0 Shares 268 Views
00:00:00
18 Jun

ಮುಸ್ಲಿಂ ವಿವಾಹಕ್ಕೆ ಒಂದು ಮಾರ್ಗದರ್ಶಿ!

December 18, 2017
268 Views

ಮುಸ್ಲಿಂ ವಿವಾಹಗಳನ್ನು ಅತ್ಯಂತ ಸಾಂಪ್ರದಾಯಿಕ ವಿವಾಹಗಳೆಂದು ಪರಿಗಣಿಸಲಾಗುತ್ತದೆ. ಎಲ್ಲಾ ಸಮುದಾಯಗಳು ಮತ್ತು ಧರ್ಮಗಳನ್ನು ಆಳುತ್ತಿರುವ ಆಧುನಿಕತೆಯು ಇಂದಿನ ಪೀಳಿಗೆಯಲ್ಲೂ ಸಹ ಮತ್ತು ಮೇಲುಗೈ ಸಾಧಿಸಿದೆ. ಮುಸಲ್ಮಾನ್ ಮದುವೆಗಳು ವಾಸ್ತವವೂ ಮತ್ತು ಪ್ರಾಯೋಗಿಕತೆಗೆ ಹತ್ತಿರದಲ್ಲಿವೆ

ಮುಸ್ಲಿಂ ವಿವಾಹಗಳ ಪ್ರಮುಖ ಅಂಶವೆಂದರೆ ಕುಟುಂಬ. ಈ ಸಮುದಾಯದಲ್ಲಿ ವಧುವು ಎಷ್ಟು ಮತ್ತು ಎಲ್ಲಿ ಹಣವನ್ನು ಖರ್ಚು ಮಾಡುವುದನ್ನು ನಿರ್ಧರಿಸಬಹುದು. ಮುಸ್ಲಿಮರಲ್ಲಿ ಮದುವೆಯ ಸಮಾರಂಭಕ್ಕೆ ಅನೇಕ ಜನರನ್ನು ಕರೆಯುವ ಕಡ್ಡಾಯ ನಿಯಮಗಳೇನು ಇಲ್ಲ. ಈ ವಿವಾಹವೆಂಬ ಅಭೂತಪೂರ್ವ ಕ್ಷಣವು ವಧು ಮತ್ತು ವರನ ಕುಟುಂಬಗಳ ನಡುವೆಯೂ ಸಹ ನಡೆಯಬಹುದು. ವಾಲಿಮ್ಹಾ ಎಂದು ಕರೆಯಲ್ಪಡುವ ಸರಳ ಸ್ವಾಗತವಾಗಿದೆ. ಪಾವತಿಸಿದ ವರದಕ್ಷಿಣೆಯನ್ನು ಮಾಹ್ರ್ ಎಂದು ಕರೆಯಲಾಗುತ್ತದೆ, ಅದು ಕಡ್ಡಾಯವಾಗಿರುತ್ತದೆ, ಆದರೆ ವರನ ಕುಟುಂಬವು ನಿಭಾಯಿಸಬಲ್ಲಂತಹ ಏನೇ ಆದರೂ ಕೂಡ, ಯಾವುದೂ ಕಡ್ಡಾಯವಲ್ಲ.

ನಿಶ್ಚಿತಾರ್ಥಗಳಲ್ಲಿ ಕೆಲವು ಆಧುನಿಕ ಪ್ರವೃತ್ತಿಗಳು, ಉಂಗುರಗಳ ವಿನಿಮಯ ಇತ್ಯಾದಿಗಳನ್ನು ಒಳಗೊಂಡ ಇಂದಿನ ಪ್ರಪಂಚದಲ್ಲಿ ಚಿತ್ರಣವಾಗಿ ಹೊರಬಂದಿರುತ್ತದೆ, ಆದರೆ, ಅವುಗಳಲ್ಲಿ ಯಾವುದೂ ಕಡ್ಡಾಯವಾಗಿಲ್ಲ.

ಮುಸ್ಲಿಂ ವಿವಾಹಗಳಲ್ಲಿ ನಡೆಸಿಕೊಂಡು ಬಂದಿರುವ ಎಲ್ಲಾ ಆಚರಣೆಗಳು ಸೇರಿಸಲಾಗಿದ್ದು, ಅವುಗಳ ಪ್ರಮುಖ ಅಂಶಗಳ ಪ್ರಕಾರ ಪಟ್ಟಿ ಮಾಡಲಾಗಿದೆ:

1. ಮದುವೆ ಪ್ರಸ್ತಾಪ: ಯಾವುದೇ ಇತರೆ ಸಮುದಾಯಗಳಂತೆ, ನಿರೀಕ್ಷಿತ ವಧು ಮತ್ತು ವರನ ವಿವರಗಳನ್ನು ಸಮುದಾಯದ ಮುಖಂಡರಲ್ಲಿ ಹಂಚಲಾಗುವುದು. ಇದರ ನಂತರ, ವರನ ಪೋಷಕರು ವಧುವಿನ ಕುಟುಂಬಕ್ಕೆ ಭೇಟಿ ನೀಡಿ ಅವರ ಮನೆ ಮತ್ತು ಹುಡುಗಿಯನ್ನು ನೋಡುತ್ತಾರೆ. ಅಲ್ಲಿ ಖುರಾನಿನ ಮೊದಲ ಅಧ್ಯಾಯದ ಪಠಣದ ಒಂದು ಸೆಷನ್ ಅನ್ನು ನಡೆಸಲಾಗುತ್ತದೆ. ಆನಂತರ, ಕೆಲವೊಂದು ತಿನ್ನುವ ಮತ್ತು ಉಪಹಾರಗಳನ್ನು ಪೂರೈಸಲಾಗುತ್ತದೆ.

2. ನಿಶ್ಚಿತಾರ್ಥ: ಒಮ್ಮೆ ನಾವು ಕುಟುಂಬಗಳನ್ನು ಅಂತಿಮವಾಗಿ ನಿಶ್ಚಯಿಸಿದ ಮೇಲೆ, ತಕ್ಷಣವೇ ಕುಟುಂಬದ ಸದಸ್ಯರೊಂದಿಗೆ, ಅವರು ಒಂದು ಅನೌಪಚಾರಿಕ ನಿಶ್ಚಿತಾರ್ಥದ ಕಾರ್ಯವನ್ನು ಆಯೋಜಿಸುತ್ತಾರೆ. ಕುಟುಂಬದ ಸದಸ್ಯರಿಗಾಗಿ ಒಂದು ಸಾಂಪ್ರದಾಯಿಕ ಪ್ರಾರ್ಥನಾ ಸೆಷನ್ ನಡೆಯಲಿದೆ. ಆಮೇಲೆ ಕುಟುಂಬದ ಎಲ್ಲಾ ಸದಸ್ಯರಿಗೆ ಊಟವನ್ನು ಬಡಿಸಲಾಗುವುದು.

3. ಡೋಲ್ಕಿ: ಕುಟುಂಬಗಳು ಡೋಲಿಗಳ ಜೊತೆಗೆ ಬರುವುದೇ ಡೋಲ್ಕಿಯಾಗಿದೆ, ಅದು ಮದುವೆ ಸಮಾರಂಭ ನಡೆಯುವ ಮನೆಗೆ ಸಂಬಂಧಪಟ್ಟಿದೆ, ಅಲ್ಲಿ ಎಲ್ಲಾ ಮಹಿಳೆಯರು ಹಾಡು, ನೃತ್ಯ ಮಾಡುವ ಮೂಲಕ ಆ ದಿನದ ರಾತ್ರಿಯನ್ನು ಕಳೆಯುತ್ತಾರೆ. ಡೋಲ್ಕಿ ಎಂಬುದು ಒಂದು ಬಗೆಯ ಸಂಗೀತ ವಾದ್ಯವಾದ ಡ್ರಮ್ಮಿನ ಹೆಸರು, ಇದನ್ನು ಈ ಬಗೆಯ ಕಾರ್ಯಕ್ರಮಗಳಲ್ಲಿ ನುಡಿಸಲಾಗುತ್ತದೆ ಹಾಗೂ ಮಹಿಳೆಯರಿಗೆ ಹಾಡುವ ಕುಣಿಯುವ ಅವಕಾಶವನ್ನು ನೀಡುವ ಮೂಲಕ ಸಂಭ್ರಮವನ್ನು ಆಚರಿಸಲಾಗುತ್ತದೆ.

4. ಮೆಹಂದಿ: ಈ ಕಾರ್ಯಕ್ರಮವನ್ನು ಡೋಲ್ಕಿಯ ಜೊತೆಗೆ ನಡೆಸಲಾಗುತ್ತದೆ, ಅಲ್ಲಿ ವಧುವಿನ ಕೈಗಳನ್ನು ಮತ್ತು ಪಾದಗಳನ್ನು ಗೋರಂಟಿಯ ಚಿತ್ತಾಕರ್ಷಕ ವಿನ್ಯಾಸಗಳಿಂದ ಅಲಂಕರಿಸಲಾಗುತ್ತದೆ. ವರನ ಕುಟುಂಬದವರು ಗೋರಂಟಿಯನ್ನು ಮತ್ತು ಸಿಹಿತಿನಿಸುಗಳನ್ನು ಕಳುಹಿಸುತ್ತಾರೆ ಹಾಗೂ ಅವರೂ ಸಹ ವಧುವಿನ ಕುಟುಂಬದೊಂದಿಗೆ ಈ ಆಚರಣೆಯಲ್ಲಿ ಸೇರುತ್ತಾರೆ. ಅವರು ಇಡೀ ರಾತ್ರಿ ಒಟ್ಟಿಗೆ ಗಾಯನ, ನೃತ್ಯ ಮಾಡುವ ಮೂಲಕ ಆಚರಿಸುತ್ತಾರೆ.

5. ಬರಾತ್: ಇದು ಬೇರೆ ಧರ್ಮದ ವಿವಾಹಗಳಲ್ಲಿಯೂ ಕೂಡ ಸಾಮಾನ್ಯವಾಗಿರುತ್ತದೆ, ಆದಾಗ್ಯೂ, ಮುಸಲ್ಮಾನ ವಿವಾಹಗಳಲ್ಲಿ ಇದನ್ನು ಕಡ್ಡಾಯವೆಂದು ಪರಿಗಣಿಸಲಾಗಿದೆ ಹಾಗೂ ಮದುಮಗನನ್ನು ಆತನ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಮೆರವಣಿಗೆಯಲ್ಲಿ ವಿವಾಹ ಜರುಗುವ ಮಂಟಪದವರೆಗೆ ಅಥವಾ ವಧುವಿನ ಮನೆಯವರೆಗೆ ಒಟ್ಟಾಗಿ ಕರೆತರಲಾಗುತ್ತದೆ. ಈ ರೀತಿ ಕರೆತರುವಾಗಲು ವಾದ್ಯಮೇಳಗಳೊಂದಿಗೆ ಹಾಡು ನೃತ್ಯವೂ ಇರುತ್ತದೆ. ಸಾಮಾನ್ಯವಾಗಿ ವರನನ್ನು ಕರೆತರಲು ಕುದುರೆಗಳನ್ನು ಬಳಸಲಾಗುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಫ್ಯಾಷನ್ನಿನ ದುಬಾರಿಯಾದ ಕಾರುಗಳನ್ನು ಸಹ ಬಾರಾತ್ ನಲ್ಲಿ ಬಳಸುವುದನ್ನು ಗಮನಿಸಬಹುದು.

6. ನಿಖ್ಹಾ : ನಿಜವಾದ ಮದುವೆಯ ಸಮಾರಂಭವನ್ನು ನಿಖ್ಹಾ ಎಂದು ಕರೆಯಲಾಗುತ್ತದೆ, ಇದನ್ನು ಮುಸ್ಲಿಂ ಕ್ಲೆರಿಕ್ ಅಥವಾ ಇಮಾಮ್ ಎಂದು ಕರೆಯಲಾಗುವ ಈ ಸಮಾರಂಭದ ಆಧ್ಯಾತ್ಮಿಕ ಸಂಘಟಕರ ಎದುರಿಗೆ ನಡೆಸಲಾಗುತ್ತದೆ. ಇದು ಮದುವೆ ಸಭಾಂಗಣದಲ್ಲಿ ಅಥವಾ ವರನ ಮನೆಯಲ್ಲಿಯೂ ಸಹ ಅನುಕೂಲ ಮತ್ತು ಆರ್ಥಿಕ ಸ್ಥಾನಮಾನದ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ಕುಟುಂಬಗಳು ಈ ರೀತಿಯ ನಿಖ್ಹಾವನ್ನು ಮಸೀದಿಗಳಲ್ಲಿ ಮಾಡಲು ಇಷ್ಟಪಡುತ್ತಾರೆ. ಪುರುಷರು ಮತ್ತು ಮಹಿಳೆಯರಿಗೆ ಕುಳಿತುಕೊಳ್ಳಲು ಎರಡು ಪ್ರತ್ಯೇಕವಾದ ಪ್ರದೇಶಗಳನ್ನು ಹಂಚಲಾಗುತ್ತದೆ. ವಧುವಿನ ಕಡೆಯಿಂದ ಇಬ್ಬರು ಸಾಕ್ಷಿಗಳನ್ನು ಇಮಾಮ್ ಗಣನೆಗೆ ತೆಗೆದುಕೊಳ್ಳುತ್ತಾರೆ ಮತ್ತು ಅವರಿಗೆ ಮಹಿಳೆಯರು ಕುಳಿತುಕೊಳ್ಳುವ ಜಾಗಕ್ಕ ಹೋಗುವಂತೆ ತಿಳಿಸುತ್ತಾರೆ. ವಧುವು ಬಂದು ದಾಖಲೆಗಳ ಮೇಲೆ ಸಹಿ ಮಾಡುವ ಮೂಲಕ ಆಕೆಯ ಒಪ್ಪಿಗೆಯನ್ನು ಸ್ವೀಕರಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಅವರೊಂದಿಗೆ ಇಮಾಮ್ ರವರು ಹೋಗುವಂತೆ ಮಾಡಲಾಗುತ್ತಿತ್ತು ಹಾಗೂ ಹುಡುಗಿಯು ಉತ್ತಮವಾಗಿದೆ ಎಂದು ಹೇಳಿದರೆ, ಅದನ್ನು ಆಕೆಯ ಒಪ್ಪಿಗೆ ಎಂದು ಅಂಗೀಕರಿಸಲಾಗುತ್ತಿತ್ತು, ಆದರೆ ಇತ್ತಿಚಿನ ದಿನಗಳಲ್ಲಿ ದಾಖಲೆಯ ಮೇಲೆ ಅವರು ಸಹಿ ಹಾಕುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಆನಂತರ ಇಮಾಮ್ ರವರು ನಿಖಾವನ್ನು ನಡೆಸುತ್ತಾರೆ, ಆಗ ಖುತ್ಬಾ ಎಂದು ಕರೆಯಲ್ಪಡುವ ಸಣ್ಣ ಧರ್ಮೋಪದೇಶವನ್ನು ಮಾಡಲಾಗುತ್ತದೆ. ಈ ಧರ್ಮೋಪದೇಶದಲ್ಲಿ ವಧುವಿನ ತಂದೆ ಅಥವಾ ಪಾಲಕರಿಂದ ಅನುಮತಿ ಪಡೆಯುವ ಮೂಲಕ ಅನುಸರಿಸಲಾಗುತ್ತದೆ, ಅವರನ್ನು ವಾಲಿ ಎಂದು ಕರೆಯಲಾಗುತ್ತದೆ. ಆತ ಮಹರ್ ನ ಅಗತ್ಯಗಳನ್ನು ಪೂರೈಸಲು ಸಮ್ಮತಿಸುತ್ತಿರುತ್ತಾನೆ, ಈಗ ವರನಿಗೆ ಅದನ್ನು ಒದಗಿಸಲು ಸಾಧ್ಯವಾಗುತ್ತದೆ. ನಗದು ರೂಪದಲ್ಲ ಕೊಡುವುದು ಕಡ್ಡಾಯವೇನಿಲ್ಲ, ಏಕೆಂದರೆ ಅದು ಎರಡೂ ಕುಟುಂಬಗಳ ತಿಳುವಳಿಕೆಯ ಆಧಾರದ ಮೇಲೆ ನಿಂತಿರುತ್ತದೆ. ಹಾಗಾಗಿ ಇದನ್ನು ಕಡ್ಡಾಯವಾಗಿ ಆಚರಿಸುವ ಅಗತ್ಯವಿರುವುದಿಲ್ಲ. ಒಮ್ಮೆ ಆತನ್ನು ಸ್ವೀಕರಿಸಿದ ಬಳಿಕ, ಅವರು ಪ್ರಾರ್ಥನೆಗಳನ್ನು ನಡೆಸುತ್ತಾರೆ ಅದನ್ನು ದ್ವಾಸ್ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಅದು ಈ ರೀತಿ ಇರುತ್ತದೆ, ’ಬರಾಕ್ ಅಲ್ಲಾಹು ಲಕುಮ್ ವಾ ಬಾರಕ್’ ಅಲೈಕುಮ್ ವಾ ಜಾಮ’ ಬೈನಕುಮಾ ಫೈ ಖಾಹಿರ್’, ಇದರ ಅರ್ಥ “ಅಲ್ಹಾ ನಿಮ್ಮನ್ನು ಆಶೀರ್ವದಿಸಲಿ, ಆಶೀರ್ವಾದದೊಂದಿಗೆ ನಿಮ್ಮನ್ನು ಸುತ್ತುವರೆಯಲಿ ಹಾಗೂ ನಿಮ್ಮಿಬ್ಬರಿಗೂ ಸದ್ಗುಣ ಮತ್ತು ಸಮೃದ್ಧಿಯನ್ನು ಒಟ್ಟಾಗಿ ತಂದು ಕೊಡಲಿ” ಹಾಗೂ ಇದರ ನಂತರ ಮದುವೆಯು ಪೂರ್ಣಗೊಳ್ಳುತ್ತದೆ. ನಂತರದಲ್ಲಿ ಹತ್ತಿರದ ಆತ್ಮೀಯ ಕುಟುಂಬ ಸದ್ಯಸರಿಗೆ ಲಘು ಭೋಜನವನ್ನು ವ್ಯವಸ್ಥೆ ಮಾಡಲಾಗುತ್ತದೆ.

7. ನೋಂದಣಿ: ಇತ್ತೀಚಿನ ದಿನಗಳಲ್ಲಿ ಮದುವೆಯನ್ನು ನೋಂದಾಯಿಸಲ್ಪಡುವ ಅನಗತ್ಯ ತೊಂದರೆಗಳನ್ನು ತಪ್ಪಿಸಲು ಈ ನೋಂದಣಿ ವಿಧಾನವು ಕಡ್ಡಾಯವಾಗಿರುತ್ತದೆ. ಪುರುಷ ಮತ್ತು ಮಹಿಳೆಯನ್ನು ಮದುವೆಯಲ್ಲಿ ನೋಂದಣಿ ಮಾಡುವ ಮೂಲಕ ಅವರಿಬ್ಬರ ದಾಂಪತ್ಯದ ಪ್ರಾರಂಭಕ್ಕೆ ಸರಿಯಾದ ದಾಖಲೆಯ ಪುರಾವೆಯನ್ನಾಗಿ ಇದನ್ನು ಘೋಷಿಸಲಾಗುತ್ತದೆ. ಆದಾಗ್ಯೂ, ಇಸ್ಲಾಂ ಧರ್ಮದಲ್ಲಿ ಮಹಿಳೆಯರ ಉಪನಾಮವನ್ನು ಬದಲಿಸುವುದು ಕಡ್ಡಾಯವಾಗಿಲ್ಲ ಹಾಗೂ ಆ ಹೆಸರನ್ನು ಬದಲಿಸುವ ಅಥವಾ ಹಾಗೆಯೇ ಇಟ್ಟುಕೊಳ್ಳುವ ನಿರ್ಧಾರವು ಸಂಪೂರ್ಣವಾಗಿ ವಧುವಿಗೆ ಬಿಟ್ಟದ್ದು

8. ವಾಲಿಮಾ: ಇದು ಒಂದು ವಿವಾಹ ನಂತರದ ಭವ್ಯ ಕಾರ್ಯಕ್ರಮವಾಗಿದೆ ಇತರ ಸಂಬಂಧಿಗಳು ಸ್ನೇಹಿತರು ಮತ್ತು ಹಿತೈಷಿಗಳನ್ನು ಕರೆಸಿಕೊಳ್ಳುವ ಒಂದು ಸ್ವಾಗತಾರ್ಹ ರಿಸೆಪ್ಷನ್ ಕಾರ್ಯಕ್ರಮವಾಗಿದೆ. ಅವರು ಈ ಸಂದರ್ಭಗಳಲ್ಲಿ ಆಗಮಿಸುತ್ತಾರೆ ದಂಪತಿಗಳನ್ನು ಮೆಚ್ಚಿಕೊಂಡು ಆಶೀರ್ವದಿಸುತ್ತಾರೆ. ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ, ವಧು ಮತ್ತು ವರನ ಕುಟುಂಬಗಳು ಖರ್ಚುಗಳನ್ನು ಪರಸ್ಪರ ಸಮನಾಗಿ ಹಂಚಿಕೊಳ್ಳುತ್ತವೆ, ಆದ್ದರಿಂದ ಇದು ಎರಡು ಕಡೆಯ ಬಂಧು ಬಾಂಧವರಿಗಾಗಿ ಆಯೋಜಿಸಿರುವ ಕಾರ್ಯವಾಗಿದೆ.

9. ರುಖ್ಸ್ಟಿ: ಇಸ್ಲಾಂನಲ್ಲಿ ಗಂಡನಿಗೆ ಕಳುಹಿಸಲಾಗುವ ಹುಡುಗಿಯನ್ನು ರುಖ್ಸ್ಟಿ ಎಂದು ಕರೆಯಲಾಗುತ್ತದೆ. ಅಲ್ಲಿ ತಂದೆ, ಸಹೋದರರು ಮತ್ತು ಚಿಕ್ಕಪ್ಪಂದಿರು ಸೇರಿದಂತೆ (ಅಂಕಲ್‌ರವರು) ವರನ ಕಾರಿನವರೆಗೆ ಹುಡುಗಿಯನ್ನು ರಕ್ಷಿಸುತ್ತಾರೆ. ಇದು ಇತರ ವಿಧಾನಗಳಲ್ಲಿ ಒಂದು ಬಗೆಯ ಭಾವನಾತ್ಮಕ ಘಟನೆಯೂ ಕೂಡ ಆಗಿರುತ್ತದೆ. ಹೀಗೆ ಗಂಡನ ಮನೆಗೆ ಹುಡುಗಿಯನ್ನು ಕಳುಹಿಸುವ ಭಾವನಾತ್ಮಕ ಹೊರೆಯೊಂದಿಗೆ ವಿದಾಯವನ್ನು ನೀಡಲಾಗುತ್ತದೆ.

10. ಹನಿಮೂನ್ : ಕೊನೆಯದಾಗಿ, ಈ ಪದ್ಧತಿಯು ಹಿಂದಿನ ದಿನಗಳಲ್ಲಿ ಇರಲಿಲ್ಲ. ಆದಾಗ್ಯೂ, ಆಧುನಿಕ ದಿನಗಳಲ್ಲಿ ಇದು ಜನರ ವೈವಾಹಿಕ ಜೀವನದ ಒಂದು ಭಾಗವಾಗಿದೆ, ಅಂದರೆ ಹೊಸ ಫ್ಯಾಷನ್ನಿನ ಜನರು ಇದನ್ನು ಮದುವೆಯ ಪಟ್ಟಿಯಲ್ಲಿ ಸೇರಿಸಿಕೊಳ್ಳುವುದರ ಜೊತೆಗೆ ಬಂದಿರುತ್ತಾರೆ. ನವದಂಪತಿಗಳ ನಡುವೆ ಇದು ಹೆಚ್ಚಾಗಿ ಆಯೋಜಿಸಲ್ಪಡುತ್ತದೆ. ಇದರಲ್ಲಿ ಅವರು ಎಲ್ಲಿಗೆ ಹೋಗಬೇಕು ಮತ್ತು ವೆಚ್ಚ ಮಾಡಬೇಕೆಂದು ಅವರು ನಿರ್ಧರಿಸುತ್ತಾರೆ. ಆದಾಗ್ಯೂ, ವಧುವಿನ ಕುಟುಂಬವು ಎಲ್ಲ ಖರ್ಚುಗಳನ್ನು ಪೂರೈಸಬೇಕು ಎಂಬುದು ಕಡ್ಡಾಯವಲ್ಲ. ಆದ್ದರಿಂದ, ಇವೆರಡೂ ಖರ್ಚುಗಳನ್ನು ಎರಡೂ ಸಮಯಗಳಲ್ಲಿ ಸಮಾನವಾಗಿ ಹಂಚಿಕೊಂಡಿರುತ್ತವೆ. ಆದರೆ ಅಂತಿಮವಾಗಿ ಪರಸ್ಪರ ಅರ್ಥಮಾಡಿಕೊಳ್ಳುವಿಕೆಯನ್ನು ಅವಲಂಬಿಸಿರುತ್ತದೆ.

ಮುಸಲ್ಮಾನರ ವಿವಾಹಗಳಲ್ಲಿ, ಮದುವೆಯ ಖರ್ಚುಗಳು ಸೇರಿದಂತೆ, ಹಲವಾರು ಅನನ್ಯ ಲಕ್ಷಣಗಳಿವೆ. ಅಲ್ಲಿ ಇತರ ಧರ್ಮಗಳಂತಲ್ಲದೇ ಎರಡೂ ಕುಟುಂಬಗಳ ನಡುವೆ ಇದು ಹಂಚಿಕೊಳ್ಳಲ್ಪಡುತ್ತದೆ. ನಿಖ್ಹಾಗೆ ಅನೇಕ ಜನರು ಹಾಜರಾಗಬೇಕೆಂಬ ಕಡ್ಡಾಯವೇನಿಲ್ಲ ಹಾಗೂ ಅತೀವ ಜನರಿಂದ ಕೂಡಿದ ಅದ್ದೂರಿ ವೆಚ್ಚಗಳನ್ನು ಮಾಡುವ ಅಗತ್ಯವಿಲ್ಲ. ಎರಡೂ ಕುಟುಂಬಗಳ ಅನುಕೂಲಕ್ಕೆ ಅನುಗುಣವಾಗಿ ಈ ರಿಸೆಪ್ಷನ್ ಅನ್ನು ಯೋಜಿಸಲಾಗುತ್ತದೆ. ಆದ್ದರಿಂದ, ಇತರ ಧಾರ್ಮಿಕ ವಿವಾಹಗಳಿಗಿಂತ ಭಿನ್ನವಾಗಿ, ಮುಸ್ಲಿಂ ವಿವಾಹಗಳಿಗೆ ಅದ್ದೂರಿ ಮತ್ತು ಶ್ರೀಮಂತಿಕೆಯ ಅಂಶಗಳು ಕಡ್ಡಾಯವಾಗಿಲ್ಲ. ಧಾರ್ಮಿಕ ಅಂಶವು ಒಂದು ಪ್ರಮುಖ ಪಾತ್ರ ವಹಿಸುತ್ತದೆ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
248 views
Matrimonial
248 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
292 views
Match Making
292 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
332 views
Astrology in Marriage
332 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category