0 Shares 321 Views
00:00:00
18 Jun

ಭಾರತದಲ್ಲಿ ಹಿಂದೂ ಮಹಿಳೆಯರು ಸಿಂಧೂರನ್ನು ಏಕೆ ಧರಿಸುತ್ತಾರೆಂಬುದಕ್ಕೆ 6 ನೈಜ ಕಾರಣಗಳು

December 8, 2017
321 Views

ಮದುವೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದೆ. ಜೀವಿತಾವಧಿಯವರೆಗೆ ಮಾತ್ರವಲ್ಲದೆ ಬದುಕಿನ ಅಂತಿಮ ಕ್ಷಣದವರೆಗೂ ಎರಡು ಜೀವಗಳನ್ನು ಬಂಧಿಸಿಡುವ ಒಂದು ಸಮಾರಂಭ ಎಂದು ಇದನ್ನು ನಂಬಲಾಗಿದೆ. ಹಿಂದೂ ವಿವಾಹಗಳಲ್ಲಿ ವರಮಾಲೆಯನ್ನು ಯುಗಯುಗಗಳಿಂದಲೂ ಬಳಸಲಾಗುತ್ತಿದೆ ಮತ್ತು ಅದು ಮಹತ್ವದ್ದಾಗಿದೆ. ವಾಸ್ತವವಾಗಿ, ಇದು ಭಾರತೀಯ ಸಮಾಜದಲ್ಲಿ ದೊಡ್ಡ ಮೌಲ್ಯವನ್ನು ಹೊಂದಿದೆ. ಮದುವೆಯ ನಂತರವೂ, ಮಹಿಳೆಯರು ತಮ್ಮ ವಿವಾಹಿತ ಜೀವನದ ಸಂಕೇತವಾಗಿ ಸಿಂಧೂರನ್ನು ಅನ್ವಯಿಸುತ್ತಿದ್ದಾರೆ. ಮಹಿಳೆಯರು ಸಿಂಧೂರನ್ನು ಏಕೆ ಬಳಸುತ್ತಾರೆ ಎಂಬ ಬಗ್ಗೆ ಹಲವಾರು ವದಂತಿಗಳು ಮತ್ತು ತಪ್ಪುಗ್ರಹಿಕೆಗಳು ಇವೆ. ಈ ಲೇಖನದಲ್ಲಿ, ನಾವು ಹಿಂದೂ ಮಹಿಳೆಯರು ಸಿಂಧೂರವನ್ನು ಧರಿಸುವುದಕ್ಕೆ 6 ನೈಜ ಕಾರಣಗಳನ್ನು ಕುರಿತು ಮಾತನಾಡುತ್ತೇವೆ.

ಪತಿಯ ದೀರ್ಘಾಯುಷ್ಯಕ್ಕಾಗಿ:

ಹಿಂದೂ ಮಹಿಳೆಯರು ತಮ್ಮ ಪುರುಷ ಸಂಗಾತಿಯು ದೀರ್ಘಕಾಲ ಬಾಳಿ ಬದುಕಲೆಂಬ ಬಯಕೆಯಿಂದ ಅದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ದೊಡ್ಡ ಪ್ರಮಾಣದಲ್ಲಿ ಸಿಂಧೂರವನ್ನು ಧರಿಸುತ್ತಾರೆ. ಹಿಂದೂ ಧರ್ಮದಲ್ಲಿ, ಒಬ್ಬ ಮಹಿಳೆ ತನ್ನ ವಿವಾಹದ ನಂತರ ಸಿಂಧೂರವನ್ನು ಧರಿಸುವಂತಹ ಒಂದು ಸಂಪ್ರದಾಯವಿದೆ. ಇದು ಅವರ ಗಂಡನ ದೀರ್ಘಾಯುಷ್ಯಕ್ಕಾಗಿ ಅವರ ಅಪೇಕ್ಷೆಯನ್ನು ಸಂಕೇತಿಸುತ್ತದೆ. ಈ ಕಾರಣದಿಂದ, ಹಿಂದು ವಿಧವೆಯರು ಸಿಂಧೂರವನ್ನು ಧರಿಸುವುದಿಲ್ಲ.

ದೇವತೆಯ ಕೃಪಾಕಟಾಕ್ಷವನ್ನು ಪಡೆಯಲು:

ಹಿಂದೂ ಧರ್ಮದ ಪ್ರಕಾರ, ವಿವಾಹ ಎಂಬುದು ಒಂದು ದೈವಿಕ ಸಂಬಂಧ ಹಾಗೂ ಅದಕ್ಕಾಗಿ ದೇವಾನು ದೇವತೆಗಳ ಅನುಗ್ರಹವು ಅತ್ಯಗತ್ಯವಾಗಿರುತ್ತದೆ. ಶಕ್ತಿಯನ್ನು ತೋರಿಸುವಂತಹ ಮತ್ತು ಸ್ತ್ರೀ ದೇವತೆಗಳಲ್ಲಿ ಪಾರ್ವತಿ ಮತ್ತು ಸತಿಯ ಶಕ್ತಿಯನ್ನು ಪ್ರತಿನಿಧಿಸುವ ಸಂಕೇತವೇ ಕೆಂಪು ಬಣ್ಣವಾಗಿದೆ ಎಂಬ ನಂಬಿಕೆಯು ಹಾಗೆಯೇ ಹಿಂದಿನಿಂದಲೂ ಉಳಿದುಕೊಂಡು ಬಂದಿದೆ. ಹಾಗಾಗಿ, ಸತಿಯು ತನ್ನ ಗಂಡನ ಗೌರವಾರ್ಥವಾಗಿ ತನ್ನ ಜೀವನವನ್ನೇ ಅಗ್ನಿಗೆ ಆಹುತಿ ಮಾಡಿಕೊಂಡಂತಹ ಒಬ್ಬ ಪರಿಪೂರ್ಣ ಪತ್ನಿ ಎಂದು ಸತಿಯನ್ನು ಹೇಳಬೇಕಾಗುತ್ತದೆ. ಕುಂಕುಮವನ್ನು ತಮ್ಮ ಹಣೆಗಳಲ್ಲಿ ಧರಿಸುವಂತಹ ಮಹಿಳೆಯರು ತಮ್ಮ ಪತಿಗೆ ದೈವಿಕ ರಕ್ಷಣೆಯನ್ನು ನೀಡಬೇಕೆಂದು ಬೇಡಿಕೊಳ್ಳುವ ದೃಷ್ಟಿಕೋನದಿಂದ ಪಾರ್ವತಿಯೇ ಅದರ ರಕ್ಷಣೆಯಲ್ಲಿ ತೊಡಗಿರುತ್ತಾರೆ ಎಂದು ದೇವಿಯನ್ನು ಪ್ರಾರ್ಥಿಸುತ್ತಾರೆ ಎಂದು ನಂಬಲಾಗಿದೆ ಹಾಗೂ ಅದರೊಂದಿಗೆ ಉತ್ತಮ ಅದೃಷ್ಟವು ಅವರನ್ನು ಹುಡುಕಿಕೊಂಡು ಬಂದು ಆಶೀರ್ವದಿಸುತ್ತದೆ.

ಮೇಷ ರಾಶಿಯನ್ನು ಸಂತುಷ್ಟಗೊಳಿಸಲು:

ಮೇಷ ರಾಶಿಯ ಮನೆಯು ನಮ್ಮ ಹಣೆಯ ಮೇಲಿದೆ ಹಾಗಾಗಿ ಅದು ಮಂಗಳ ಗೃಹದ ಕೆಂಪು ಬಣ್ಣದೊಂದಿಗೆ ಸಂಬಂಧ ಹೊಂದಿದೆ. ಇದು ಪ್ರಯೋಜನಕಾರಿ ಎಂದು ನಂಬಲಾಗಿದೆ. ಆದ್ದರಿಂದ ಕೆಂಪು ಬಣ್ಣವನ್ನು ಸಿಂಧೂರಕ್ಕೆ ಅನ್ವಯಿಸಲಾಗುತ್ತದೆ. ಒಳ್ಳೆಯ ಅದೃಷ್ಟವನ್ನು ಮತ್ತು ಉತ್ತಮ ಆರೋಗ್ಯವನ್ನು ನೀಡುವ ಸಲುವಾಗಿ ಹಿಂದೂ ಮಹಿಳೆಯರು ಕೆಂಪು ಬಣ್ಣದ ಸಿಂಧೂರವನ್ನು ಧರಿಸುತ್ತಾರೆ.

ಇದು ಒಂದು ಪ್ರಮುಖ ಸಂಪ್ರದಾಯವಾಗಿದೆ :

5000 ವರ್ಷಗಳಿಗಿಂತ ಅಧಿಕ ಕಾಲದಿಂದಲೂ ಸಿಂಧೂರವನ್ನು ಧರಿಸುವ ಸಂಪ್ರದಾಯವನ್ನು ಅನುಸರಿಸಲಾಯಿತು. ಸೀತೆ ಮತ್ತು ಪಾರ್ವತಿಯಂತಹ ಹಿಂದೂ ದೇವತೆಗಳು ಸಹ – ತಮ್ಮ ಪತಿಯ ಸಂಕೇತವಾಗಿ ಸಿಂಧೂರವನ್ನು ಧರಿಸುತ್ತಿದ್ದರು ಎಂಬ ನಂಬಿಕೆ ಗಾಢವಾಗಿ ಇನ್ನೂ ಭಾರತೀಯರಲ್ಲಿ ಉಳಿದಿದೆ. ಆದರೆ, ಪುರಾತನ ಕಾಲದಿಂದಲೂ ಇದನ್ನು ಅನುಸರಿಸಲಾಗುತ್ತಿದೆ, ಇಂದಿಗೂ ಸಹ ಸಿಂಧೂರ ತಿಲಕವು ಹಿಂದೂ ಧರ್ಮದ ಒಂದು ಪ್ರಮುಖ ಆಚರಣೆಯಾಗಿ ಮಾರ್ಪಟ್ಟಿದೆ.

ದೈಹಿಕ ಅಂಶದ ಕಾರಣದಿಂದ :

ಹಣೆಯ ಮೇಲೆ ಸಿಂಧೂರವನ್ನು ಧರಿಸಲಾಗುತ್ತದೆ ಮತ್ತು ಇದನ್ನು ಅರಿಶಿಣ, ಪಾದರಸ, ಮತ್ತು ಸುಣ್ಣದ ಮಿಶ್ರಣದಿಂದ ತಯಾರಿಸಲಾಗುತ್ತದೆ. ವಿವಾಹಿತ ಮಹಿಳೆಯರ ಹೆಚ್ಚಾದ ಕ್ರಿಯೆಗಳಲ್ಲಿ ತೊಡಗುವುದರ ಹಿಂದಿನ ತಾರ್ಕಿಕ ಆಧಾರಿತ ಅಂಶವೇ ಇದಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಿಂಧೂರವನ್ನು ಪಿಟ್ಯುಟರಿ ಗ್ರಂಥಿಗೆ ನೇರವಾಗಿ ಹಚ್ಚಬೇಕು, ಏಕೆಂದರೆ ಅಲ್ಲಿ ಎಲ್ಲಾ ಭಾವನೆಗಳು ನೆಲೆಸಿರುತ್ತವೆ. ಇದು ಮಹಿಳೆಯರಿಗೆ ತಮ್ಮ ಭಾವನೆಗಳನ್ನು ಉತ್ತಮ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಹೆಚ್ಚಿದ ಒತ್ತಡವನ್ನು ಬಿಡುಗಡೆ ಮಾಡುತ್ತದೆ ಹಾಗೂ ಶಾಂತತ್ವವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ:

ಅವಿವಾಹಿತ ಮಹಿಳೆಯರು ಯಾವುದೇ ಜವಾಬ್ದಾರಿಗಳನ್ನು ಹೊಂದಿಲ್ಲ ಹಾಗೂ ಯಾವುದೇ ಒತ್ತಡವನ್ನು ಹೊಂದಿಲ, ಆದರೆ ಅವರು ವಿವಾಹವಾದಾಗ ಇದ್ದಕ್ಕಿದ್ದಂತೆ ಅವರ ತಲೆಯ ಮೇಲೆ ನೂರಾರು ಜವಾಬ್ದಾರಿಗಳ ಹೊರೆಯು ಬೀಳುತ್ತದೆ ಹಾಗೂ ಇದರಿಂದ ಅವರು ಒತ್ತಡಕ್ಕೊಳಗಾಗಬಹುದು. ಸಿಂಧೂರವನ್ನು ಹಣೆಯ ಮೇಲೆ ಧರಿಸಿದಾಗ ಅದು ಶಾಂತತೆಯನ್ನು ನೀಡುತ್ತದೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ, ಹಿಂದೂ ಧರ್ಮದಲ್ಲಿ ಸಿಂಧೂರವು ಒಂದು ಪ್ರಮುಖವಾದ ಮಹತ್ವವನ್ನು ಹೊಂದಿದೆ ಮತ್ತು ಅತ್ಯಂತ ಪ್ರಮುಖವಾದ ಒಂದು ಪಾತ್ರವನ್ನು ವಹಿಸುತ್ತದೆ. ಇಂದಿನ ಆಧುನಿಕ ಯುಗದಲ್ಲೂ ಕೂಡ ಜನರು ಸಿಂಧೂರದ ಪ್ರಾಮುಖ್ಯತೆಯನ್ನು ನಂಬುತ್ತಾರೆ ಮತ್ತು ವಿವಾಹಿತ ಹಿಂದೂ ಸ್ತ್ರೀಯರು ಅದನ್ನು ಧರಿಸುತ್ತಾರೆ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
248 views
Matrimonial
248 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
292 views
Match Making
292 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
332 views
Astrology in Marriage
332 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category