0 Shares 345 Views
00:00:00
24 Mar

ಬಾಲಿವುಡ್ ವಧುವಿನ 8 ಪ್ರಸಿದ್ಧ ಕೇಶವಿನ್ಯಾಸ

December 18, 2017
345 Views

ನಟನಾ ಕ್ಷೇತ್ರದಲ್ಲಿ ವಿವಾಹದ ದಿನವು ಪ್ರತಿಯೊಬ್ಬರಿಗೂ ಒಂದು ಮಹತ್ವದ ಪಾತ್ರವಾಗಿರುತ್ತದೆ. ಆ ಸಂದರ್ಭದಲ್ಲಿ ವಧು ಮತ್ತು ವರರು ಖಂಡಿತವಾಗಿಯೂ ಹೆಚ್ಚು ಬೇಡಿಕೆಯಲ್ಲಿರುವ ಪಾತ್ರವನ್ನು ಹೊಂದಿರುತ್ತಾರೆ. ಯಾವುದೇ ವಿವಾಹ ಮಹೋತ್ಸವಗಳಲ್ಲಿ ವಧುವರರು ಆ ಮದುವೆಯ ಆಕರ್ಷಣೀಯ ಕೇಂದ್ರವಾಗಿರುವುದರಿಂದ ಅದು ವೀಕ್ಷಕರನ್ನು ಆನಂದ ಪರವಶರಾಗುವಂತೆ ಮಾಡುವಲ್ಲಿ ಮತ್ತು ಕಣ್ಸೆಳೆಯುವಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಪ್ರತಿಯೊಬ್ಬ ವಧುವರನು ತಮ್ಮ ಬಹಳಷ್ಟು ಪ್ರಯತ್ನಗಳ ಮೂಲಕ ಆ ದಿನವನ್ನು ವಿಶೇಷವನ್ನಾಗಿ ಮಾಡುವಲ್ಲಿ ಕಾರ್ಯೋನ್ಮುಖರಾಗುತ್ತಾರೆ, ಅಂದರೆ, ತಮ್ಮ ಉಡುಗೆತೊಡುಗೆ, ಆಭರಣ ಇತ್ಯಾದಿಯಂತಹ ಇತರ ಪರಿಕರಗಳ ಮೂಲಕ ಎಲ್ಲವೂ ಆ ಸಂದರ್ಭಕ್ಕೆ ಹೆಚ್ಚು ಮುಖ್ಯವಾಗುತ್ತದೆ ಹಾಗೂ ಈ ಸಂದರ್ಭದಲ್ಲಿ ಕೇಶಾಲಂಕಾರವು ಬಹಳ ಮುಖ್ಯವಾಗಿರುತ್ತದೆ. ಬಾಲಿವುಡ್ ಖ್ಯಾತನಾಮರು ತಮ್ಮ ಮದುವೆಯ ದಿನದಂದು ವಿಭಿನ್ನ ನೋಟಕ್ಕಾಗಿ ಸೌಂದರ್ಯದ ಮೂರ್ತರೂಪವನ್ನು ಆರಿಸಿಕೊಳ್ಳುತ್ತಾರೆ.

ತಮ್ಮ ವಿವಾಹದ ವಿಶೇಷದಿನದಂದು ಅಲಂಕಾರಗೊಂಡಿದ್ದ ಪ್ರಸಿದ್ಧ ಬಾಲಿವುಡ್ ವಧುಗಳು ಮತ್ತು ಅವರ ಕೇಶಾಲಂಕಾರಗಳು ಈ ಕೆಳಕಂಡಂತಿವೆ:

1. ಸುಂದರವಾದ ವಧು ಕರೀನಾ ಕಪೂರ್ ತನ್ನ ವಿವಾಹದ ದಿನದಂದು ಆಕೆಯ ಸರಳವಾದ ಕೇಶಾಲಂಕಾರ ಮತ್ತು ಭಾರೀ ಆಭರಣದೊಂದಿಗೆ ಸುಂದರವಾಗಿ ಕಾಣಿಸಿಕೊಂಡಿದ್ದಳು. ಪ್ರತಿಯೊಬ್ಬ ನೋಡುಗರನ್ನೂ ತನ್ನೆಡೆಗೆ ಸೆಳೆಯಲು ಆಕೆಗೆ ಸಾಧ್ಯವಾಗಿತ್ತು. ಅವಳು ತನ್ನ ಸರಳ ಸುಂದರವಾದ ಮತ್ತು ಸೊಗಸಾದ ಕೇಶಾಲಂಕಾರದಿಂದ ಅವಳು ಪ್ರಕಾಶಮಾನವಾಗಿ ಮತ್ತು ಸೌಂದರ್ಯದ ಗಣಿಯಂತೆ ಬಹುಕಾಂತೀಯವಾಗಿ ಕಾಣುತ್ತಿದ್ದಳು. ಆಕೆಯ ಅಲಂಕಾರವು ಅವಳ ಗುಲಾಬಿ ಬಣ್ಣದ ಲೆಹೆಂಗಾದ ಜೊತೆಗೆ ಸೂಕ್ತವಾದ ರೀತಿಯಲ್ಲಿ ಹೊಂದಿಕೆಯಾಗಿತ್ತು.

2. ಬಹುತೇಕ ಅತ್ಯಂತ ಸುಂದರವಾದ ಬಾಲಿವುಡ್ ವಧುಗಳಲ್ಲಿ ಒಬ್ಬರಾದ ಐಶ್ವರ್ಯ ರೈ ಕೇವಲ ಎಲ್ಲರ ಗಮನವನ್ನು ಕದಿಯಲಿಲ್ಲ, ಆದರೆ ಅದರ ಜೊತೆಗೆ ಮದುವೆಗೆ ಬಂದಿದ್ದ ಎಲ್ಲಾ ಅತಿಥಿಗಳ ಹೃದಯವನ್ನೂ ಸಹ ಕದಿಯುವಲ್ಲಿ ಯಶಸ್ವಿಯಾದರು. ಐಶ್ವರ್ಯ ಅವರ ವಿವಾಹವು ಒಂದು ಭವ್ಯವಾದ ಸಂಬಂಧವಾಗಿತ್ತು ಮತ್ತು ಆ ಒಂದು ದೊಡ್ಡ ಸನ್ನಿವೇಶವು ವಿಭಿನ್ನ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮಿಶ್ರಣವಾಗಿತ್ತು. ಸಾಂಪ್ರದಾಯಿಕವಾದ ದಕ್ಷಿಣ-ಭಾರತೀಯರ ಅಲಂಕಾರಿಕ ಉಡುಗೆ ತೊಡುಗೆಗಳಿಂದ ಕಣ್ಣೋಟದಲ್ಲೇ ಬೆರಗುಗೊಳಿಸುವಂತಿದ್ದಳು ಐಶ್ವರ್ಯಾ ರೈ. ಆಕೆ ಒಂದು ನಳನಳಿಸುವ ಸೀರೆಯಿಂದ ಮತ್ತು ನಯವಾಗಿರುವ ಕೂದಲಿನಿಂದ ಅಲಂಕರಿಸಲ್ಪಟ್ಟಿದ್ದಳು. ಆಕೆ ತನ್ನ ವ್ಯಕ್ತಿತ್ವಕ್ಕೆ ಅಸಾಮಾನ್ಯ ಸೌಂದರ್ಯವು ಮೇಳೈಸುವ ರೀತಿಯಲ್ಲಿ ಉದ್ದನೆಯ ಕೇಶರಾಶಿಯು ಹೂವುಗಳಿಂದಲೂ ಮತ್ತು ಆಭರಣಗಳಿಂದಲೂ ಅಲಂಕೃತವಾಗಿತ್ತು.

3. ಮಾಜಿ ಮಿಸ್, ಇಂಟರ್‌ನ್ಯಾಷನಲ್ ಎಂದೇ ಖ್ಯಾತರಾಗಿದ್ದ ಲಾರಾದತ್ತಾರವರು ಒಬ್ಬ ಪ್ರಸಿದ್ಧ ನಟಿಯಾಗಿ ಹಲವಾರು ಹೃದಯಗಳನ್ನು ಕದ್ದಿದ್ದರು. ಆಕೆ ತನ್ನ ವಿವಾಹವನ್ನು ಕ್ರೈಸ್ತಧರ್ಮದ ವಿವಾಹಪದ್ಧತಿಯ ಪ್ರಕಾರ ಚೆನ್ನಾಗಿ ಕಾಣುವ ತುರುಬಿನಿಂದಲೂ ಕೂದಲನ್ನು ಅಲಂಕರಿಸಿದ್ದಳು ಮತ್ತು ಬಿಳಿ ಬಣ್ಣದ ಗೌನ್ ಅನ್ನು ಧರಿಸುವ ಮೂಲಕ ಎಲ್ಲರ ಕಣ್ಮನಗಳನ್ನು ಸೆಳೆದಿದ್ದಳು. ಲಾರಾಳ ಆ ಬಗೆಯ ಕೇಶಾಲಂಕಾರ ಮತ್ತು ಆಕೆ ಧರಿಸಿದ್ದ ಬಿಳಿಗೌನ್ ನೋಡುಗರನ್ನು ಬೆರಗುಗೊಳಿಸುವಂತಿತ್ತು.

4. ವಧುವಿನ ಅಲಂಕಾರದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್‌ನ ಮತ್ತೊಬ್ಬ ನಟಿಯೆಂದರೆ ಇಶಾ ಡಿಯೋಲ್. ಆಕೆ ತನ್ನ ಅಂದವಾದ ಹೆಣೆದ ತುರುಬಿನ್ನೊಂದಿಗೆ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಳು, ಆಕೆಯ ತುರುಬು ಸೊಗಸಾಗಿ ಕಾಣುವಂತೆ ಮಾಡಿತ್ತು, ಹಾಗೂ ಆಕೆ ಕೆಂಪು ಬಣ್ಣದ ಲೆಹೆಂಗಾದಲ್ಲಿ ಅದ್ಭುತವಾಗಿ ಕಣ್ಮನ ಸೆಳೆಯುತ್ತಿದ್ದಳು.

5. ತನ್ನ ಉದ್ದವಾದ ಕೂದಲಿನಿಂದ ಹೆಣೆಯಲ್ಪಟ್ಟಿದ್ದ ಶಿಲ್ಪಾ ಶೆಟ್ಟಿ ಮದುವೆಯ ದಿನದಂದು ತನ್ನ ಸುಂದರವಾದ ಅಲಂಕಾರಗಳಿಂದ ಬಹುಸ್ಫುರದ್ರೂಪಿಯಾಗಿ ಎಲ್ಲರನ್ನೂ ಸೆಳೆದಿದ್ದಳು. ಐಶ್ವರ್ಯಾಳಂತೆ ಶಿಲ್ಪಾ ಕೂಡ ಒಂದು ತುರುಬಿನ ಜೊತೆಗೆ ತನ್ನ ಸೊಂಟದವರೆಗೂ ಇಳಿಬಿದ್ದಿದ್ದ ಉದ್ದವಾದ ಕೇಶರಾಶಿಯಿಂದ ಬಹು ಮನಮೋಹಕವಾಗಿದ್ದಳು. ಅವಳ ಕೇಶಾಲಂಕಾರವು ಆಕೆಯನ್ನು ಸಾಂಪ್ರದಾಯಿಕವಾದ ದಕ್ಷಿಣ – ಭಾರತೀಯ ಶೈಲಿಯಲ್ಲಿರುವಂತೆ ಮಾಡಿತ್ತು ಹಾಗೂ ಆಕೆಯನ್ನು ಹಲವಾರು ಹೂವುಗಳಿಂದ ಅಲಂಕರಿಸಲಾಗಿತ್ತು.

6. ದಿಯಾ ಮಿರ್ಜಾಳು ಮದುವೆಯ ದಿನದಂದು ತನ್ನ ಸಮಕಾಲೀನ ಕೇಶಾಲಂಕಾರದಿಂದ(ಕಾಂಟೆಂಪೊರರಿ ಹೇರ್‌ಡೋ) ಸೊಗಸಾಗಿ ಕಾಣುತ್ತಿದ್ದಳು. ಆಕೆ ತನ್ನ ಸುಂದರವಾದ ಕೇಶವನ್ನು ಉದ್ದವಾಗಿ ಬಿಟ್ಟಿದ್ದಳು ಹಾಗೇ ಅರ್ಧದಷ್ಟು ಭಾಗವನ್ನು ಮಾತ್ರ ತೆಗೆದುಕೊಂಡು ಮಧ್ಯದಲ್ಲಿ ಪಿನ್‌ನಿಂದ ಲಾಕ್ ಮಾಡಲಾಗಿತ್ತು.

7. ವಿದ್ಯಾ ಬಾಲನ್ ತನ್ನ ಕೇಶವನ್ನು ಒಂದು ಕೇಂದ್ರಬಿಂದುವಿನಿಂದ ವಿಭಜಿಸಿಕೊಂಡು, ಆಕೆ ತನ್ನ ಕೂದಲನ್ನು ಲಾಕ್ ಮಾಡಿದ್ದಳು. ಆಕೆಯ ಕೇಶವು ಹೂವುಗಳಿಂದ ಅಲಂಕರಿಸಲ್ಪಟ್ಟಿತ್ತು. ಆಕೆ ಸಾಂಪ್ರದಾಯಿಕ ಮಲ್ಲುನೋಟದಲ್ಲಿ ಒಬ್ಬ ಅಪ್ರತಿಮ ಸುಂದರಿಯಾಗಿ ಕಾಣಿಸುತ್ತಿದ್ದಳು. ಆಕೆ ತೊಟ್ಟಿದ್ದ ಕೆಂಪುಬಣ್ಣದ ಸೀರೆಯು ಅವಳ ಸೌಂದರ್ಯವನ್ನು ಇಮ್ಮಡಿಸಿತ್ತು ಹಾಗೂ ಆಕೆಯನ್ನು ಮನಮೋಹಕಗೊಳಿಸಿತ್ತು.

8. ಬಾಲಿವುಡ್‌ನ ಮತ್ತೊಬ್ಬ ನಟಿಯಾದ ಅಮೃತಾ ಅರೋರಾ, ತನ್ನದೇ ಆದ ವಿನೂತನ ಚೊಕ್ಕಟವಾಗಿರುವ ಅಲಂಕಾರದಿಂದ ಕ್ರಿಶ್ಚಿಯನ್ ವೈವಾಹಿಕ ಉಡುಗೆಯಲ್ಲಿ ಕಂಗೊಳಿಸಬೇಕೆಂದು ಆಯ್ಕೆಮಾಡಿಕೊಂಡಿದ್ದಳು. ಹೀಗಾಗಿ ಆಕೆ ತನ್ನ ಸರಳವಾದ ನೋಟದಿಂದಲೇ ಸೊಗಸಾಗಿ ಎಲ್ಲರಿಗೂ ಆಕರ್ಷಣೀಯವಾಗಿ ಕಾಣುತ್ತಿದ್ದಳು.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
207 views
Matrimonial
207 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
236 views
Match Making
236 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
241 views
Astrology in Marriage
241 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category