0 Shares 270 Views
00:00:00
18 Jun

ಕ್ರಿಶ್ಚಿಯನ್ ವಿವಾಹವನ್ನು ಕುರಿತ ಒಂದು ಮಾರ್ಗದರ್ಶಿ

December 21, 2017
270 Views

ಎಲ್ಲಾ ಸಮುದಾಯದ ಮದುವೆ ಸಮಾರಂಭಗಳಲ್ಲಿ ಇರುವಂತೆ ಕ್ರಿಶ್ಚಿಯನ್ ವಿವಾಹಗಳೂ ಕೂಡ ಅತ್ಯಂತ ರೋಮಾಂಚನಕಾರಿ ಮತ್ತು ಪ್ರೀತಿ ಪಾತ್ರರಿಗಾಗಿ ಮೋಜಿನಿಂದ ಕೂಡಿದ ಸಂದರ್ಭವಾಗಿರುತ್ತದೆ. ಕ್ರಿಶ್ಚಿಯನ್ ವಿವಾಹಗಳಲ್ಲಿ ಏನೆಲ್ಲಾ ಹಂತಗಳನ್ನು ಅನುಸರಿಸಲಾಗುತ್ತದೆ ಎಂಬ ಬಗ್ಗೆ ಒಂದು ರೂಪುರೇಷೆಯನ್ನು ನಾವು ಚರ್ಚಿಸಲಿದ್ದೇವೆ. ಯಾವುದೇ ಸಮುದಾಯದ ವಿವಾಹವಾಗಿದ್ದರೂ ಇಬ್ಬರು ವ್ಯಕ್ತಿಗಳ ಅಥವಾ ಎರಡು ಆತ್ಮಗಳನ್ನು ಒಂದುಗೂಡಿಸುವುದನ್ನು ದೇವನೊಬ್ಬ ನಿರ್ಧರಿಸಿರುತ್ತಾನೆ ಎಂದು ಪರಿಗಣಿಸಲಾಗುತ್ತದೆ. ಈ ಪರಿಕಲ್ಪನೆಯನ್ನು ನಂಬುವುದರಲ್ಲಿ ಕ್ರಿಶ್ಚಿಯನ್ ಸಮುದಾಯವೂ ಸಹ ಇದಕ್ಕೆ ಹೊರತಾಗಿಲ್ಲ. ಕ್ರಿಶ್ಚಿಯನ್ ವಿವಾಹಗಳ ಬಗ್ಗೆ ಸಂಕ್ಷಿಪ್ತ ತಿಳುವಳಿಕೆಯನ್ನು ನಾವು ಈ ರೀತಿಯಾಗಿ ಅನುಸರಿಸುತ್ತೇವೆ, ಎಲ್ಲಾ ಅಂಶಗಳನ್ನು ಸಂಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಆನುಸರಿಸಲು ಆಗದೇ ಇರಬಹುದಾದ ಅಂಶವನ್ನು ದಯವಿಟ್ಟು ಗಮನಿಸಿ. ಆಯಾಯ ಪ್ರದೇಶದ ಮತ್ತು ವ್ಯವಸ್ಥೆಗಳ ಆಧಾರದ ಮೇಲೆ ಮತ್ತೊಮ್ಮೆ ಇಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದಾಗಿದೆ. ಆದಾಗ್ಯೂ, ಒಟ್ಟಾರೆಯಾಗಿ, ಈ ಒಂದು ವಿಧಾನವು ಮತ್ತು ಪರಿಕಲ್ಪನೆಯು ಒಂದೇ ಆಗಿರುತ್ತದೆ.

ವಿವಾಹ-ಪೂರ್ವ ಸಮಾರಂಭದ ಪ್ರಸಂಗಗಳು:

ಕ್ಷಣಗಳನ್ನು ಸೆರೆಹಿಡಿಯುವುದು : ಇದು ಕ್ರಿಶ್ಚಿಯನ್ ವಿವಾಹಗಳ ಅತ್ಯಂತ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದೆ, ಇದು ಜೀವನದ ಸುವರ್ಣ ಕ್ಷಣಗಳೆಂಬಂತೆ ಯಾವಾಗಲೂ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಅವರಿಗೆ ಒದಗಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಇದಕ್ಕೆ ಬಹಳಷ್ಟು ಮಹತ್ವ ನೀಡುತ್ತಾರೆ ಮತ್ತು ಖಚಿತವಾಗಿ ಆನಂದಿಸುತ್ತಾರೆ.

ಉಂಗುರಗಳ ವಿನಿಮಯ:

ವಧುವರರು ತಮ್ಮ ನಡುವೆ ಉಂಗುರಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಆ ಮದುವೆಯ ಸಮಾರಂಭವು ಸಂಪೂರ್ಣವೆಂದು ಪರಿಗಣಿಸುವಂತಹ ಒಂದು ವಿಧಾನವಾಗಿದೆ. ಏಕತೆಯ ಕ್ಯಾಂಡಲ್ ಅನ್ನು ಬೆಳಗಿಸುವುದು : ಇಲ್ಲಿ ಒಂದು ಜೋಡಿಯು ಒಟ್ಟಾಗಿ ಕ್ಯಾಂಡಲ್ ಹೊತ್ತಿಸುವ ಮೂಲಕ ನವದಂಪತಿಯಾಗಿರುತ್ತಾರೆ. ಇಬ್ಬರೂ ಕೂಡ ಒಂದೇ ಕ್ಯಾಂಡಲ್ ಅನ್ನು ಹೊತ್ತಿಸುವುದು ಒಂದೇ ಸಾಂಕೇತಿಕ ನಿರೂಪಣೆಯ ಪ್ರತೀಕವಾಗಿದೆ.

ಸ್ಥಳದ ವ್ಯವಸ್ಥೆ:

ಈ ವಿವಾಹಗಳು ತಮ್ಮ ವ್ಯವಸ್ಥಿತ ಜೋಡಣೆ ಮತ್ತು ಆಕರ್ಷಣೆಯಿಂದಾಗಿ ಹೆಸರುವಾಸಿಯಾಗಿವೆ. ಆದ್ದರಿಂದ, ಸ್ಥಳವನ್ನು ಅಲಂಕರಿಸುವಲ್ಲಿ ಅವರು ವಿಶಿಷ್ಟವಾದ ಗಮನವನ್ನು ನೀಡುತ್ತಾರೆ, ಆ ಮೂಲಕ ಹೆಜ್ಜೆಯಿಟ್ಟು ಆಗಮಿಸುತ್ತಿರುವ ಜನರಿಗೆ ಒಂದು ಗಮನಾರ್ಹ ಕೌತುಕವನ್ನು ಇರಿಸುತ್ತಾರೆ. ಇದು ಕೇವಲ ನವದಂಪತಿಗಳಿಗೆ ಮಾತ್ರವಲ್ಲದೆ ಎಲ್ಲರಿಗೂ ಸಂತೋಷಕರ ಮತ್ತು ಆಹ್ಲಾದವನ್ನು ನೀಡುತ್ತದೆ.

ಸುತ್ತಲೂ ಸಂಗೀತ:

ಕ್ರಿಶ್ಚಿಯನ್ ಸಮುದಾಯದಲ್ಲಿ ಸಂಗೀತವು ವಿವಾಹಗಳ ಒಂದು ಪ್ರಮುಖವಾದ ನಿರ್ಣಾಯಕ ಭಾಗವಾಗಿದೆ ಹಾಗೂ ಸಂಗೀತದ ಬಗ್ಗೆ ಗಮನ ಕೊಡದೆ ಯಾವುದೇ ಮದುವೆಗಳನ್ನು ನಡೆಸಲಾಗುವುದಿಲ್ಲ. ಇದು ಜನರ ಮನಸ್ಸನ್ನು ಪುನಶ್ಚೇತನಗೊಳಿಸುತ್ತದೆ ಮತ್ತು ಪುಟಿದೇಳುವಂತೆ ಮಾಡುತ್ತದೆ.

ಸುತ್ತಲೂ ಬೆಳಕಿನ ವ್ಯವಸ್ಥೆ:

ಸುತ್ತಮುತ್ತಲು ಕ್ಯಾಂಡಲ್‌ಗಳನ್ನು ಬೆಳಗಿಸುವುದರ ಮೂಲಕ ಮದುವೆಯ ಸ್ಥಳವನ್ನು ಮತ್ತಷ್ಟು ಕುತೂಹಲ ಕೆರಳಿಸುವ ಹಾಗೂ ಅತ್ಯಾಕರ್ಷಕಗೊಳಿಸುವಂತೆ ಮಾಡಬೇಕೆಂಬ ಉದ್ದೇಶದಿಂದ ಈ ಸಮುದಾಯದಲ್ಲಿ ಬೆಳಕಿನ ವ್ಯವಸ್ಥೆಯ ಬಗ್ಗೆ ವಿವಾಹಗಳಲ್ಲಿ ಹೆಚ್ಚಿನ ಗಮನವನ್ನು ನಿಡುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಜನರು ವಿದ್ಯುತ್ ದೀಪಗಳಿಗೆ ಮೊರೆಹೋಗಿದ್ದಾರೆ, ಏಕೆಂದರೆ ಅದರಲ್ಲಿ ಅಪಾಯಕಾರಿಯಲ್ಲದ ಕಾರ್ಯವಾಗಿದ್ದು ಆ ಸ್ಥಳವನ್ನು ಹಿಂದಿಗಿಂತಲೂ ಮತ್ತಷ್ಟು ವರ್ಣರಂಜಿತಗೊಳಿಸುತ್ತದೆ.

ಮದುವೆ ಸಮಾರಂಭ:

ವಧುವರರ ಜೀವಿತಾವಧಿಯಲ್ಲಿ ಮದುವೆಯ ದಿನವು ಅತ್ಯಂತ ವಿಶೇಷವಾದ ಮತ್ತು ಪ್ರಮುಖವಾದ ದಿನವಾದ್ದರಿಂದ ಎಲ್ಲಿಯೂ ಸಹ ಯಾವುದಕ್ಕೂ ಸಹ ಕೊರತೆಯಾಗದ ರೀತಿಯಲ್ಲಿ ವಿಭಿನ್ನ ಚಟುವಟಿಕೆಗಳನ್ನು ಕ್ರಿಶ್ಚಿಯನ್ ಸಮುದಾಯದಲ್ಲಿ ವಿವಾಹದ ಆಚರಣೆಯ ಒಂದು ಭಾಗವೆಂಬಂತೆ ಹಮ್ಮಿಕೊಂಡಿರಲಾಗುತ್ತದೆ.

ಸಂಗೀತದ ಮೆರವಣಿಗೆ:

ಪಾಶ್ಚಿಮಾತ್ಯ ಸಂಗೀತ ಮತ್ತು ಶಾಸ್ತ್ರೀಯ ಸಂಗೀತದ ಪ್ರಕಾರಗಳನ್ನು ಕ್ರಿಶ್ಚಿಯನ್ ಸಮುದಾಯದ ವಿವಾಹಗಳ ಗಾನಗೋಷ್ಠಿಯಲ್ಲಿ ಒಂದು ಧಾರ್ಮಿಕ ಆಚರಣೆ ಎಂಬಂತೆ ಪರಿಗಣಿಸಲಾಗುತ್ತದೆ, ಬಂದಿರುವ ಅತಿಥಿಗಳ ಗುಂಪು ದೀರ್ಘಕಾಲದವರೆಗೆ ಉತ್ಸಾಹಿಯಾಗಿರಲು ಮತ್ತು ಹಬ್ಬದ ಮನಃಸ್ಥಿತಿಯನ್ನು ಕಾಯ್ದಿರಿಸಿಕೊಳ್ಳುವಲ್ಲಿ ಇದು ಸಹಕಾರಿಯಾಗಿರುತ್ತದೆ.

ಆಸನಗಳು:

ಕ್ರಿಶ್ಚಿಯನ್ ವಿವಾಹಗಳಲ್ಲಿ ಇದೊಂದು ಪ್ರಮುಖ ಅಂಶವಾಗಿದೆ, ಏಕೆಂದರೆ ಅತ್ಯಂತ ನಿಕಟವಾದ ಕುಟುಂಬ ಸದಸ್ಯರ ಸ್ಥಳಗಳನ್ನು ಸ್ಥಿರವಾಗಿ ಅಥವಾ ವ್ಯವಸ್ಥಿತವಾಗಿ ಇರಿಸಲಾಗಿರುತ್ತದೆ, ಅದನ್ನು ಅವರು ಅನುಸರಿಸಬೇಕು. ಮತ್ತು ಅದರ ಅತ್ಯುತ್ತಮ ಭಾಗವೆಂದರೆ ಮೆರವಣಿಗೆ ಅನುಸರಿಸುವುದು ಹಾಗೂ ಮದುವೆಯ ಸಭಾಂಗಣಕ್ಕೆ ಹೊಸ ಕುಟುಂಬ ಸದಸ್ಯರು ಆಗಮಿಸಿದಾಗ ಮತ್ತು ಆಗಮಿಸುತ್ತಿದ್ದಂತೆ ಬದಲಾಗುತ್ತಿರುವುದು ಕೂಡ ಇದರಲ್ಲಿ ಸೇರಿರುತ್ತದೆ:

• ವರನ ಪ್ರಧಾನ ಕುಟುಂಬ

• ವಧುವಿನ ಪ್ರಧಾನ ಕುಟುಂಬ

• ವರನ ಪೋಷಕರು

• ವಧುವಿನ ಪೋಷಕರು

ಆದ್ದರಿಂದ, ಈ ಮೇಲೆ ಉಲ್ಲೇಖಿಸಿದ ಎಲ್ಲಾ ಅಂಶಗಳು ಒಮ್ಮೆ ಸ್ಥಿರವಾಗಿದ್ದರೆ, ವಧುವನ್ನು ವಿವಾಹದ ಸಭಾಂಗಣಕ್ಕೆ ಕರೆ ತರುವ ಮೆರವಣಿಗೆಯು ಪ್ರಾರಂಭವಾಗುತ್ತದೆ ಹಾಗೂ ಇದು ಸಂತೋಷಕರ ಕ್ಷಣಗಳಲ್ಲಿ ಒಂದಾಗಿದೆ ಮತ್ತು ಕಾರ್ಯಕಲಾಪಗಳನ್ನು ವೀಕ್ಷಿಸಲು ನಿಜವಾಗಿಯೂ ಯೋಗ್ಯವಾಗಿರುತ್ತದೆ. ವೇದಿಕೆಯ ಬಲಭಾಗದಲ್ಲಿ ಪ್ರಧಾನ ಚರ್ಚು ಮತ್ತು ವರನ ಪ್ರವೇಶಕ್ಕಾಗಿ ಪ್ರಾಧಾನ್ಯತೆ ನೀಡಲಾಗಿರುತ್ತದೆ. ಜನರ ಮತ್ತೊಂದು ಗುಂಪನ್ನು ವರನ ಸ್ನೇಹಿತರೆಂದು ಕರೆಯಲಾಗುತ್ತದೆ, ಅದರ ಅರ್ಥ ವರನ ಸ್ನೇಹಿತರು ಕೆಲವೊಂದು ಬಾರಿ ಸಂಬಂಧಿಕರೊಂದಿಗೆ ಆಗಮಿಸುತ್ತಾರೆ ಮತ್ತೆ ಕೆಲವು ಸಂದರ್ಭಗಳಲ್ಲಿ ವರನ ಗೆಳೆಯರು ವಧುವಿನ ಗೆಳತಿಯರಿಗೆ ಬೆಂಗಾವಲಾಗಿರುತ್ತಾರೆ, ಅದರ ಅರ್ಥ ಸಭಾಂಗಣದ ಕೇಂದ್ರ ಭಾಗದಿಂದ ವಧುವಿನ ಸ್ನೇಹಿತರು ಅಥವಾ ಸಂಬಂಧಿಕರು ಒಬ್ಬೊಬ್ಬರಾಗಿ ಅವರೊಂದಿಗೆ ಒಂದು ಜೋಡಿ ಎಂಬಂತೆ ಸಮೀಪಿಸುತ್ತಾರೆ. ಸಾಮಾನ್ಯವಾಗಿ ಸಭಾಂಗಣದ ಕೇಂದ್ರ ಭಾಗಕ್ಕೆ ಒಂದೇ ಬಾರಿಗೆ ವಧುವಿನ ಗೆಳತಿಯರು ಪ್ರವೇಶಿಸುತ್ತಾರೆ. ಒಂದುವೇಳೆ ವರನ ಗೆಳೆಯರು ವಧುವಿನ ಗೆಳತಿಯರಿಗೆ ಬೆಂಗಾವಲಾಗಿ ಇರಲು ಒಪ್ಪಿದಲ್ಲಿ ಅವರು ಒಟ್ಟಿಗೆ ಸಭಾಂಗಣವನ್ನು ಪ್ರವೇಶಿಸುತ್ತಾರೆ. ಮುಂದೆ, ಗೌರವಾನ್ವಿತ ವಿವಾಹಿತ ಮಹಿಳೆಯು ಅಥವಾ ಮದುವೆಯಾಗದಿರುವ ಹುಡುಗಿ ಅಂದರೆ ವಧುವಿನ ಅತ್ತ್ಯುತ್ತಮ ಗೆಳತಿ ಅಥವಾ ಆಪ್ತ ಸ್ನೇಹಿತೆಯು ಸಭಾಂಗಣವನ್ನು ಪ್ರವೇಶಿಸುತ್ತಾಳೆ, ಆಕೆಯು ಅತ್ಯುತ್ತಮ ವ್ಯಕ್ತಿ ಎಂದು ಕರೆಯಲ್ಪಡುವ ವರನ ಸ್ನೇಹಿತನ ಜೊತೆಗೆ ಬೆಂಗಾವಲಾಗಿ ಸಭಾಂಗಣಕ್ಕೆ ಹೋಗುತ್ತಾಳೆ. ಫ್ಲವರ್ ಗರ್ಲ್ ಮತ್ತು ರಿಂಗ್ ಬೇರರ್ ಎಂದು ಕರೆಯಲ್ಪಡುವ ಮತ್ತಿಬ್ಬರು ವ್ಯಕ್ತಿಗಳ ಜೊತೆಗೆ ನೆರಳಿನಂತೆ ಪ್ರವೇಶಿಸುತ್ತಾರೆ. ಈ ಎಲ್ಲಾ ಜನರು ಮದುವೆಯ ಸಭಾಂಗಣದ ಮಧ್ಯಭಾಗದಿಂದ ಬರುತ್ತಾರೆ. ವಧುವು ತನ್ನ ತಂದೆಯ ಜೊತೆಗೆ ಬರುತ್ತಿದ್ದಾಳೆ ಎಂದು ಸೂಚಿಸಲು ಮದುವೆಯ ಮೆರವಣಿಗೆಯು ಬರುತ್ತಿದೆ ಎಂದು ವಧುವಿನ ತಾಯಿಯು ಎದ್ದು ನಿಂತು ಸ್ವಾಗತ ಕೋರುವ ಮೂಲಕ ವಧುವರರನ್ನು ಸ್ವಾಗತಿಸಬೇಕೆಂದು ಅತಿಥಿಗಳಿಗೆ ಸೂಚನೆ ನೀಡುತ್ತಾಳೆ. ನಂತರದಲ್ಲಿ ನಡೆಯುವುದನ್ನು ಪ್ರಾರ್ಥನೆಯ ಕರೆ ಎಂದು ಕರೆಯಲಾಗುತ್ತದೆ, ಅಲ್ಲಿ ಪವಿತ್ರ ವಿವಾಹದ ಉದ್ದೇಶದಿಂದ ಆಹ್ವಾನಿಸಲ್ಪಟ್ಟ ಅತಿಥಿಗಳು ಸೇರಿರುವಂತಹ ಸಮಾರಂಭಕ್ಕೆ ಔಪಚಾರಿಕವಾಗಿ ನೀಡುವ ಒಂದು ಅಮಂತ್ರಣವೇ ಅದಾಗಿದೆ. ಆರಂಭಿಕ ಪ್ರಾರ್ಥನೆ ದೇವರ ಕಡೆಗೆ ಸ್ಪಷ್ಟಮಾತುಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಪವಿತ್ರವಾದ ವಿವಾಹ ಸಂದರ್ಭದಲ್ಲಿ ತಮ್ಮ ಉಪಸ್ಥಿತಿಯನ್ನು ಹುಡುಕುವುದು ಮತ್ತು ನವದಂಪತಿಗಳನ್ನು ಆಶೀರ್ವದಿಸಬೇಕೆಂದು ಪ್ರಾರ್ಥಿಸುವುದೇ ಈ ಧಾರ್ಮಿಕ ಆಚರಣೆಯನ್ನು ಅರ್ಥಪೂರ್ಣಗೊಳಿಸುತ್ತದೆ.

ಪ್ರಾರ್ಥನೆಯ ನಂತರ, ಎಲ್ಲಾ ಅತಿಥಿಗಳು ಮತ್ತು ಕುಟುಂಬ ಸಮಾರಂಭದ ಭಾಗವಾಗಿ ಕುಳಿತುಕೊಳ್ಳುವಂತೆ ಕೇಳಿಕೊಳ್ಳಲಾಗುತ್ತದೆ. ವಧುವನ್ನು ಬಿಟ್ಟುಕೊಡುವುದು ಒಂದು ಮುಂದೂಡುವ ಚಟುವಟಿಕೆಯಾಗಿದ್ದು ಅಲ್ಲಿ ವಧು ಪೋಷಕರು ಮತ್ತು ವರನ ಪೋಷಕರು ತೊಡಗಿಸಿಕೊಳ್ಳಲಾಗಿರುತ್ತದೆ. ಯಾವುದೇ ಪೋಷಕರು ಲಭ್ಯವಿಲ್ಲದಿದ್ದರೆ ಆಗ ಅವರು ಮತ್ತೊಂದು ಜೋಡಿಯ ಮೂಲಕ ಒಂದು ಪರ್ಯಾಯ ಯೋಜನೆಯನ್ನು ಮಾಡುತ್ತಾರೆ, ಅವರನ್ನು ಧರ್ಮಪಿತ ಅಥವಾ ಧರ್ಮಮಾತೆ ಎಂದು ಕರೆಯಲಾಗುತ್ತದೆ. ಎರಡೂ ಗುಂಪಿನವರಿಂದ ಅಥವಾ ಒಬ್ಬರಿಂದ ಪ್ರಾರ್ಥನೆಯನ್ನು ಹಾಡಲಾಗುತ್ತದೆ, ಈ ಒಂದು ಶುಭ ಸಂದರ್ಭವನ್ನು ದೇವರು ಆಶೀರ್ವದಿಸಬೇಕೆಂದು ಪ್ರಾರ್ಥಿಸಲಾಗುತ್ತದೆ, ಆ ನವದಂಪತಿಯು ಜೀವನದ ಉದ್ದಕ್ಕೂ ಸಮರ್ಥವಾದ ರೀತಿಯಲ್ಲಿ ಒಟ್ಟಾಗಿಯೇ ಬದುಕಿನ ಸಂಪರ್ಕದಲ್ಲಿ ಉಳಿಯುವಂತೆ ಮಾಡಬೇಕೆಂದು ಕೋರಲಾಗುತ್ತದೆ. ಪ್ರಧಾನ ಚರ್ಚಿನ ಮೂಲಕ ವಧು ಮತ್ತು ವರರಿಗೆ ಹೊಣೆಯನ್ನು ನಿರ್ವಹಿಸಲಾಗುತ್ತದೆ, ಅದರ ಅರ್ಥ ಜೀವನದ ಮುಂದಿನ ಪ್ರಯಾಣದಲ್ಲಿ ಅವರು ತಮ್ಮ ತಮ್ಮ ಪಾತ್ರಗಳನ್ನು ಮತ್ತು ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡು ನಿರ್ವಹಿಸಬೇಕೆಂದು ಅವರಿಗೆ ವಿವರಿಸಲಾಗುತ್ತದೆ. ಆ ಮೂಲಕ ಒಬ್ಬರನೊಬ್ಬರು ಪರಸ್ಪರ ಅರ್ಥಮಾಡಿಕೊಂಡು ಹೇಗೆ ಕಾಳಜಿ ಮಾಡಬೇಕು ಮತ್ತು ಎಲ್ಲಾ ಸನ್ನಿವೇಶಗಳಲ್ಲೂ ಕುಟುಂಬವನ್ನು ಸಂತೋಷದಿಂದ ಇರಿಸಬೇಕೆಂಬ ಧೋರಣೆಯನ್ನು ಪಾಲಿಸುವುದು ಹೇಗೆಂದು ವಿವರಿಸಲಾಗುತ್ತದೆ.

ಪ್ರತಿಜ್ಞೆ:

ಇದು ಒಂದು ತಳಮಳದ ಸನ್ನಿವೇಶವಾಗಿದ್ದು, ಇಲ್ಲಿ ವಧು ಮತ್ತು ವರ ಇಬ್ಬರೂ ಕೂಡ ತಮ್ಮ ಮುಕ್ತ ಮನಸ್ಸಿನಿಂದ ಆತ್ಮ ತೃಪ್ತಿಗೆ ಅನುಗುಣವಾಗಿ ಯಾವುದೇ ಬಲವಂತವಾದ ಶಕ್ತಿ ಇಲ್ಲದೆ, ಸಂತೋಷದಿಂದ ಮದುವೆಯಾಗಲು ಹೊರಟಿದ್ದೇವೆ ಎಂದು ಘೋಷಿಸುತ್ತಾರೆ. ಮದುವೆಯ ಪ್ರತಿಜ್ಞೆಗಳು: ದೇವರ ಸಮ್ಮುಖದಲ್ಲಿ ಮತ್ತು ಸಾಕ್ಷಿದಾರರ ಉಪಸ್ಥಿತಿಯೊಂದಿಗೆ ವಧು ಮತ್ತು ವರರನ್ನು ಮುಖಾಮುಖಿಯಾಗಿ ಎದುರುಬದುರು ನಿಲ್ಲುವಂತೆ ಮಾಡಲಾಗುತ್ತದೆ. ನಂತರ ಪವಿತ್ರವಾದ ಪ್ರತಿಜ್ಞೆಯನ್ನು ಮಾಡುವಂತೆ ಅವರನ್ನು ಕೇಳಿಕೊಳ್ಳಲಾಗುತ್ತದೆ. ಆ ಮೂಲಕ ಪರಸ್ಪರ ಸಂತೋಷದಿಂದ ಮತ್ತು ಬೆಳವಣಿಗೆಗೆ ಅವಕಾಶ ನೀಡುವಂತೆ ಬೆಳೆಯಬೇಕೆಂದು ಪ್ರತಿಜ್ಞೆಯಲ್ಲಿ ಹೇಳಲಾಗುತ್ತದೆ. ಕೆಲವು ಕ್ರಿಶ್ಚಿಯನ್ ವಿವಾಹಗಳಲ್ಲಿ ಕ್ರೈಸ್ತರ ಧಾರ್ಮಿಕ ಆಚರಣೆಯ ಮೂಲಕ ಈ ಪ್ರತಿಜ್ಞೆಯನ್ನು ಹೆಚ್ಚಾಗಿ ಅನುಸರಿಸಲಾಗುತ್ತದೆ. ಇದರ ನಂತರ ಒಕ್ಕೂಟದ ಪ್ರಾರ್ಥನೆಯನ್ನು ಎಲ್ಲರೂ ಅನುಸರಿಸುತ್ತಿದ್ದಂತೆ ಪ್ರಧಾನ ಚರ್ಚಿನವರು ಆ ಇಬ್ಬರು ನವದಂಪತಿಗಳನ್ನು ಪತಿಪತ್ನಿ ಎಂದು ಅಧಿಕೃತವಾಗಿ ಘೋಷಿಸುತ್ತಾರೆ. ಎಲ್ಲರಿಂದ ಪ್ರಾರ್ಥನೆಯನ್ನು ಮುಗಿಸುವುದು ವಿವಾಹದ ಅಧಿಕೃತ ಪೂರ್ಣಗೊಳ್ಳುವಿಕೆಯಾಗಿರುತ್ತದೆ, ನವದಂಪತಿಗಳಿಗೆ ಆಗಮಿಸಿದವರು ಉಡುಗೊರೆಗಳನ್ನು ನೀಡುತ್ತಾರೆ, ಹಾಗೂ ಅವರಿಗೆ ಸಂತೋಷ ಮತ್ತು ಪ್ರಗತಿಯ ಜೀವನವು ದೊರೆಯುವಂತೆ ವೈಯಕ್ತಿಕವಾಗಿ ಹಾರೈಸುತ್ತಾರೆ. ಒಂದು ಕ್ರಮಬದ್ಧವಾದ ರೀತಿಯಲ್ಲಿ ಪಾದ್ರಿಗಳು ಮತ್ತೊಮ್ಮೆ ನಿರ್ಗಮನ ಗಾಯನವನ್ನು ಹಾಡುವ ಮೂಲಕ ಎಲ್ಲರೂ ಅದನ್ನು ಅನುಸರಿಸುತ್ತಾರೆ.

• ವಧು ಮತ್ತು ವರ

• ವಧುವಿನ ಅವಿವಾಹಿತ ಸ್ನೇಹಿತೆ ಮತ್ತು ವರನ ಸ್ನೇಹಿತ

• ಫ್ಲವರ್ ಗರ್ಲ್ ಮತ್ತು ರಿಂಗ್-ಬೇರರ್

• ಗೌರವಾನ್ವಿತ ಅತಿಥಿಗಳು

• ಉಳಿದಿರುವ ಅತಿಥಿ

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
248 views
Matrimonial
248 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
292 views
Match Making
292 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
332 views
Astrology in Marriage
332 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category