0 Shares 101 Views
00:00:00
24 Mar

ಪುರುಷರಿಗೆ ತಮ್ಮ ವಿವಾಹಕ್ಕೆ ವೈವಾಹಿಕದ ಜೀವನದ ಪ್ರೊಫೈಲ್ ನ್ನು ಉತ್ತಮಗೊಳಿಸಲು 5 ಪ್ರಮುಖ ಸಲಹೆಗಳು:

September 12, 2017
101 Views

ನೀವು ಮದುವೆಯಾಗಲು ಇಚ್ಚಿಸುತಿದ್ದೀರಾ? ಹಾಗಾದರೆ ಮನ ಮೆಚ್ಚುವ ಬಾಳ ಸಂಗಾತಿಯನ್ನ ಆಯ್ಕೆಮಾಡಲು ಉತ್ತಮವಾದ ಸ್ಥಳ ಮ್ಯಾಟ್ರಿಮೋನಿ ವೆಬ್ಸೈಟ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಬಾಳ ಸಂಗಾತಿಯನ್ನ ಆಯ್ಕೆಮಾಡಲು ಹುಡುಗರು ಮತ್ತು ಹುಡುಗಿಯರು ತಮ್ಮ ಪ್ರೊಫೈಲ್ಗಳನ್ನು ರಚಿಸುತ್ತಿದ್ದಾರೆ. ತಮ್ಮ ಪ್ರೊಫೈಲ್ನಲ್ಲಿ ನೀಡುವ ಮಾಹಿತಿ ನಿಜದಿಂದಿರುವುದು ಉತ್ತಮ.

ಪ್ರೊಫೈಲ್ ಗಳನ್ನು ಉತ್ತಮವಾಗಿ ರಚಿಸಲು ಉತ್ತಮವಾದ ಸಲಹೆಗಳು ಅವುಗಳಲ್ಲಿ ಪ್ರಮುಖವಾಗಿ –

 1. ನಿಮ್ಮ ಬಗ್ಗೆ ನೀವು ಬರೆದಿರುವ ವಿಷಯ ನಿರ್ಧಿಷ್ಟ ಮತ್ತು ನಿಖರವಾಗಿರಿಲಿ:
  ನಿಮ್ಮ ಪ್ರೊಫೈಲ್ ನಲ್ಲಿ ತಿಳಿಸಿರುವ ವಿಷಯ ಸ್ಪಷ್ಟವಾದ ಪದಗಳಿಂದ ಇರುವುದನ್ನ ಖಚಿತಪಡಿಸಿಕೊಳ್ಳಿ. ಅದರಂತೆ ನೀಡಿರುವ ಮಾಹಿತಿ ಸರಿಯಾಗಿದೆಯೇ ಖಚಿತಪಡಿಸಿಕೊಳ್ಳಿ ಜೊತೆಗೆ ನಿಮ್ಮ ಶಿಕ್ಷಣ, ಕುಟುಂಭಸ್ಥರ ಬಗ್ಗೆ, ಮನೆಯ ಆರ್ಥಿಕ ಸ್ಥಿತಿಯ ಬಗ್ಗೆ ನಿಖರವಾಗಿ ತಿಳಿಸಿ. ಇದು ಪ್ರತಿಯೊಬ್ಬರು ಗಮನಿಸಬೇಕಾದ ಪ್ರಮುಖ ಅಂಶಗಳು.
 2. ನಿಮ್ಮ ಜೀವನಶೈಲಿ ಮತ್ತು ಆಸಕ್ತಿಗಳ ಬಗ್ಗೆ ಒಂದು ಕಿರು ಪರಿಚಯ ನೀಡಿ:
  ನಿಮ್ಮಲ್ಲಿ ಆಸಕ್ತಿ ಹೊಂದಿರುವ ಯಾವುದೇ ವ್ಯಕ್ತಿ ಖಂಡಿತವಾಗಿಯೂ ನಿಮ್ಮ ಜೀವನಶೈಲಿ ಮತ್ತು ಆಸಕ್ತಿಗಳ ಬಗ್ಗೆ ತಿಳಿಯಲು ಬಯಸುತ್ತಾರೆ. ಅದಕ್ಕಾಗಿ, ನೀವು ಇದನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಬೇಕು, ಆದರೆ ನೀವು ಬರೆದ ಯಾವುದೇ ಪದಗಳಲ್ಲಿ ಅಪ್ರಾಮಾಣಿಕರಾಗದೆ ಬರೆದಿರುವ ವಿಷಯ ಆಸಕ್ತಿದಾಯಕವಾಗಿ ಬೇಕು ಎoಬುವುದನ್ನ ನೆನಪಿನಲ್ಲಿಡಿ.
 3. ಶಬ್ಧ ಹಾಗೂ ವ್ಯಾಕರಣಕ್ಕೆ ಗಮನ ಕೊಡಿ:
  ನೀವು ಬಳಸುವ ಶಬ್ಧ ಮತ್ತು ವ್ಯಾಕರಣ ಬಳಕೆಯು ತಪ್ಪಾದರೆ, ಅದು ಋಣಾತ್ಮಕವಾದ ವಿಷಯವಾಗುತ್ತದೆ. ಇದು ನಿಮ್ಮ ಕಳಪೆ ಸಂವಹನ ಕೌಶಲ್ಯವನ್ನ ತೋರಿಸುತ್ತದೆ. ಪ್ರತಿಯೊಂದು ಮಹಿಳೆಯು ಸುಂದರ ವ್ಯಕ್ತಿಯನ್ನ ಮಾತ್ರವಲ್ಲ, ಪರಿಪೂರ್ಣ ವ್ಯಕ್ತಿಯನ್ನ ಬಯಸುವರು.
 4. ನಿಮ್ಮ ಬಗ್ಗೆ ಪೂರ್ತಿ ಮಾಹಿತಿ ನೀಡಿ:
  ನಿಮ್ಮ ಪ್ರೊಫೈಲ್ ನಿಮ್ಮ ಬಗ್ಗೆ ಪೂರ್ತಿ ಮಾಹಿತಿ ನೀಡಿ ಇದರಿಂದ ಜನರು ನಿಮ್ಮನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದ. ಅಪೂರ್ಣವಾಗಿ ಪ್ರೊಫೈಲ್ ನ ಮಾಹಿತಿಯಿಂದ ನೋಡುಗರನ್ನ ಗೊಂದಲಮಯ ಮಾಡುತ್ತದೆ ಹೀಗಾಗಿ ಪೂರ್ತಿ ಮಾಹಿತಿ ನೀಡಿ. ಕೆಲವು ಸಮಯದಲ್ಲಿ ಯಾವ ವಿಷಯವನ್ನ ಬರೆಯಬೇಕು ಎಂಬುದರಲ್ಲಿ ತಿಳಿಯದಿದ್ದರೆ ನೀವು ಬೇರೆಯವರ ಸಹಾಯವನ್ನು ತೆಗೆದುಕೊಳ್ಳಬಹುದು ಮತ್ತು ಅವರ ಸಲಹೆಗೆ ಅನುಗುಣವಾಗಿ ಬರೆಯಬೇಕು.
 5. ಇತ್ತೀಚಿನ ಭಾವಚಿತ್ರವನ್ನ ಪ್ರೊಫೈಲ್ ಗೆ ಅಪ್ಲೋಡ್ ಮಾಡಿ:
  ಪ್ರೊಫೈಲ್ ನಲ್ಲಿ ಅಪ್ಲೋಡ್ ಮಾಡುವ ಭಾವ ಚಿತ್ರವು ಉತ್ತಮವಾಗಿರಬೇಕು ಭಾವ ಚಿತ್ರದಲ್ಲಿನ ಮುಖವು ಸರಿಯಾದ ತೋರಿಕೆಯಿಂದಿರಬೇಕು. ಮೊದಲ ಆಕರ್ಷಣೆ ಯಾವಾಗಲೂ ವಿಭಿನ್ನ ಪರಿಣಾಮವನ್ನು ಬೀರುತ್ತದೆ ಮತ್ತು ನೀವು ಭರಿಸಲ್ಪಟ್ಟ ಯಾವುದೇ ಮಾಹಿತಿಯು ಇನ್ನೊಬ್ಬರಿಗೆ ನಿಮ್ಮ ವೈಯಕ್ತಿಕ ಹಾಗೂ ಭಾವಗಳನ್ನ ಗುರುತು ಹಿಡಿಯದಂತಿರಬಾರದು. ಭಾವ ಚಿತ್ರವು ಉತ್ತಮವಾಗಿರಬೇಕು ಹಾಗೂ ಮಸುಕಾಗಿರಬಾರದು.

ಈ ಸುಳಿವುಗಳನ್ನು ಅನುಸರಿಸುವುದರ ಮೂಲಕ, ಎಲ್ಲರ ಗಮನವನ್ನು ಸೆಳೆಯುವಂತಹ ಪ್ರೊಫೈಲ್ ನ್ನು ನೀವು ಖಂಡಿತವಾಗಿಯೂ ರಚಿಸಬಹುದು ಮತ್ತು ನಿಮಗಾಗಿ ಸರಿಯಾದ ಸಂಗಾತಿಯನ್ನ ಪಡೆಯುವಲ್ಲಿ ಕೂಡ ಸಹ ಸಹಾಯವಾಗುತ್ತದೆ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
207 views
Matrimonial
207 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
236 views
Match Making
236 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
241 views
Astrology in Marriage
241 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category