಿಕ ಸಂಬಂಧವನ್ನು ಅಭಿವೃದ್ಧಿಪಡಿಸುವಲ್ಲಿ, ಶಕ್ತಿಯ ವಿಜ್ಞಾನವು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹಾಗೂ ಆರೋಗ್ಯಕರವಾದ ಮತ್ತು ಸಂತೋಷದ ಸಂಬಂಧವನ್ನು ಕಾಪಾಡಿಕೊಳ್ಳಲು ನಿಮ್ಮ ಜೀವನದ ಮೇಲೆ ಪರಿಣಾಮ ಬೀರಬಹುದು. ಸರಳ ವಾಸ್ತುವು ನಿಮಗೆ ಸರಳವಾದ ಮತ್ತು ಸಹಾಯಕವಾದ ವೈಜ್ಞಾನಿಕ ವಾಸ್ತುವಿನ ಪರಿಹಾರಗಳನ್ನು ಒದಗಿಸುತ್ತದೆ, ಈ ಪರಿಹಾರೋಪಾಯಗಳು ಕುಟುಂಬದ ಪೋಷಕನ ಜನ್ಮದಿನಾಂಕದ ಮೇಲೆ ಆಧಾರಿತವಾಗಿರುತ್ತವೆ. ನಮ್ಮ ವಾಸ್ತುಪರಿಣಿತ ತಜ್ಞರು ಮಾರ್ಗದರ್ಶನ ನೀಡುತ್ತಾರೆ ಮತ್ತು ನಿಮಗೆ ಅನುಕೂಲಕರವಾದ ರೀತಿಯಲ್ಲಿ ನಿರ್ದೇಶನವನ್ನು ನೀಡಲು ಸಹಾಯ ಮಾಡುತ್ತಾರೆ ಹಾಗೂ ನಿಮ್ಮೊಳಗಿನ ಚಕ್ರಗಳನ್ನು ಸಕ್ರಿಯಗೊಳಿಸುವಲ್ಲಿ ಸಹ ನಿಮಗೆ ಸಹಾಯ ಮಾಡುತ್ತಾರೆ. ಸರಳ ವಾಸ್ತುವಿನ ಶಕ್ತಿಯ ವಿಜ್ಞಾನವು ಸಕಾರಾತ್ಮಕ ಶಕ್ತಿಗಳ ತಡೆಗಟ್ಟುವಿಕೆಯನ್ನು ಪ್ರದರ್ಶಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ನಿಮ್ಮ ಜೀವನದಲ್ಲಿ ಶಕ್ತಿಯ ಸಾಮರಸ್ಯದ ಹರಿವನ್ನು ಅನುಮತಿಸುತ್ತದೆ. ನೀವು ವಿಳಂಬಿತ ವಿವಾಹದಲ್ಲಿ ಬಾಳಸಂಗಾತಿಯನ್ನು ಕಂಡುಕೊಳ್ಳುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿದ್ದಲ್ಲಿ, ನಮ್ಮ ಸರಳ ವಾಸ್ತುವಿನ ಪರಿಹಾರಗಳನ್ನು ಆಯ್ಕೆ ಮಾಡಿದ ನಂತರದಲ್ಲಿ, ಒಬ್ಬ ಆದರ್ಶ ಸಂಗಾತಿಯನ್ನು ಹುಡುಕುವಲ್ಲಿ ಎದುರಾಗುವ ಅನೇಕ ಯಶೋಗಾಥೆಗಳನ್ನು ವರದಿ ಮಾಡಲಾಗುತ್ತದೆ. ಅವರೆಲ್ಲರೂ ಆನಂದಮಯವಾದ ಮತ್ತು ಹರ್ಷೋಲ್ಲಾಸದ ವೈವಾಹಿಕ ಜೀವನವನ್ನು ನಡೆಸುತ್ತಲಿದ್ದಾರೆ. ಸರಳ ವಾಸ್ತುವಿನ ಶಕ್ತಿ ವಿಜ್ಞಾನವನ್ನು ಮನೆ ಅಥವಾ ಯಾವುದೇ ಕಟ್ಟಡಗಳ ನಿರ್ಮಾಣದ ಸಮಯದಲ್ಲಿ ಬಳಸಿಕೊಂಡು, ನೀವು ನಿಮ್ಮ ಜೀವನದಿಂದ ಋಣಾತ್ಮಕ ಶಕ್ತಿಯನ್ನು ತೊಡೆದುಹಾಕಬಹುದು. ಮದುವೆಯ ಪ್ರಸ್ತಾಪಗಳನ್ನು ಪಡೆಯುವಲ್ಲಿ ಈ ಶಕ್ತಿ ವಿಜ್ಞಾನವು ನಿಮಗೆ ಸಹಾಯ ಮಾಡುತ್ತದೆ ಹಾಗೂ ನೀವು ತ್ವರಿತಗತಿಯಲ್ಲಿ ಅನುಕ್ರಮವಾಗಿ ಮದುವೆಯ ಪ್ರಸ್ತಾಪಗಳನ್ನು ಪಡೆಯುವಿರಿ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
251 views
Matrimonial
251 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
298 views
Match Making
298 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
338 views
Astrology in Marriage
338 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category