0 Shares 141 Views
00:00:00
24 Mar

ಈ ವರ್ಷದ ಅತ್ಯುತ್ತಮ ಮದುವೆಗಾಗಿ 5 ನಿರ್ಣಯಗಳು !

March 15, 2018
141 Views

ವಿವಾಹವೆಂಬುವುದು ಹಲವಾರು ಅಂಶಗಳ ಮೇಲೆ ಆಧಾರವಾಗಿ ನಿಂತು ಕುಸಿಯದಂತೆ ತಡೆಯುತ್ತದೆ. ಒಂದು ಉತ್ತಮ ವಿವಾಹದ ಸಂಬಂಧವನ್ನು ಉಳಿಸಿ ಬೆಳೆಸುವ ಸಲುವಾಗಿ ಇಬ್ಬರೂ ಸಂಗಾತಿಗಳು ಕೊಡುಗೆ ನೀಡಬೇಕಾದ ಅಗತ್ಯವಿದೆ. ಅದು ಒಬ್ಬರಿಗೊಬ್ಬರ ಮೇಲಿರುವ ದೃಢವಿಶ್ವಾಸ, ತಿಳುವಳಿಕೆ, ನಂಬಿಕೆ ಮತ್ತು ಪ್ರೀತಿಯನ್ನು ಆಧರಿಸಿರುತ್ತದೆ. ಈ ಪ್ರೀತಿಯೆಂಬ ಪಥದಲ್ಲಿ ಒಟ್ಟಾಗಿ ನೀವು ಸಾಗುತ್ತಾ ಹೋದಂತೆ ನಿಮಗೆ ನೀವೇ ಏನೋ ಹೊಸ ಸಂಗತಿಯನ್ನು ಕಲಿಯುತ್ತಾ ಹೋಗುತ್ತೀರಿ ಎಂಬುದನ್ನು ಸ್ವತಃ ನೀವೇ ಖಚಿತಪಡಿಸಬೇಕು. ಒಂದು ಉತ್ತಮ ವಿವಾಹ ಬಂಧವನ್ನು ಬೆಸೆಯಬೇಕಾದರೆ, ಕೆಲವು ನಿರ್ಣಯಗಳನ್ನು ಇಬ್ಬರೂ ಕೂಡಿ ಮಾಡಬೇಕಾದ ಅಗತ್ಯವಿದೆ, ಹಾಗೂ ಆ ಒಂದು ವಿವಾಹ ಬಂಧವು ಶಾಶ್ವತವಾದುದು ಎಂದ ಖಚಿತಪಡಿಸಿಕೊಳ್ಳಬೇಕಾದ ಅಗತ್ಯವಿದೆ.

1. ನೀವು ಪರಸ್ಪರ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತೀರಿ:

ನೀವು ಮಾಡಬೇಕಾದ ಯಾವುದೇ ಪ್ರಮುಖ ನಿರ್ಣಯಗಳನ್ನು ನೀವಿಬ್ಬರೂ ಒಟ್ಟಿಗೆ ತೆಗೆದುಕೊಳ್ಳಬೇಕೆಂದು ಖಚಿತಪಡಿಸಿಕೊಳ್ಳಿ. ಅಂದರೆ ಒಬ್ಬರು ನಿರ್ಧಾರವನ್ನು ತೆಗೆದುಕೊಳ್ಳುವುದು, ಮತ್ತೊಬ್ಬರು ಅದರ ಬಗ್ಗೆ ಸಂಗಾತಿಗೆ ಕೇವಲ ಮಾಹಿತಿ ನೀಡುವುದು ಎಂಬ ರೀತಿಯಲ್ಲಿ ಇರಬಾರದು.

2. ಎಲ್ಲವನ್ನೂ ಹಂಚಿಕೊಳ್ಳಿ:

ನಾವೀಗ ಮದುವೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವಾಗ, ಅದು ದೈನಂದಿನ ಮನೆಗೆಲಸದ ಬಗ್ಗೆಯೂ ಸಹ ಎಂಬ ವಿಚಾರವನ್ನು ಹೊಂದಿದೆ. ಅಂದರೆ ಪತಿಯು ಅಡುಗೆಮನೆಯಲ್ಲಿರುವ ತನ್ನ ಪತ್ನಿಗೆ ಸಹಾಯ ಮಾಡಬೇಕು ಹಾಗೂ ಪತ್ನಿಯೂ ಸಹ ತನ್ನ ಪತಿಯು ನಿರ್ವಹಿಸುವಂತೆ ಕೆಲವು ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು ಮತ್ತು ಪ್ರಯತ್ನಿಸಬೇಕು. ದಿನನಿತ್ಯದ ಮನೆಗೆಲಸಗಳನ್ನು ಹೊರತುಪಡಿಸಿ, ನಿಮ್ಮ ಕೆಲಸಕ್ಕೆ ಸಂಬಂಧಿಸಿದ ವಿಷಯಗಳನ್ನು ನೀವಿಬ್ಬರೂ ಪರಸ್ಪರ ಖಚಿತಪಡಿಸಿಕೊಳ್ಳಿ ಹಾಗೂ ನಿಮ್ಮಿಬ್ಬರಲ್ಲಿ ಯಾರಾದರೊಬ್ಬರು ಎದುರಿಸುತ್ತಿರುವ ಯಾವುದೇ ಸಮಸ್ಯೆಗಳನ್ನು ಒಟ್ಟಿಗೆ ಕುಳಿತು ನೀವೇ ವಿಚಾರವಿನಿಮಯ ಮಾಡಿಕೊಳ್ಳಬೇಕು.

3. ಪರಸ್ಪರ ನಿಮ್ಮ ನಂಬಿಕೆಯನ್ನು ಹೆಚ್ಚಿಸಿ:

ನಂಬಿಕೆ ಎಂಬುದು ಯಾವುದೇ ವಿವಾಹ-ಬಂಧದ/ಅನುಬಂಧದ ಪ್ರೇರಕ ಶಕ್ತಿಯಾಗಿದೆ. ಆದ್ದರಿಂದ, ನಿಮ್ಮ ಸಂಬಂಧದಲ್ಲಿ ನೀವು ಯಥೇಚ್ಛವಾದ ಪ್ರಮಾಣದಲ್ಲಿ ನಂಬಿಕೆಯನ್ನು ಹೊಂದಿದ್ದರೂ ಸಹ, ನೀವು ಇನ್ನೂ ಕೂಡ ದೃಢ ವಿಶ್ವಾಸವನ್ನು ಇರಿಸಲು ಬಯಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ, ನೀವು ಪರಸ್ಪರ ಬಗ್ಗೆ ಹೆಚ್ಚು ನಂಬಿಕೆಯನ್ನು ಹೊಂದಿದ್ದೀರಿ, ಇದರಿಂದಾಗಿ, ಕೊನೆಯವರೆಗೂ ಒಂದು ಒಡೆಯಲಾಗದ ದೃಢ ಸಂಬಂಧವನ್ನು ಹೊಂದಿದ್ದೀರಿ.

4. ಯಾವುದೇ ವಾದಗಳಿಗೆ ಜಾಗವಿಲ್ಲ/ಆಗುವುದಿಲ್ಲ ಎಂದು ಹೇಳಿ:

ಅಲ್ಲದೆ, ಒಂದು ಸಂಬಂಧದಲ್ಲಿ ಯಾವುದೇ ಜಗಳ-ಬೈಗುಳ-ಹೋರಾಟವಿಲ್ಲದೇ ಇದ್ದರೆ ತುಂಬಾ ಕಷ್ಟವಾಗಬಹುದು. ಆದರೆ, ಇಬ್ಬರೂ ಸಂಗಾತಿಗಳು ಅರ್ಥಮಾಡಿಕೊಳ್ಳಬೇಕಾದ ವಿಚಾರವೆಂದರೆ ತಮ್ಮಿಬ್ಬರ ನಡುವಿನ ವಾದ-ವಿವಾದವನ್ನು ಎಷ್ಟು ದೂರ ತೆಗೆದುಕೊಂಡು ಹೋಗಬೇಕು. ತಾವಿಬ್ಬರೂ ವಾದವನ್ನು ಯಾವ ಘಟ್ಟದಲ್ಲಿ ನಿಲ್ಲಿಸಬೇಕು/ಅಂತ್ಯ ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಆದಷ್ಟು ಬೇಗ ತಮ್ಮ ಜಗಳಕ್ಕೆ ಒಂದು ಇತ್ಯರ್ಥಗೊಳಿಸಬೇಕಾಗಿದೆ ಎಂಬುದನ್ನು ಅವರು ತಿಳಿದಿರಬೇಕು ಏಕೆಂದರೆ, ವಾದವನ್ನು ಗೆಲ್ಲುವುದಕ್ಕಿಂತಲೂ ತಮ್ಮಿಬ್ಬರ ನಡುವಿನ ವೈವಾಹಿಕ-ಸಂಬಂಧವು ಒಂದು ಪವಿತ್ರವಾದ ಘಟ್ಟದಲ್ಲಿ ಇದೆ ಎಂಬುದು ಹೆಚ್ಚು ಮುಖ್ಯ.

5. ಸುಖದುಃಖದಂತಹ ಎಲ್ಲಾ ನೋವುನಲಿವುಗಳಲ್ಲೂ ಪರಸ್ಪರ ಒಬ್ಬರಿಗೊಬ್ಬರು ಆಸರೆಯಾಗಿ ನಿಂತುಕೊಳ್ಳಿ:

ಏನೇ ಬಂದರೂ ನಾವಿಬ್ಬರೂ ಪರಸ್ಪರ ಒಂದಾಗಿ ಎದುರಿಸುತ್ತೇವೆ ಎಂಬ ನಿರ್ಣಯವನ್ನು ಇಬ್ಬರೂ ದಂಪತಿಗಳು ಮಾಡಬೇಕು. ಯಾವುದೇ ಸಂದರ್ಭ-ಸನ್ನಿವೇಶಗಳಲ್ಲಿ ನೀವು ಒಬ್ಬರನೊಬ್ಬರು ಬೆಂಬಲಿಸಬೇಕಾದ ಅಗತ್ಯವಿದೆ. ನಿಮ್ಮ ಪತಿಯು ತಾನು ಮಾಡುವ ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರಬಹುದು ಅಥವಾ ನಿಮ್ಮ ಪತ್ನಿಯು ಮನೆಯಲ್ಲಿ ಅಥವಾ ಬೇರೆಯಾವುದೋ ತೊಂದರೆಯನ್ನು ಎದುರಿಸಬೇಕಾಗಬಹುದು ಅದೂ ಹಣಕಾಸಿನ ಬಿಕ್ಕಟ್ಟೂ ಸಹ ಆಗಿರಬಹುದು. ಆಗ ಇಬ್ಬರೂ ಒಬ್ಬರಿಗೊಬ್ಬರು ಹೆಗಲುಕೊಟ್ಟು ಬೆಂಬಲಿಸಬೇಕಾದ ಅಥವಾ ಆಸರೆ ನೀಡಬೇಕಾದ ಅಗತ್ಯವಿದೆ. ಹೀಗೆ ಸಮಸ್ಯೆಗಳಿಂದ ಹೊರಬರಲು ನೀವು ನಿಮ್ಮ ಸಂಗಾತಿಗೆ ಸಹಾಯ ಮಾಡಿದಿರಿ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಹಾಗಾಗಿ ನಿಮ್ಮ ಸಂಗಾತಿಯು ಜೀವನದಲ್ಲಿ ಎಲ್ಲ ಅಡಚಣೆಗಳನ್ನೂ ದಾಟಿ ಹೊರಬರಲು ನೀವು ಸಹಾಯ ಮಾಡುತ್ತೀರೆಂದು ನೀವು ಖಚಿತಪಡಿಸಿಕೊಳ್ಳಬೇಕು.

ಒಟ್ಟಾರೆಯಾಗಿ, ನಿಮ್ಮ ವೈವಾಹಿಕ-ಸಂಬಂಧವು ಸಾಗುವ ಪ್ರತಿಯೊಂದು ದಿನದೊಂದಿಗೆ ಬಲಗೊಳ್ಳುತ್ತಾ ಹೋಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಒಂದು ನಿರ್ಣಯವನ್ನು ಮಾಡಬೇಕಾಗಿದೆ. ನೀವು ಇಬ್ಬರೂ ಯಾವಾಗಲೂ ಪರಸ್ಪರ ಒಂದಾಗಿಯಿದ್ದರೆ ಮಾತ್ರ ಇದು ಸಾಧ್ಯವಾಗಲಿದೆ. ನೀವು ಪರಸ್ಪರರನ್ನು ಅರ್ಥಮಾಡಿಕೊಳ್ಳಬೇಕಾದರೆ, ಮೊದಲು ನಿಮ್ಮಿಬ್ಬರ ನಡುವೆ ನೆರವಿನ ಹಸ್ತ ಚಾಚುವ ಗುಣವಿರಬೇಕು ಮತ್ತು ಅಗತ್ಯಕ್ಕಿಂತ ಹೆಚ್ಚಾಗಿ ಒಬ್ಬರಿಗೊಬ್ಬರು ಪ್ರೀತಿಸಬೇಕು. ನಿಮಗೆ ಈ ವರ್ತನೆ ಇದ್ದಲ್ಲಿ ಮಾತ್ರ, ಮುಂದೆ ನಿಮ್ಮ ಕೈಯಲ್ಲಿ ಒಂದು ದೃಢವಾದ, ಸುಖಮಯ ಸಂತೋಷಭರಿತವಾದ ಸಂಬಂಧವನ್ನು ನೀವೇ ಪಡೆಯಲಿದ್ದೀರಿ. ನಿರ್ಣಯ ಅಥವಾ ತೀರ್ಮಾನಗಳನ್ನು ಜನರು ಮುರಿಯಲೆಂದೇ ಮಾಡಿದ್ದಾರೆಂದ ಜನ ಹೇಳುತ್ತಾರೆ ಆದರೆ ನಿಮಗೆ ನಿಮ್ಮ ವೈವಾಹಿಕ-ಬಂಧನವು ಯಾವುದೇ ರೀತಿಯಲ್ಲೂ ನರಳಬಾರದು ಎಂದು ಬಯಸಿದ್ದರೆ, ಆಗ ನೀವು ಮಾತ್ರ ಯಾವುದೇ ನಿರ್ಣಯಗಳನ್ನು ಮುರಿಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
206 views
Matrimonial
206 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
234 views
Match Making
234 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
240 views
Astrology in Marriage
240 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category