0 Shares 159 Views
00:00:00
24 Mar

ಬಾಲಿವುಡ್‌ನ 5 ವಿಧದ ಲೆಹೆಂಗಾಗಳು

December 18, 2017
159 Views

ಭಾರತೀಯ ಮಹಿಳೆಯರಿಗೆ ಬಾಲಿವುಡ್ ಎಂಬುದು ಕೇವಲ ಒಂದು ಮನರಂಜನೆಯ ಮಾಧ್ಯಮವಲ್ಲ. ಬಾಲಿವುಡ್ ಚಲನಚಿತ್ರಗಳಲ್ಲಿ ತೋರಿಸಲಾಗುವ ಬಟ್ಟೆಯ ಟ್ರೆಂಡ್‌ಗಳು ಮತ್ತು ಜೀವನಶೈಲಿಯು ಮಹಿಳೆಯರ ಮೇಲೆ ಭಾರೀ ಸ್ಪೂರ್ತಿದಾಯಕ ಪ್ರಭಾವ ಬೀರುತ್ತದೆ. ವಿಶೇಷವಾಗಿ, ಬಾಲಿವುಡ್ ಚಲನಚಿತ್ರಗಳಲ್ಲಿ ತೋರಿಸಲಾಗುವ ಲೆಹೆಂಗಾಗಳನ್ನು ಅತ್ಯಂತ ಪ್ರಸಿದ್ಧ ಮತ್ತು ನುರಿತ ವಿನ್ಯಾಸಕಾರರಿಂದ ಡಿಸೈನ್ ಮಾಡಲಾಗಿರುತ್ತದೆ ಹಾಗೂ ಈ ಡಿಸೈನ್ ಗಳು ಎಲ್ಲರ ಪ್ರೀತಿಪಾತ್ರವಾಗಿವೆ! ಭಾರತೀಯ ಸಂಪ್ರದಾಯದಲ್ಲಿ ಲೆಹೆಂಗಾದ ಪ್ರಾಮುಖ್ಯತೆಯು ತುಂಬಾ ಹೆಚ್ಚಾಗಿರುತ್ತದೆ ಮತ್ತು ಹಾಗಾಗಿ, ಮದುವೆಗಳು, ಹಬ್ಬಗಳು, ವಿನೋದ ಕೂಟಗಳು ಮುಂತಾದ ವಿವಿಧ ಸಂದರ್ಭಗಳಲ್ಲಿ ಮಹಿಳೆಯರು ಅತ್ಯುತ್ತಮವಾದ ವಿನ್ಯಾಸಗಳಿಗಾಗಿ ಹುಡುಕುತ್ತಿರುತ್ತಾರೆ. ಬಾಲಿವುಡ್ ಚಲನಚಿತ್ರಗಳಲ್ಲಿ ಲೆಹೆಂಗಾಗಳು ಅತ್ಯಂತ ಪರಿಪೂರ್ಣವಾದವು ಎಂದು ಕಂಡುಕೊಳ್ಳಲು ಹೆಚ್ಚು ಆಸಕ್ತಿದಾಯಕವಾದ ಅಂಶಗಳು ಯಾವುವು? ಬಾಲಿವುಡ್ ಚಲನಚಿತ್ರಗಳಿಂದ ಸ್ಫೂರ್ತಿ ಪಡೆದ ವಿವಿಧ ರೀತಿಯ ಲೆಹೆಂಗಾಗಳು ಇಲ್ಲಿವೆ, ನೀವು ಒಮ್ಮೆ ಅವುಗಳನ್ನು ಪ್ರಯತ್ನಿಸಿ ನೋಡಬೇಕು!

ಮೀನಿನ ಬಾಲದ ಲೆಹೆಂಗಾಗಳು:

ಮರಳು ಗಡಿಯಾರದ ಆಕಾರವಿರುವ ಕನ್ಯೆಯರ ಅಥವಾ ತೆಳುವಾದ ಮೈಕಟ್ಟನ್ನು ಹೊಂದಿರುವ ಬಾಲೆಯರಿಗೆ ಮೀನಿನ ಬಾಲದ ಲೆಹೆಂಗಾಗಳು ತುಂಬಾ ಅದ್ಭುತವಾಗಿ ಕಾಣುವಂತೆ ಮಾಡುತ್ತವೆ ಮತ್ತು ಪರಿಪೂರ್ಣವಾಗಿರುತ್ತವೆ. ಈ ಬಗೆಯ ಮೀನಿನ ಬಾಲದ ಲೆಹೆಂಗಾಗಳನ್ನು ವಿಶೇಷವಾಗಿ ಮತ್ಸ್ಯಕನ್ಯೆ ಲೆಹೆಂಗಾಗಳೆಂದು ಸಹ ಕರೆಯಲಾಗುತ್ತದೆ, ಅವು ವಿಶಿಷ್ಟವಾಗಿ ಮೇಲ್ಭಾಗದಿಂದ ದೇಹದ ರಚನೆಯ ತ್ವಚೆಗೆ ತಕ್ಕಂತೆ ಹೊಂದಿಕೊಂಡಿರುತ್ತವೆ ಅಥವಾ ತಳಭಾಗದಿಂದ ಅವುಗಳನ್ನು ಸ್ವಲ್ಪಮಟ್ಟಿಗೆ ಕಣ್ಣುಕೋರೈಸುವಂತೆ ಮಾಡಲಾಗಿರುತ್ತದೆ. ಇದು ನಿಮ್ಮ ಸೊಂಟವನ್ನು ಸರಿಯಾಗಿ ಬಳಸಿಕೊಳ್ಳುತ್ತದೆ ಮತ್ತು ಈ ಲೆಹೆಂಗಾಗಳು ನಿಮ್ಮ ದೇಹಕ್ಕೆ ಮತ್ಸ್ಯಕನ್ಯೆಯ ಆಕಾರವನ್ನು ನೀಡುತ್ತವೆ! ಇದರ ಪರಿಪೂರ್ಣ ಆಕಾರ ಮತ್ತು ಸೊಬಗಿನಿಂದಾಗಿ ಇತ್ತೀಚನ ದಿನಗಳಲ್ಲಿ ಈ ಶೈಲಿಯು ಒಂದು ಟ್ರೆಂಡ್ ಆಗಿರುತ್ತದೆ.

ಸ್ಟ್ರೇಟ್‌ಕಟ್ ಲೆಹೆಂಗಾ:

ನಿಮಗೆ ಕಣ್ಣು ಕೋರೈಸುವಂತಹ ಅಥವಾ ಹೆಚ್ಚು ಫಿಟ್ಟಿಂಗ್ ಇರುವಂತಹ ಲೆಹೆಂಗಾಗಳು ಬೇಡವೆಂದಾದಲ್ಲಿ, ಸ್ಟ್ರೇಟ್‌ಕಟ್ ಲೆಹೆಂಗಾಗಳನ್ನು ಆಯ್ಕೆಮಾಡಿಕೊಂಡು ಅದ್ಭುತವಾಗಿ ಕಾಣುವಂತೆ ಮಾಡಬಹುದು. ಸ್ಟ್ರೇಟ್‌ಕಟ್ ಲೆಹೆಂಗಾಗಳು ಕೆಳಭಾಗದಲ್ಲಿ ಸ್ವಲ್ಪಮಟ್ಟಿಗೆ ಸಡಿಲವಾಗಿರುತ್ತವೆ, ಅದಲ್ಲದೆ ಅವುಗಳು ಸೊಂಟದ ಆಕಾರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತವೆ. ಈ ಬಗೆಯ ಲೆಹೆಂಗಾಗಳನ್ನು ಹೊಲಿಯುವುದು ನಿಜಕ್ಕೂ ಶ್ರಮದಾಯಕವಾಗಿರುತ್ತದೆ, ಅವು ನಿಮ್ಮ ಚರ್ಮಕ್ಕೆ ಅಂಟಿಕೊಳ್ಳುತ್ತವೆ ಮತ್ತು ಸುಲಭವಾಗಿ ಕಣ್ಣುಕೋರೈಸುವಂತೆ ಇವು ಹೊಳೆಯುವುದಿಲ್ಲ. ಸಾಮಾನ್ಯವಾಗಿ, ಮಹಿಳೆಯರ ದೇಹಾಕಾರಕ್ಕೆ ಮತ್ತು ಅಂಕುಡೊಂಕಿಗೆ ತಕ್ಕಂತೆ ರಚಿಸಲ್ಪಟ್ಟು ಅವು ಸರಾಗವಾಗಿ ಓಡಾಡುವಂತೆ ಮಾಡುತ್ತವೆ. ಈ ಲೆಹೆಂಗಾಗಳೊಂದಿಗೆ ಬ್ಲೌಸ್ ಮತ್ತು ಉದ್ದನೆಯ ದುಪ್ಪಟ್ಟಾಗಳು ಜೊತೆಗೂಡಿ ಪೂರಕವಾಗಿರುತ್ತವೆ, ಇದು ಒಂದು ಅಮೋಘವಾದ ಲೆಹೆಂಗಾದ ಆಯ್ಕೆಯಾಗದೆ ಮತ್ತು ನಿಮ್ಮನ್ನು ಅಸಾಧಾರಣವಾಗಿ ಕಾಣುವಂತೆ ಮಾಡುತ್ತದೆ!

ಕಣ್ಣುಕೋರೈಸುವಂತೆ ಹೊಳೆಯುವ ಲೆಹೆಂಗಾ:

ಅಮೋಘವಾದ ಲೆಹೆಂಗಾಗಳು ಸುದೀರ್ಘವಾಗಿ ಕಣ್ಣುಕೋರೈಸುವಂತೆ ಇರುತ್ತವೆ ಮತ್ತು ನೋಡುಗರನ್ನು ಬೆರುಗುಗೊಳಿಸುತ್ತವೆ. ಸಾಮಾನ್ಯವಾಗಿ ಕಣ್ಣುಕೋರೈಸುವ ಲೆಹೆಂಗಾಗಳನ್ನು ಹೊಟ್ಟೆಯ ಕೆಳಗೆ ಧರಿಸಲಾಗುತ್ತದೆ ಮತ್ತು ವೃತ್ತಾಕಾರದ ವಿಶಾಲವಾದ ಕಟ್ ಆಕಾರದಲ್ಲಿ ಸುಂದರವಾಗಿ ಕಾಣುವಂತೆ ಮಾಡಲಾಗಿರುತ್ತದೆ. ರಾಮಲೀಲಾದಲ್ಲಿ ದೀಪಿಕಾ ಪಡಕೋಣೆ ಅಮೋಘವಾಗಿ ಕಾಣುವ ಲೆಹೆಂಗಾವನ್ನು ಧರಿಸಿದ್ದಳು ನೆನಪಿದೆಯೇ? ಅವು ಬಂಧಾನಿ ಫ್ಯಾಬ್ರಿಕ್ ನಿಂದ ಮತ್ತು ಕ್ಲಾಸಿಕ್ ಎಂಬ್ರಾಯ್ಡರಿಯ ಫಿನಿಶ್ ಇರುವಂತಹ ಕಣ್ಣುಕೋರೈಸುವ ಲೆಹೆಂಗಾದ ಮಾದರಿಗಳಾಗಿದ್ದವು!

A – ಲೈನಿನ ಲೆಹೆಂಗಾ:

A – ಲೈನಿನ ಲೆಹೆಂಗಾಗಳು ದುಪ್ಪಟ್ಟಾ ಮತ್ತು ಸಣ್ಣ ಗಾತ್ರದ ಬ್ಲೌಸ್‌ಗಳಿಂದ ಸಂಪೂರ್ಣಗೊಳಿಸುತ್ತವೆ. A-ಲೈನಿನ ಲೆಹೆಂಗಾಗಳು ಅತ್ಯಂತ ಉದ್ದವಾಗಿರುತ್ತವೆ ಮತ್ತು ಅತ್ಯಾಕರ್ಷಕವಾದ ಅಂಚುಗಳಿಂದ ಓಲಾಡುವ ಲೆಹೆಂಗಾಗಳಾಗಿ ಧರಿಸಿದವರಿಗೆ ಸರಾಗವಾಗಿ ಓಡಾಡಲು ಅನುಕೂಲಕರವಾಗಿರುತ್ತವೆ. ಲೆಹೆಂಗಾದಲ್ಲಿ ತೆಗೆದುಕೊಂಡ ನಿರಿಗೆಗಳ ಸಂಖ್ಯೆಯು ಸ್ವಲ್ಪ ಕಡಿಮೆಯಿರುತ್ತದೆ ಮತ್ತು ವಿಶಾಲವಾಗಿರುತ್ತವೆ. ಇದು ನಿಮಗೆ ಕಣ್ಣುಕೋರೈಸುವ ಫ್ಲೇರ್ ಆದ ಕೆಳಭಾಗವನ್ನು ನೀಡುತ್ತದೆ ಮತ್ತು ಒಂದುವೇಳೆ ನೀವು ಪಿಯರ್ ಹಣ್ಣಿನ ಆಕಾರವನ್ನು ಹೊಂದಿದ್ದಲ್ಲಿ, ಲೆಹೆಂಗಾದ ಅತ್ಯುತ್ತಮ ವಿಧವಾಗಿದೆ, ಇದು ನಿಮಗೆ ಅದ್ಭುತ ಕಾಣುವಂತೆ ಮಾಡುತ್ತದೆ! ಹಮ್ಟಿ ಶರ್ಮಾ ಕಿ ದುಲ್ಹಾನಿಯಾ ಸಿನಿಮಾದಲ್ಲಿ ಆಲಿಯಾ ಭಟ್ ಧರಸಿದ್ದಂತಹ ಲೆಹೆಂಗಾಗಳು ಸಾಕಷ್ಟು ಸಾಂಪ್ರದಾಯಿಕ ಮತ್ತು ಬೆರಗುಗೊಳಿಸುವಂತಹ ನೋಟವನ್ನು ಹೊಂದಿದ್ದವು. ಅವು A – ಲೈನ್ ಲೆಹೆಂಗಾಗಳಾಗಿದ್ದವು.

ಷರಾರಾಕಟ್ ಲೆಹೆಂಗಾ:

ಷರಾರಾಕಟ್ ಲೆಹೆಂಗಾಗಳು ಅತ್ಯಂತ ಸಾಂಪ್ರದಾಯಿಕ ಮತ್ತು ವ್ಯಾಪಕವಾಗಿ ಬಾಲಿವುಡ್ ಚಲನಚಿತ್ರಗಳಲ್ಲಿ ಕಂಡುಬರುವಂಥ ಲೆಹೆಂಗಾಗಳಾಗಿವೆ. ಈ ಬಗೆಯ ವಿನ್ಯಾಸದ ಲೆಹೆಂಗಾಗಳನ್ನು ಅನನ್ಯವಾಗಿ ವಿನ್ಯಾಸಗೊಳಿಸಲಾಗಿರುತ್ತದೆ, ಇದು ಬಾಟಂನಲ್ಲಿ ಟ್ರೌಷರ್ ಶೈಲಿಯನ್ನು ಮತ್ತು ಸುಂದರವಾದ ಬ್ಲೌಸ್‌ನಿಂದ ಕೂಡಿರುತ್ತದೆ. ಬ್ಲೌಸ್‌ನ ಗಾತ್ರ ಮತ್ತು ಶೈಲಿಯು ಅವರವರ ಆಯ್ಕೆಯ ಪ್ರಕಾರ ಬದಲಾಗಬಹುದು! ದುಪ್ಪಟ್ಟಾದಿಂದ ಪೂರಕವಾಗಿರುವ, ಷರಾರಾಕಟ್ ಲೆಹೆಂಗಾಗಳನ್ನು ನೋಡಲು ಅದ್ಭುತವಾಗಿರುತ್ತವೆ. ಕಭೀ ಖುಷಿ ಕಭಿ ಗಮ್‌ ಚಲನಚಿತ್ರದಲ್ಲಿ ಕರೀನಾ ಕಪೂರ್‌ಳ ಧರಿಸಿದ್ದ ಪ್ರಸಿದ್ಧ ಲೆಹೆಂಗಾದ ವಿನ್ಯಾಸವು ಷರಾರಾಕಟ್ ಲೆಹೆಂಗಾವಾಗಿತ್ತು, ಇದು ಲೆಹಂಗಾಗಳ ಶೈಲಿಯನ್ನು ಸರಳವಾದ ರೀತಿಯಲ್ಲಿ ಅಮೂಲಾಗ್ರವಾಗಿ ಬದಲಾಯಿಸಿತ್ತು!

ಇವುಗಳು ಬಾಲಿವುಡ್ ನಿಂದ ಪ್ರೇರಿತವಾದ ಅದ್ಭುತ ಶೈಲಿಯ ಮತ್ತು ಪ್ರಸಿದ್ಧ ವಿನ್ಯಾಸಕ ಲೆಹೆಂಗಾಗಳಾಗಿವೆ, ಇವುಗಳನ್ನು ನೀವು ಯಾವುದೇ ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ಸಮಾರಂಭದ ಸಂದರ್ಭಗಳಲ್ಲಿ ಧರಿಸಿ ಪ್ರಯತ್ನಿಸಬಹುದು!

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
207 views
Matrimonial
207 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
236 views
Match Making
236 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
241 views
Astrology in Marriage
241 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category