0 Shares 188 Views
00:00:00
18 Jan

ಪ್ರಣಯ-ಪುರಾವೆಯಾದ ನಿಮ್ಮ ವಿವಾಹಕ್ಕೆ 6 ಮಾರ್ಗಗಳು

January 11, 2018
188 Views

ಇಂದಿನ ಜಗತ್ತು ಹೆಚ್ಚುವರಿ-ವೈವಾಹಿಕ ವ್ಯವಹಾರಗಳೊಂದಿಗೆ ಈ ಪ್ರಮುಖ ಸಮಸ್ಯೆಯನ್ನು ಎದುರಿಸುತ್ತಲಿದೆ. ಇವುಗಳು ವಿವಿಧ ಕಾರಣಗಳಿಗಾಗಿ ಆಗಿರಬಹುದು, ಆದರೆ ಇದರ ಏಕೈಕ ಫಲಿತಾಂಶವು ಇಬ್ಬರಲ್ಲಿ ಯಾರೊಬ್ಬರಿಗೂ ಸಂತೋಷವನ್ನು ನೀಡುವುದಿಲ್ಲ, ಇದಕ್ಕೆ ಕಾರಣ, ಒಂದೇ ಒಂದು ತಪ್ಪು. ಆದ್ದರಿಂದ, ಯಾವುದೇ ಸಂಬಂಧವು ಅತ್ಯಂತ ಪ್ರಾಮಾಣಿಕತೆಯೊಂದಿಗೆ ನಡೆಸಲಾಗುತ್ತದೆಯೆ ಎಂದು ಖಚಿತಪಡಿಸಿಕೊಳ್ಳಿ. ಅದರಲ್ಲೂ ವಿಶೇಷವಾಗಿ, ಅದು ಒಂದು ವಿವಾಹದ ಸಂಬಂಧವಾಗಿದ್ದಾಗ, ಅದನ್ನು ಯಾವಾಗಲೂ ಪರಸ್ಪರ ನಂಬಿಕೆ ಮತ್ತು ಬದ್ಧತೆಯೊಂದಿಗೆ ಬೆಸೆಯಲಾಗುತ್ತದೆ.

ವಿವಾಹದ ಒಂದು ಆಹ್ಲಾದಕರ ಮತ್ತು ಶಾಂತಿಯುತ ಸಂಬಂಧವನ್ನು ಮುನ್ನಡೆಸಿಕೊಂಡು ಹೋಗುವ ತೀವ್ರತೆಯನ್ನು ನಾವು ಅರ್ಥಮಾಡಿಕೊಂಡಾಗ ಪ್ರಣಯ-ಪುರಾವೆಯ ಮದುವೆಯೆಂಬುದನ್ನು ನಿಭಾಯಿಸುವುದು ಕಠಿಣವೇನಲ್ಲ. ಕೆಲವು ಅತ್ಯಂತ ತ್ವರಿತ ಮತ್ತು ತಾತ್ಕಾಲಿಕ ಭಾವನೆಗಳು ಜೀವನದ ಸುದೀರ್ಘಾವಧಿಯ ಸಂಬಂಧವನ್ನು ಹಾಳು ಮಾಡಬಾರದು. ಆದ್ದರಿಂದ, ಆ ಪ್ರಲೋಭನೆಗಳನ್ನು ತಪ್ಪಿಸಿರಿ ಮತ್ತು ದೀರ್ಘಕಾಲ ಸಂತೋಷದಿಂದ ಆ ಸಂಬಂಧವನ್ನು ಉಳಿಸಿ ಬೆಳೆಸಿಕೊಳ್ಳುವ ಬಗ್ಗೆ ತಮ್ಮ ಗಮನವನ್ನು ಕೇಂದ್ರೀಕರಿಸಿಡಿ.

ಒಂದು ಸಂಬಂಧವನ್ನು ಪ್ರಣಯ-ಪುರಾವೆಯನ್ನಾಗಿ ಮಾಡುವುದಕ್ಕೆ ಮಾರ್ಗಗಳು :

1. ಆಕರ್ಷಣೆ ಮುಖ್ಯ ಕಾರಣವಾಗಿದೆ:

ಭಿನ್ನ ಲಿಂಗದವರು ಪರಸ್ಪರ ಆಕರ್ಷಿಸುತ್ತವೆ. ಮುಖ್ಯವಾಗಿ ವಿಚಾರಗಳು ಮತ್ತು ಆಲೋಚನೆಗಳು ಸಾಮಾನ್ಯವಾಗಿದ್ದಾಗ, ಅವುಗಳು ತಮ್ಮ ಆಕರ್ಷರ್ಣೆಯ ಮೇಲೆ ಒಂದು ನಿಯಂತ್ರಣವನ್ನು ಹೊಂದಿರುತ್ತದೆ. ಇದು ವ್ಯಕ್ತಿಯ ಕಡೆಗೆ ಒಂದು ರೀತಿಯಲ್ಲಿ ಇಷ್ಟಪಡುವ ಭಾವನೆಯನ್ನು ಮೂಡಿಸಲು ಕಾರಣವಾಗಬಹುದು. ಹಾಗಾಗಿ ನಿಮ್ಮ ಸಂಬಂಧದ ಸ್ಥಾನಮಾನವನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಭಾವನೆಗಳ ಬಗ್ಗೆ ಕಾಳಜಿವಹಿಸಿರಿ. ಅಪಾಯವನ್ನು ವೈಯಕ್ತಿಕವಾಗಿ ತನ್ನ ಮೇಲೆ ಎಳೆದುಕೊಳ್ಳುವುದು ಯಾವಾಗಲೂ ಒಳ್ಳೆಯದಲ್ಲ. ಏಕೆಂದರೆ ಅದು ಮನಸ್ಸನ್ನು ಸಂಕುಚಿತಗೊಳಿಸುವುದಕ್ಕೆ ಕಾರಣವಾಗಿ ಬಿಡುತ್ತದೆ.

2. ಸಂಗಾತಿಯ ಸುತ್ತಲೂ ಸುತ್ತುತ್ತಿರಿ:

ಜೀವನದಲ್ಲಿ ಸುತ್ತಮುತ್ತಲೂ ಹೊರಗಡೆ ಸುತ್ತಲೂ ಮತ್ತು ಡೇಟ್ಸ್ ಗೆಂದು ಹೊರಗೆ ಹೋಗಲು ಸಂಗಾತಿಯು ಅತ್ಯುತ್ತಮ ಆಯ್ಕೆಯಾಗುತ್ತದೆ. ಬದುಕಿನಲ್ಲಿ ಏನು ಬೇಕಾದರೂ ಆಗಬಹುದು ಮತ್ತು ಯಾವುದೇ ಸಮಸ್ಯೆಗಳು ಸಹ ಜೀವನದಲ್ಲಿ ಎದುರಾಗಬಹುದು, ಆದರೆ ನಮ್ಮ ಮನಸಿನ ಭಾವನೆಗಳನ್ನು ಹಂಚಿಕೊಳ್ಳಲು ಯಾವಾಗಲೂ ಅತ್ಯುತ್ತಮ ವ್ಯಕ್ತಿಯೆಂದರೆ ಅದು ನಿಮ್ಮ ಸಂಗಾತಿಯಾಗಿರಲಿ. ಅದು ಇತರರ ಬಗೆಗಿನ ಉದ್ದೇಶಗಳನ್ನು ಮತ್ತು ಆಕರ್ಷಣೆಗಳನ್ನು ಕಡಿಮೆ ಮಾಡುತ್ತದೆ.

3. ಶಾರೀರಿಕ ಅನ್ಯೋನ್ಯತೆ:

ಇಂದಿನ ಬಿಡುವಿಲ್ಲದ ಜಗತ್ತು ದಂಪತಿಗಳ ನಡುವೆ ಒಂದು ಅನಗತ್ಯ ಅಂತರವನ್ನು ಸೃಷ್ಟಿಸಿರುತ್ತದೆ, ಅದರಲ್ಲಿ, ತಮ್ಮ ನಡುವಿನ ನೌಕರಿಯ ಸಂಸ್ಕೃತಿ, ಬಾಹ್ಯ ಒತ್ತಡ, ಹಣಕಾಸಿನ ವಿಷಯಗಳು ಇತ್ಯಾದಿಯಂತಹ ವಿಚಾರಗಳು ದಂಪತಿಗಳ ನಡುವೆ ಅನಗತ್ಯ ಅಂತರಕ್ಕೆ ಕಾರಣವಾಗಿವೆ. ಇದರಿಂದಾಗಿ ದಂಪತಿಗಳ ನಡುವೆ ದೈಹಿಕ ಅನ್ಯೋನ್ಯತೆಯಲ್ಲಿ ಅಂತರಗಳು ಉಂಟಾಗುತ್ತವೆ, ಈ ಪರಿಣಾಮದಿಂದ ಬಾಹ್ಯ ವ್ಯಕ್ತಗಳ ಕಡೆಗೆ ಆಕರ್ಷಣೆಯನ್ನು ಸೃಷ್ಟಿಸುತ್ತದೆ. ಆತ್ಮೀಯತೆ ಎಂಬುದು ನೈಸರ್ಗಿಕ ಪ್ರಚೋದಕವಾಗಿರುವ ಸಾಧ್ಯತೆ ಇದೆ, ಬೇರೆಯವರ ನಿರೀಕ್ಷೆಗಳತನಕ ಸಂಗಾತಿಗಳು ಜೀವನ ನಡೆಸಿದಾಗ ಯಾವುದೇ ಸಂಗಾತಿಗಳ ನಡುವಿನ ಅಂತರವನ್ನು ತುಂಬಲು ಬೇರೆಯವರಿಗ ಸ್ಥಳಾವಕಾಶ ಮಾಡಿಕೊಡುವುದಿಲ್ಲ, ಅಂದರೆ ಆ ಸ್ಥಾನವನ್ನು ತಮ್ಮ ಸಂಗಾತಿಯಿಂದಲೇ ಪರಿಪೂರ್ಣದ ಭಾವನೆಯನ್ನು ಬೆಳೆಸಿಕೊಂಡಿರುತ್ತಾರೆ.

4. ಯೋಗ್ಯವಾದ ರೀತಿಯಲ್ಲಿ ಸಮಯವನ್ನು ಸಂಗಾತಿಯೊಂದಿಗೆ ಕಳೆಯಿರಿ:

ಬಹುತೇಕ ಜೀವನಶೈಲಿಯನ್ನು ವೃತ್ತಿಪರ ವಿಚಾರಗಳ ಮೂಲಕ ನಿರ್ಧರಿಸಲಾಗುತ್ತದೆ ಮತ್ತು ನಿಯಂತ್ರಿಸಲಾಗುತ್ತದೆ. ಹಾಗಾಗಿ, ನಿಮ್ಮ ಸಂಗಾತಿಗಾಗಿ ಸಮಯವನ್ನು ಮೀಸಲಿಡಿ, ಆ ಮೂಲಕ ಆತನಿಗೆ/ಆಕೆಗೆ ನೀವು ವಿಶೇಷವೆನ್ನುವ ಮನೋಭಾವನೆಯನ್ನು ಮೂಡಿಸಿ. ಸಂಬಂಧ ಮತ್ತು ಕಾರುಣ್ಯದೊಂದಿಗಿನ ಬದ್ಧತೆಯು ನಮ್ಮನ್ನು ಯಾವಾಗಲೂ ಸಂತೋಷ ಮತ್ತು ಉಲ್ಲಾಸಗಳಿಂದ ಇರಿಸುತ್ತವೆ. ಇದು ಜೀವನದಲ್ಲಿ ಮತ್ತಷ್ಟು ಕವಲುದಾರಿಗಳಲ್ಲಿ ಹೋಗದಂತೆ ನಮ್ಮನ್ನು ಒಂದುಗೂಡಿಸಿ ಇರಿಸಿಸುತ್ತದೆ. ಆದ್ದರಿಂದ ಸಂಗಾತಿಯೊಂದಿಗೆ ಸಮಯ ಕಳೆಯುವುದು ಯಶಸ್ವೀಯುತ ವಿವಾಹದ ಅತ್ಯುತ್ತಮ ರಹಸ್ಯವಾಗಿದೆ.

5. ಮನನೋಯಿಸುವ ಖಂಡನೀಯತೆಗಳು:

ಬದುಕಿನ ಪ್ರತಿಯೊಂದು ಹಂತವು ಮನಸ್ಸಿಗೆ ಘಾಸಿ ಉಂಟುಮಾಡುವ ಟೀಕಾ ಪ್ರಹಾರಗಳನ್ನು ಒಳಗೊಂಡಿರಲಿದೆ, ಹಾಗಾಗಿ ಅವುಗಳ ಬಗ್ಗೆ ಸಂಗಾತಿಯೊಂದಿಗೆ ಮಾತನಾಡುವುದರಿಂದ ನಮ್ಮನ್ನು ಮತ್ತಷ್ಟು ಆತ್ಮವಿಶ್ವಾಸದೊಂದಿಗೆ ಗಟ್ಟಿಗೊಳಿಸುತ್ತವೆ. ಆ ಕ್ಷಣಗಳಲ್ಲಿ ಬಹಳಷ್ಟು ತೊಂದರೆಗಳನ್ನು ಉಂಟುಮಾಡಬಲ್ಲ ಸಂವೇದನಾತ್ಮಕ ಸೂಕ್ಷ್ಮ ಅಂಶಗಳು ಎದುರಾಗಬಹುದು. ತೊಂದರೆಗಳನ್ನು ಕುರಿತು ಕೆಲವೊಂದು ಘಟ್ಟದಲ್ಲಿ ಚರ್ಚಿಸಿದರೆ, ಆ ಭಿನ್ನಾಬಿಪ್ರಾಯಗಳನ್ನು ಸ್ಪಷ್ಟೀಕರಿಸಬೇಕು ಮತ್ತು ತೆರವುಗೊಳಿಸಬೇಕು.

6. ರೋಮ್ಯಾಂಟಿಕ್ ಆಗಿರಿ:

ಪ್ರಣಯವು ವೈವಾಹಿಕ ಸಂಬಂಧವನ್ನು ವೃದ್ಧಿಗೊಳಿಸಿ ಪೋಷಿಸುತ್ತದೆ. ಆದ್ದರಿಂದ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಆಗಿರಿ ಮತ್ತು ಅವರಿಗೆ ನೀವು ವಿಶಿಷ್ಟವೆಂಬ ಭಾವನೆಯನ್ನು ಮೂಡಿಸಿ. ಇದು ಒಂದು ಆಹ್ಲಾದಕರವಾದ ಅನಿರೀಕ್ಷಿತಗಳಿಂದ ಕೂಡಿರಬಹುದು, ಅಂದರೆ ಕ್ಯಾಂಡಲ್ ಲೈಟ್ ಡಿನ್ನರ್ ಆಗಿರಬಹುದು, ಅಥವಾ ದೂರದವರೆಗಿನ ಸುತ್ತಾಟ ಇತ್ಯಾದಿಗಳು ಆಗಿರಬಹುದು. ನಮ್ಮ ಸಂಗಾತಿಯೊಂದಿಗೆ ನಾವು ಹೆಚ್ಚು ಭಾವನಾತ್ಮಕವಾಗಿ ಬೆಸೆದುಕೊಂಡಿದ್ದಷ್ಟು ಆ ಸಂಬಂಧದಿಂದ ನಾವು ಹಿಂತಿರುಗುವ ಅಥವಾ ಬೇರಾಗುವ ಸಾಧ್ಯತಗಳು ತುಂಬಾ ಕಡಿಮೆ ಇರುತ್ತದೆ.

ಜೀವನವು ಬಹಳಷ್ಟು ಸುಂದರ ಮತ್ತು ಸುಮನೋಹರವಾಗಿದ್ದು, ಖುಷಿ ಕ್ಷಣಗಳಿಂದ ತುಂಬಿದೆ. ನಾವು ಅದನ್ನು ಯಾವ ರೀತಿಯಲ್ಲಿ ನೋಡುತ್ತೇವೆ ಎಂಬುದು ಯಾವಾಗಲೂ ಗಣನೆಗೆ ಬರುತ್ತದೆ. ಆದ್ದರಿಂದ, ಜೀವನವನ್ನು ನಾವು ಒಂದು ಧನಾತ್ಮಕ ರೀತಿಯಲ್ಲಿ ತೆಗೆದುಕೊಳ್ಳಿರಿ ಮತ್ತು ಸಂಗಾತಿಗಳ ನಡುವೆ ಒಂದು ಸದೃಢವಾದ ಸಂಬಂಧವನ್ನು ಬೆಳೆಸಿ ಮತ್ತು ಅವುಗಳಲ್ಲಿ ಅತ್ಯುತ್ಕೃಷ್ಟವಾದ ಕಾರ್ಯಗಳನ್ನು ಮಾಡಿ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
353 views
Matrimonial
353 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
409 views
Match Making
409 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
586 views
Astrology in Marriage
586 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category