0 Shares 180 Views
00:00:00
24 Mar

ಲೆಹೆಂಗಾ ಶೈಲಿಯನ್ನು ಆರಿಸಿಕೊಳ್ಳಲು ನಿಮಗಾಗಿ 5 ಆಯ್ಕೆಗಳು

December 18, 2017
180 Views

ವಿವಾಹ ಮಹೋತ್ಸವವು ನಿಮ್ಮ ಆಮಂತ್ರಣ ಪತ್ರಿಕೆಗಳಲ್ಲಿ ಮುದ್ರಣವಾಗಿದೆ. ನೀವು ಇನ್ನೇನೂ ಸ್ವಲ್ಪ ಸಮಯದಲ್ಲೇ ಒಬ್ಬ ವಧುವಾಗಿ ಕಂಗೊಳಿಸಲಿದ್ದೀರಿ. ನಿಮ್ಮ ವಾಟ್ಸ್ಅಪ್ ಬೀಪ್ ಸೌಂಡ್ ಮಾಡುವುದನ್ನು ನಿಲ್ಲಿಸಿರುವುದಿಲ್ಲ. ಬಹುತೇಕ ದಿನಪೂರ್ತಿ ’ವಿಶೇಷವಾದ ಒಬ್ಬರಿಂದ’ ನೀವು ಕರೆಗಳನ್ನು ಪಡೆಯುತ್ತೀರಿ. ನಿಮ್ಮ ಮುಖವು ಸಂತೃಪ್ತಿಯಿಂದಾಗಿ ಗುಲಾಬಿ ಬಣ್ಣದಿಂದ ಹೊಳೆಯುತ್ತಿದೆ. ಹಾಗೂ, ನಿಮ್ಮ ನಗುವಿನ ಆ ತುಟಿಗಳಲ್ಲಿ ಅಡಗಿರುವ ಮಂದಹಾಸವನ್ನು ನೀವು ಓದುತ್ತಿದ್ದಂತೆ, ಅವುಗಳು ಕಂಪಿಸುತ್ತಿರುತ್ತವೆ. ಸೇರಿಸುವ ಅಗತ್ಯವಿಲ್ಲ, ಮದುವೆಯ ಬಂಧದ ಮೂರು ಗಂಟುಗಳನ್ನು ಕಟ್ಟುವುದಕ್ಕೆ ಸಂಬಂಧಿಸಿದಂತೆ, ಪ್ರತಿಯೊಂದು ಅಂಶವನ್ನು ನೀವು ಓದುತ್ತೀರಿ ಅಥವಾ ವೀಕ್ಷಿಸುತ್ತೀರಿ. ಹಾಗೂ ಸಹಜವಾಗಿ, ನಿಮ್ಮ ಆ ವಿಶೇಷ ದಿನದಂದು ಮತ್ತು ಮುಂಚಿತವಾಗಿ ನಡೆಯುವ ಸಂದರ್ಭಗಳಲ್ಲಿ ಒಬ್ಬ ದೀವಾದವರಂತೆ ಕಾಣಬೇಕೆಂದು ನೀವು ಬಯಸುತ್ತೀರಿ. ಆದ್ದರಿಂದ, ನಿಮ್ಮ ವಿವಾಹ ಮಹೋತ್ಸವದ ವಧುವಿನ ವೇಷಭೂಷಣದಲ್ಲಿ ಇರಲು ನೀವು ನಿರ್ಧರಿಸಿದ್ದೀರಾ? ನೀವು ಎಂದಾದರೂ ಲೆಹೆಂಗಾ ಎಂದು ಹೇಳಿದ್ದೀರಾ! ಆದರೆ, ಯಾವ ವಿವಿಧ ಸಮಾರಂಭಗಳಲ್ಲಿ ಧರಿಸಲು ಲೆಹೆಂಗಾದ ಯಾವ ಶೈಲಿಯನ್ನು ಆಯ್ಕೆ ಮಾಡಬೇಕೆಂದು ನೀವು ಯೋಜನೆ ರೂಪಿಸಿದ್ದೀರಿ? ವಾಸ್ತವವಾಗಿ, ಲಭ್ಯವಿರುವ ಲೆಹೆಂಗಾದಲ್ಲಿ ಬಹುಮುಖ ಪ್ರತಿಭೆಯ ಶೈಲಿಯು ಇರುತ್ತದೆ. ಸಂಪೂರ್ಣವಾಗಿ ಓದಿರಿ ಮತ್ತು ನಿಮ್ಮ ದೇಹಾಕಾರ ಮತ್ತು ದೇಹಪ್ರಕೃತಿಯ ಪ್ರಕಾರಕ್ಕೆ ಅನುಗುಣವಾಗಿ ಹೊಂದಿಕೆಯಾಗುವ ಲೆಹೆಂಗಾ ಜೋಡಿಯ ಲಭ್ಯವಿದೆ.

ಕಣ್ಣುಕೋರೈಸುವಂತೆ ಹೊಳೆಯುವ ಲೆಹೆಂಗಾ:

ಇದು ಲೆಹೆಂಗಾದ ಒಂದು ಸಾಂಪ್ರದಾಯಿಕ ಶೈಲಿಯಾಗಿದೆ. ಇದು ಅರಳೆಯಲ್ಲಿ ಸಂಪೂರ್ಣವಾದ ಒಂದು ವೃತ್ತವನ್ನು ರಚಿಸುತ್ತದೆ ಹಾಗೂ ಒಂದು ವಿಶಾಲವಾದ ಕಣ್ಣುಕೋರೈಸುವ ಬೆಳಕನ್ನು ಹೊಂದಿದೆ. ಲೆಹೆಂಗಾದ ಘನ ಅಳತೆಗೆ ಹಲವಾರು ಮಡಿಕೆಗಳು ಸೇರುತ್ತವೆ. ನಿಮ್ಮ ಮದುವೆಯ ವೇಷಭೂಷಣದಂತೆ, ನೀವು ಇದನ್ನು ಆಯ್ಕೆ ಮಾಡುತ್ತಿದ್ದರೆ, ಅದು ಹೆಚ್ಚು ಕಸೂತಿಯ ಕೆಲಸದಿಂದ ತುಂಬಿ ಅಲಂಕರಿಸಲ್ಪಟ್ಟಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದು ಆಪಲ್, ಪಿಯರ್, ಹವರ್‌ಗ್ಲಾಸ್ ಮತ್ತು ಆಯತಾಕಾರದ ದೇಹಕ್ಕೆ ಸೂಕ್ತವಾಗಿದೆ. ಮೆಹೆಂದಿ ಸಮಾರಂಭಕ್ಕೆಂದೇ ನೀವು ಇದನ್ನು ಧರಿಸಬಹುದು.

ಮತ್ಸ್ಯಕನ್ನಿಕೆಯಂತಹ ಲೆಹೆಂಗಾ:

ಹೆಸರಿನಿಂದಲೇ ಸ್ಪಷ್ಟವಾಗಿರುವಂತೆ, ಈ ಲೆಹೆಂಗಾಗಳು ಮೊಣಕಾಲಿನ ಭಾಗದಲ್ಲಿ ತುಂಬಾ ಬಿಗಿಯಾಗಿರುತ್ತವೆ. ಅವುಗಳು ಕಣಕಾಲಿನ ಹಿಂಭಾಗದಿಂದ ಜಗಮಗನೇ ಪ್ರಕಾಶಿಸುತ್ತವೆ ಹಾಗೂ ಒಂದು ಮೀನಿನ ಬಾಲದ ಮಾದರಿಯನ್ನು ಹೋಲುತ್ತದೆ. ಆದ್ದರಿಂದ ಇವುಗಳನ್ನು ಮೀನಿನ ಬಾಲದ ಲೆಹೆಂಗಾ ಎಂದು ಸಹ ಕರೆಯಲಾಗುತ್ತದೆ.

ಬಣ್ಣದ ಬಟ್ಟೆಯ ತುಂಡುಗಳಿಂದ ಅಲಂಕರಿಸಲ್ಪಟ್ಟ ಲೆಹೆಂಗಾ:

ಈ ಬಗೆಯ ಲೆಹೆಂಗಾದ ವಿನ್ಯಾಸದಲ್ಲಿ ಬಟ್ಟೆಯ ಅಡ್ಡಡ್ಡವಾಗಿರುವ ಪಟ್ಟಿಗಳನ್ನು ಹೊಳೆಯುವ ಭಾಗದ ಉದ್ದಕ್ಕೂ ಜೋಡಿಸಲಾಗಿರುತ್ತದೆ. ಇದು ಹೊಳೆಯುವ ಭಾಗದ ಅಳತೆಯ ಗಾತ್ರವನ್ನು ಹೆಚ್ಚಿಸುತ್ತದೆ. ಮೆಹೆಂದಿ, ಹಳದಿ ಅಥವಾ ಸಂಗೀತ ಸಮಾರಂಭಗಳಿಗಾಗಿ ಈ ಲೆಹೆಂಗಾವು ಪರಿಪೂರ್ಣ ಆಯ್ಕೆಯನ್ನಾಗಿ ಮಾಡುತ್ತದೆ. ಈ ವಿನ್ಯಾಸವು ಪಿಯರ್ ಹಣ್ಣಿನ ಆಕಾರದ ದೇಹಕ್ಕೆ ಅಥವಾ ಮರಳು ಗಡಿಯಾರ ಆಕಾರಕ್ಕೆ ಬಹು ಸುಂದರವಾಗಿ ಕಾಣುತ್ತದೆ.

A ಲೈನಿನ ಲೆಹೆಂಗಾ:

A ಲೈನಿನ ಅಂಚು ಈ ವರ್ಗದ ಲೆಹೆಂಗಾವನ್ನು ಎದ್ದುಕಾಣುವಂತೆ ಮಾಡುತ್ತದೆ. ಇದು ಸೊಂಟಕ್ಕೆ ಅಂಟಿಕೊಂಡಿರುತ್ತದೆ ಮತ್ತು ಕೆಳಭಾಗದಲ್ಲಿ ಹೊಳೆಯುತ್ತದೆ. ಇದು ಕಡಿಮೆ ಸಂಖ್ಯೆಯ ನೆರಿಗೆಗಳನ್ನು ಹೊಂದಿದೆ. ಇದನ್ನು ಧರಿಸಿ ಓಡಾಡುವುದು ತುಂಬಾ ಸುಲಭ. ಇದನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಲು ಕೆಳಭಾಗದಲ್ಲಿ ಭಾರವಾದ ಛೋಲಿಯನ್ನಾಗಲಿ ಅಥವಾ ಕೆಲವೊಂದು ಕಸೂತಿಯ ಕೆಲಸವನ್ನಾಗಲಿ ನೀವು ಮಾಡಿಸಬಹುದು. ನೀವು ಆಯತಾಕಾರದ ದೇಹವನ್ನು ಅಥವಾ ಪಿಯರ್ ಹಣ್ಣಿನ ಆಕಾರದ ದೇಹವನ್ನು ಹೊಂದಿದ್ದಲ್ಲಿ, ಅದು ನಿಮ್ಮನ್ನು ಅದ್ಭುತವಾಗಿ ಕಾಣುವಂತೆ ಮಾಡುತ್ತದೆ.

ಷರಾರಾಕಟ್ ಲೆಹೆಂಗಾ:

ಇವುಗಳನ್ನು ಅಂಚಿನ ಮಧ್ಯಭಾಗದ ಶೈಲಿಯಲ್ಲಿ ಹೊಲಿಯಲಾಗಿರುತ್ತದೆ. ಇದು ದೊಡ್ಡ ಗಾತ್ರದ ಪಲಾಜೋನಂತೆ ಇದೆ, ಆದರೆ ನೋಡಲು ಲೆಹೆಂಗಾದಂತೆ ಕಾಣುತ್ತದೆ. ಉದ್ದವಾದ ಕುರ್ತಿಯ ಜೊತೆಗೆ ಇದನ್ನು ಸಂಯೋಜಿಸಿರಲಾಗುತ್ತದೆ. ಇದನ್ನು ಹೆಚ್ಚಾಗಿ ಮುಸ್ಲಿಂ ವಧುಗಳು ಧರಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಿಂದೂ ವಧುಗಳು ಕೂಡ ಈ ವಿಭಿನ್ನವಾದ ನೋಟಕ್ಕಾಗಿ ಇದನ್ನು ಧರಿಸಲು ಆರಂಭಿಸಿದ್ದಾರೆ. ಇದು ಯಾವುದೇ ಆಕಾರವಿರುವ ದೇಹಕ್ಕೂ ಧರಿಸಬಹುದು. ಆದಾಗ್ಯೂ, ನೀವು ತುಂಬಾ ತೆಳುವಾದ ಕಾಲುಗಳನ್ನು ಹೊಂದಿರುವ ಪುಟ್ಟ ಚೆಲುವೆಯ ಮಹಿಳೆಯಾಗಿದ್ದರೆ, ಕೆಲವು ಇತರ ಮಾದರಿಗಳನ್ನು ಪ್ರಯತ್ನಿಸಿ.

ಆದ್ದರಿಂದ, ಶೀಘ್ರದಲ್ಲೇ ವಧುವಾಗಬೇಕೆಂದು ಇರುವವರಿಗಾಗಿ, ನೀವು ಆಯ್ಕೆ ಮಾಡಬಹುದಾದ ಬಹಳಷ್ಟು ಶೈಲಿಗಳಿವೆ. ನಿಮ್ಮ ಪರಿಪೂರ್ಣ ದೇಹ ಪ್ರಕಾರಕ್ಕೆ ಹೊಂದುವ ಮೂಲಕ ಲೆಹೆಂಗಾವನ್ನು ಅಭಿನಂದಿಸಿ! ಸುಂದರವಾದ ಮುಗುಳುನಗೆಯನ್ನು ಬೀರುವ ಮೂಲಕ ಆ ದಿನವನ್ನು ಬಹುತೇಕ ವಿಶೇಷವನ್ನಾಗಿ ಮಾಡಿ.

ಎಂದೆಂದಿಗೂ ಸಂತೋಷದಿಂದಿರಿ!

You may be interested

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ
Matrimonial
207 views
Matrimonial
207 views

ಶಕ್ತಿ ವಿಜ್ಞಾನದ ಸಹಾಯದಿಂದ ಮದುವೆಯು ವಿಳಂಬವಾಗುವ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ

Saral Marriage - April 6, 2018

ಮದುವೆ ಎಂಬುದು ಎರಡು ಆತ್ಮಗಳ ನಡುವಿನ ಒಂದು ಮಂಗಳಕರ ಸಂಬಂಧವಾಗಿದೆ. ಅದು ಮರಣದ ಕೊನೆಯ ಘಳಿಗೆಯತನಕವೂ ಮದುವೆಯಾದ ಗಂಡುಹೆಣ್ಣಿಗೆ ಒಂದು ಬಂಧದಲ್ಲಿ ಸೇರಿಕೊಳ್ಳಲು ಅವಕಾಶ ನೀಡುತ್ತದೆ. ಈ ಒಂದು ಸವಿಘಳಿಗೆಯಲ್ಲಿ ಅವರವರ ಸಂಬಂಧಿಗಳು ಒಟ್ಟಾಗಿ ಒಂದೆಡೆ ಸೇರಿ…

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ
Match Making
236 views
Match Making
236 views

ದಿಕ್ಕುಗಳ ವಿಜ್ಞಾನವು ವಿವಾಹದಲ್ಲಿ ವಿಳಂಬವಾಗುವ ಸಮಸ್ಯೆಯನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ನೋಡಿ

Saral Marriage - April 6, 2018

"ಮದುವೆಗಳು ಸ್ವರ್ಗದಲ್ಲಿ ನಿಶ್ವಯಿಸಿರುತ್ತವೆ" ಎಂದು ಒಂದು ಜನಪ್ರಿಯ ಗಾದೆಯು ಹೇಳುತ್ತದೆ. ಹಾಗೂ ಅದನ್ನು ನಮ್ಮಲ್ಲಿ ಬಹುತೇಕ ಮಂದಿ ಒಪ್ಪಿಕೊಳ್ಳುತ್ತೇವೆ ಮತ್ತು ಈ ಉಲ್ಲೇಖವನ್ನು ದೃಢೀಕರಿಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಒಮ್ಮೆ ಜರುಗುವ ಅಮೃತ-ಘಳಿಗೆಯಾಗಿರುತ್ತದೆ, ಹಾಗಾಗಿ ಒಬ್ಬರಿಗೊಬ್ಬರು ಸಹಜೀವನ…

ವಿವಾಹಕ್ಕಾಗಿ ಅರಳೀ ಮರದ ಪೂಜೆ
Astrology in Marriage
241 views
Astrology in Marriage
241 views

ವಿವಾಹಕ್ಕಾಗಿ ಅರಳೀ ಮರದ ಪೂಜೆ

Saral Marriage - April 6, 2018

ಅರಳೀ ಮರವು ಜ್ಯೋತಿಷ್ಯ ಶಾಸ್ತ್ರದ ಮಾನಸಿಕ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತದೆ ಹಾಗೂ ಇದು ಗುರುಗ್ರಹದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದಿರುತ್ತದೆ. ಗುರುಗ್ರಹವು ಅತ್ಯಂತ ಸರಿದೂಗಿಸುವ ಗ್ರಹವಾಗಿದ್ದು, ಅದು ಲಾಭದಾಯಕತೆಯನ್ನೂ ಮತ್ತು ವಿನಯಶೀಲತೆಯಿಂದ ಕೂಡಿದ ಆಕರ್ಷಣೆಗಳನ್ನು ಮನೆಯೊಳಗೆ ತರುವಲ್ಲಿ ಪರಿಣಾಮಕಾರಿಯಾಗಿದೆ…

Leave a Comment

Your email address will not be published.

Most from this category